ಹೊಸ ಮುಖದ ಬಗ್ಗೆ ರಾಹುಲ್ ಗಾಂಧಿ ಒಲವು. ಕೊಡಗಿನಲ್ಲಿ ಪೊನ್ನನ್ನ,ಡಾ. ಮಂತರ್ ಗೌಡ, ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಬಹುತೇಕ ಫಿಕ್ಸ್.
ಬೆಂಗಳೂರು: ಕಾಂಗ್ರೆಸ್ನ ನ ಅಭ್ಯರ್ಥಿಗಳು ಯಾರು ಆಗಬಹುದು ಎಂಬ ಕುತೂಹಲದ ನಡುವೆ ರಾಹುಲ್ ಗಾಂಧಿ ನಡೆಸಿರುವ ಆಂತರಿಕ ಸಮೀಕ್ಷೆಯ ವರದಿ ಈಗ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ. ಆ ಪ್ರಕಾರ ಹೊಸ ಮುಖಗಳಿಗೆ ಆದ್ಯತೆ ನೀಡಲು ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಬಗ್ಗೆ ಮಾತನಾಡಿದ್ದಾರೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಈ ಆಧಾರದ ಮೇಲೆ ಕೊಡಗಿನ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫಿಕ್ಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಹೈಕಮಾಂಡ್ ಮೂಲಗಳ ಪ್ರಕಾರ ವಿರಾಜಪೇಟೆ ಕ್ಷೇತ್ರಕ್ಕೆ ಮಾಜಿ ಅಡಿಷನಲ್ ಅಡ್ವಕೇಟ್ ಜನರಲ್ ಎಎಸ್ ಪೊನ್ನಣ್ಣ ಫಿಕ್ಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಟ್ರಸ್ಟ್ ಮೂಲಕ ನೂರಾರು ಜನರಿಗೆ ಸಹಾಯ ಮಾಡಿದ ಪೊನ್ನನ್ನ ವಿರಾಜಪೇಟೆಯಲ್ಲಿ ಇಮೇಜ್ ಇರುವ ಅಭ್ಯರ್ಥಿಯಾಗಿದ್ದಾರೆ.
ಅದೇ ರೀತಿ ಮಡಿಕೇರಿ ಕ್ಷೇತ್ರಕ್ಕೆ ಕರ್ನಾಟಕದಲ್ಲಿ ಗಮನ ಸೆಳೆದ ಅಭಿವೃದ್ಧಿ ಚಿಂತಕ ಎಂದು ಖ್ಯಾತಿಗಳಿಸಿದ ಡಾ. ಮಂತರ್ ಗೌಡ ಫಿಕ್ಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ತಂದೆ ಜೆಡಿಎಸ್ ಅಭ್ಯರ್ಥಿಯಾಗುತ್ತಿರುವ ಬಗ್ಗೆ ಹೈಕಮಾಂಡ್ ತಲೆಕೆಡಿಸಿಕೊಳ್ಳದೆ ಯುವ ನಾಯಕ ಡಾ. ಮಂತರ್ ಗೌಡ ರವರನ್ನು ಫಿಕ್ಸ್ ಮಾಡಿದೆ ಎಂದು ಹೈಕಮಾಂಡ್ ಮೂಲಗಳಿಂದ ತಿಳಿದುಬಂದಿದೆ. ಜಾರಕಿಹೊಳಿ, ಬಚ್ಚೇಗೌಡ ಕುಟುಂಬ ಬೇರೆ ಪಕ್ಷದಲ್ಲಿ ಇದ್ದಾರೆ. ಹೈಕಮಾಂಡ್ ಗೆ ಶಕ್ತಿಶಾಲಿ ಯುವ ನಾಯಕತ್ವ ಭವಿಷ್ಯದ ಕಾಂಗ್ರೆಸ್ ಗೆ ಅಗತ್ಯ ಎಂಬುದು ತಿಳಿದಿದೆ, ಉಳಿದ ವಿಷಯಗಳು ಅಲ್ಲ ಎಂದು ಹೈಕಮಾಂಡಿನ ಹಿರಿಯ ನಾಯಕರು ಒಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಬೆಳ್ತಂಗಡಿ ಕ್ಷೇತ್ರಕ್ಕೆ ಹೊಸಮುಖವಾದ ರಕ್ಷಿತ ಶಿವರಾಂ ಬಹುತೇಕ ಫಿಕ್ಸ್ ಆಗಿದೆ ಎಂದು ತಿಳಿದುಬಂದಿದೆ. ಬೆಸ್ಟ್ ಫೌಂಡೇಶನ್ ನ ಮೂಲಕ ನೂರಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿರುವ ರಕ್ಷಿತ್ ಶಿವರಾಂ ಬೆಳ್ತಂಗಡಿ ಅಭ್ಯರ್ಥಿ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಹೊಸ ಮುಖಗಳ ಪಟ್ಟಿಯನ್ನು ತಂದು ಅದರ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪಟ್ಟಿಯಲ್ಲಿ ಪೊನ್ನನ್ನ, ಮಂಥರ್ ಗೌಡ, ರಕ್ಷಿತ್ ಶಿವರಾಂ ಇರುವುದು ಈಗ ಕುತೂಹಲ ಮೂಡಿಸಿದೆ. ಈ ಸಮರ್ಥ ನಾಯಕರುಗಳ ಕೈಗೆ ಕಾಂಗ್ರೆಸ್ ನಾಯಕತ್ವ ಕೊಡಲು ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.