![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಮಣಿಪಾಲ: ಜಿಲ್ಲೆಯ ಉತ್ಸಾಹಿ ಯುವ ಸಾಹಸಿ ಬೈಕ್ ಕ್ರೀಡಾಳುಗಳಾದ ಖ್ಯಾತ ಯೂಟ್ಯೂಬರ್ ಹಾಗೂ ಶಟರ್‌ಬಾಕ್ಸ್ ಫಿಲ್ಮ್ಸ್ ಪ್ರಾಯೋಜಕರಾದ ಸಚಿನ್ ಮತ್ತು ಮಣಿಪಾಲದ ಯುವ ಉದ್ಯಮಿ ಹಾಗೂ ಸಾಹಸ ಬೈಕಿಂಗ್ ಕ್ರೀಡಾಪಟು ಅರ್ಜುನ್ ಪೈ ಅವರು ಬೈಕ್‌ನಲ್ಲಿ ಪ್ರವಾಸ ಕೈಗೊಂಡು ಇಂಡೋ-ಚೀನಾ ಗಡಿ ಪ್ರದೇಶದ 15,300 ಅಡಿ ಎತ್ತರದ ಝುಪಾಕ್‌ನಲ್ಲಿ ತುಳುನಾಡ ಧ್ವಜವನ್ನು ಹಾರಿಸಿ ತುಳು ಪ್ರೇಮ ಮೆರೆದಿದ್ದಾರೆ.
ಹೊಸದಿಲ್ಲಿಯಿಂದ ಈ ಬೈಕ್ ಪ್ರವಾಸ ಪ್ರಾರಂಭಿಸಿದ ಅವರು, 1,900 ಕಿ.ಮೀ ದೂರ ಕ್ರಮಿಸಿ ಹಿಕ್ಕಿಮ್, (12,270 ಅಡಿ ಎತ್ತರದಲ್ಲಿ ವಿಶ್ವದ ಅತೀ ಎತ್ತರದಲ್ಲಿರುವ ಪೋಸ್ಟ್ ಆಫೀಸ್) ಮತ್ತು 11,320 ಅಡಿ ಎತ್ತರದ ಇಂಡೋ ಚೈನಾ ಗಡಿಯ ಕೊನೆಯ ಗ್ರಾಮವಾದ ಚಿಕ್ಟುಲ್ ಗ್ರಾಮಕ್ಕೂ ಭೇಟಿ ನೀಡಿದರು.
ಬೈಕ್ ಯಾತ್ರಾ ತಂಡದಲ್ಲಿ ಅನ್ನಿ ಅರುಣ್ ಮತ್ತು ಸಾಯಿ ಅವರೂ ಇದ್ದರು. ಅರ್ಜುನ್ ಮತ್ತು ಇವರು ಹೊಸದಿಲ್ಲಿಯಿಂದ ಮಾ.1ರಂದು ಬೈಕ್ ಯಾತ್ರೆಯನ್ನು ಪ್ರಾರಂಭಿಸಿ 1900 ಕಿ.ಮೀ. ಕ್ರಮಿಸಿ ಸಿಲಿಗುರಿಯನ್ನು ತಲುಪಿದರು. ಮೊದಲ ಹಂತದ ಬೈಕ್ ಯಾತ್ರೆಯಲ್ಲಿ ದೇಶದಾದ್ಯಂತದಿಂದ ಆಗಮಿಸಿದ 15 ಬೈಕರ್‌ಗಳ ತಂಡ ಪಾಲ್ಗೊಂಡಿತ್ತು. ಮಾ.16ರಿಂದ ಹಿಮಾಚಲ ಪ್ರದೇಶದ ದುರ್ಗಮ ಹಿಮಚ್ಚಾದ್ದಿತ ಪ್ರದೇಶಗಳಲ್ಲಿ ಬೈಕ್ ಯಾತ್ರೆಯನ್ನು ಉಡುಪಿಯ ಯುವಕರ ತಂಡ ಮುಂದುವರಿಸಿತು ಎಂದು ಮಣಿಪಾಲದ ಸೆಲ್ಕೋ ಜಿಎಂ ಜಗದೀಶ್ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist