ಶನಿವಾರ, ಏಪ್ರಿಲ್ 27, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೆಲ್ಮೆಟ್‌ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್‌ ತೆಗೆದುಕೊಂಡ ಮಹಿಳೆ

Twitter
Facebook
LinkedIn
WhatsApp
ಹೆಲ್ಮೆಟ್‌ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್‌ ತೆಗೆದುಕೊಂಡ ಮಹಿಳೆ

ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ (Traffic Rules) ಉಲ್ಲಂಘಿಸಿದರೆ ಬುದ್ದಿಮಾತು ಹೇಳಿ ಜಾಗೃತಿ ಮೂಡಿಸಬೇಕಾದ ಪೊಲೀಸ್‌ ಇಲಾಖೆಯವರೇ ತಪ್ಪು ಮಾಡಿ ಟೀಕೆಗೆ ಗುರಿಯಾಗಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸ್ಕೂಟಿಯಲ್ಲಿ ಹೆಲ್ಮೆಟ್‌ ಕೂಡ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸ್‌ ಪೇದೆಗಳಿಗೆ ಮಹಿಳೆಯೊಬ್ಬರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮೂವರು ಮಹಿಳಾ ಪೊಲೀಸ್‌ ಪೇದೆಗಳು ಹೆಲ್ಮೆಟ್‌ ಇಲ್ಲದೇ ಸ್ಕೂಟಿಯಲ್ಲಿ ತ್ರಿಬಲ್‌ ರೈಡಿಂಗ್‌ ಬಂದಿದ್ದಾರೆ. ಮತ್ತೊಂದು ಸ್ಕೂಟಿಯಲ್ಲಿ ಇನ್ನಿಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ. ಇದನ್ನು ಗಮನಿಸಿದ ಮಹಿಳೆಯೊಬ್ಬರು, “ರೂಲ್ಸ್ ಮಾಡೊರೂ ನೀವೇ.. ಬ್ರೇಕ್ ಮಾಡೊರೂ ನೀವೇ..ʼ ಅಂತಾ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ದೃಶ್ಯವನ್ನು ವೀಡಿಯೋ ಕೂಡ ಮಾಡಿದ್ದಾರೆ.

ಮಹಿಳೆ ರೇಗುತ್ತಿದ್ದಂತೆಯೇ ಹಿಂಬದಿ ಸವಾರರು ಸ್ಕೂಟಿಯಿಂದ ಇಳಿದಿದ್ದಾರೆ. “ತುರ್ತು ಕೆಲಸ ಇತ್ತು. ಅದಕ್ಕಾಗಿ ಹೆಲ್ಮೆಟ್‌ ಇಲ್ಲದೇ ಬಂದಿದ್ದೇವೆ” ಎಂದು ಉಡಾಫೆ ಉತ್ತರ ಕೂಡ ಮಹಿಳಾ ಪೊಲೀಸರು ನೀಡಿದ್ದಾರೆ.

“ನೀವು ಏನ್ ಏನ್ ರೂಲ್ಸ್ ಬ್ರೇಕ್ ಮಾಡಿದೀರಾ ನೋಡಿಕೊಳ್ಳಿ. ದಯವಿಟ್ಟು ಗಾಡಿಯಿಂದ ಇಳಿಯಿರಿ, ಹೆಲ್ಮೆಟ್ ಹಾಕಿಕೊಳ್ಳಿ. ಇವರೇ ರೂಲ್ಸ್ ಮಾಡ್ತಾರೇ ಅಂತ ಹೇಳಲ್ವಾ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಮಹಿಳೆ ಈ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೋ ವೈರಲ್‌ ಆಗಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ