ಹುಡುಗಿಯರನ್ನು ಚುಡಾಯಿಸಿಬೇಡ ಎಂದಿದ್ದಕ್ಕೆ ಅಪಹರಿಸಿ ಹತ್ಯೆ
Twitter
Facebook
LinkedIn
WhatsApp
ಮೈಸೂರು: ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು. ವ್ಯಕ್ತಿಯನ್ನು ಅಪಹರಿಸಿ (Kidnap) ಕೊಲೆ ಮಾಡಿದ ವಿಲಕ್ಷಣ ಘಟನೆಯೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ.
ಮೃತನನ್ನು ಸಯ್ಯದ್ ಮನ್ಸೂರ್ (32) ಎಂದು ಗುರುತಿಸಲಾಗಿದೆ. ಇವರು ಮೈಸೂರಿ (Mysuru) ನ ಕಲ್ಯಾಣಗಿರಿ ನಿವಾಸಿ. ಭಾನುವಾರದಿಂದ ಮನ್ಸೂರ್ ನಾಪತ್ತೆಯಾಗಿದ್ದು, ಎನ್ ಆರ್ ಮೊಹಲ್ಲಾದ ಜಬೀ ಸೈಯದ್ ಝೈನುಲ್ಲಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಮನ್ಸೂರ್ ಕೊಲೆಯಾಗಿ ಮೃತದೇಹ ಪತ್ತೆಯಾಗಿದೆ.
ಕೊಲೆಯಾಗಿದ್ದು ಯಾಕೆ..?: ಜಬೀ ಎಂಬಾತ ಹುಡುಗಿಯರನ್ನು ಚುಡಾಯಿಸುತ್ತಿದ್ದನು. ಇದನ್ನು ಗಮನಿಸಿದ್ದ ಮನ್ಸೂರ್, ಜಬೀಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಜಬೀ, ಮನ್ಸೂರ್‍ನನ್ನು ಕಿಡ್ನಾಪ್ ಮಾಡಿದ್ದಾನೆ. ನಂತರ ಜಬೀ ಹಾಗೂ ಝೈನುಲ್ಲಾ ಮತ್ತೆ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಇದೀಗ ಪಾಂಡವಪುರ ನಾಲೆಯಲ್ಲಿ ಮನ್ಸೂರ್ ಶವ ಪತ್ತೆಯಾಗಿದೆ.
ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.