ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ
ತಮಿಳುನಾಡು: ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಚೆನ್ನಾಗಿ ಥಳಿಸಿ ಫ್ಲೈ ಓವರ್‌ನಿಂದ ಕೆಳಗೆ ತಳ್ಳಿ ಕೊಲೆಗೆ ಯತ್ನಿಸಿದ ವಿಡಿಯೋ ವೈರಲ್(Viral Video) ಆಗಿದ್ದ ಬೆನ್ನಲ್ಲೇ ಇದೀಗ ತಮಿಳುನಾಡಿ(Tamil nadu)ನಲ್ಲಿ ಮತ್ತೊಂದು ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಾಪಿ ಮಗನೋರ್ವ ತನ್ನ ತಂದೆಯ ಮುಖಕ್ಕೆ ಒಂದೇ ಸಮನೇ ಗುದ್ದಿ ಕ್ರೌರ್ಯ ಮೆರೆದಿರುವ ಘಟನೆ ತಮಿಳುನಾಡಿನ ಪೆರಂಬಲೂರಿ(Perambaluru)ನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ತಂದೆ ಸ್ಥಳದಲ್ಲೇ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಕೃಷ್ಣಪುರಂನಲ್ಲಿ ಈ ಭೀಕರ ಘಟನೆ ನಡೆದಿದ್ದು, 68ವರ್ಷದ ಕುಲಂಡೈವೇಲು ಎಂಬ ವ್ಯಕ್ತಿಯ ಮೇಲೆ ಆತನ ಮಗ 40ವರ್ಷದ ಸಂತೋಷ್ ಎಂಬಾತ ಮುಖಾಮೂತಿ ನೋಡದೇ ಚಚ್ಚಿದ್ದಾನೆ. ಕುಲಂಡೈವೇಲು ಶ್ರೀ ಅಮೃತ ಸಾಗೋ ಎಂಬ ಅಕ್ಕಿ ಗಿರಣಿ ನಡೆಸುತ್ತಿದ್ದರು. ಅದರ ಅಧಿಕಾರವನ್ನು ತನಗೆ ವಹಿಸುವಂತೆ ಆಗಾಗ ಸಂತೋಷ್ ಕಿರುಕುಳ ನೀಡುತ್ತನಂತೆ. ಇದೇ ವಿಚಾರಕ್ಕೆ ಕೋಪದಲ್ಲಿ ತಂದೆ ಮುಖಕ್ಕೆ ಗುದ್ದಿ ಆತನ ಸಾವಿಗೆ ಸಂತೋಷ್ ಕಾರಣನಾಗಿದ್ದಾನೆ. ತಂದೆ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರೂ ಬಿಡದ ಸಂತೋಷ್ ಬಿಡದೇ ಮುಖಕ್ಕೆ ಗುದ್ದಿದ್ದಾನೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಆತನನ್ನು ತಡೆದು ಕುಲಂಡೈವೇಲು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಫೆಬ್ರುವರಿ 16ರಂದು ಈ ಘಟನೆ ನಡೆದಿದ್ದು, ಒಂದು ತಿಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಲಂಡೈವೇಲು ಕೊನೆಯುಸಿರೆಳೆದಿದ್ದಾರೆ.
ಕುಲಂಡೈವೇಲು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರು ಮೊದಲಿಗೆ ತಮ್ಮ ಮಗನ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಅದನ್ನು ಹಿಂಪಡೆದಿದ್ದರು ಎನ್ನಲಾಗಿದೆ. ಇದೀಗ ಮತ್ತೆ ಕುಟುಂಬಸ್ಥರು ಸಂತೋಷ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಅವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಪಿ ಮಗನ ಕೃತ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.
ಎರಡು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ಕೊಯಂಬೆಡು ಸೇತುವೆ ಬಳಿ ವ್ಯಕ್ತಿಯೊಬ್ಬ ಪತ್ನಿಯನ್ನು ಥಳಿಸಿ ನಡು ಫ್ಲೈ ಓವರ್ ನಿಂದ ಕೆಳಗೆ ಎಸೆಯಲು ಯತ್ನಿಸಿದ್ದ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು. ಬಳಿಕ ಆರೋಪಿ ರೋಶನ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
TW: Violence
— Akassh Ashok Gupta (@peepoye_) April 28, 2024
Sons beats father to death for property. This monster needs to be arrested ASAP
Age of the son named Santhosh is 40 years old and lived with his wife and had a dispute with his father Kulanthaivelu in Perambalur, Tamil Nadu over property!pic.twitter.com/d0OM0Nw0oO