ಶುಕ್ರವಾರ, ಜುಲೈ 5, 2024
ದರ್ಶನ್​ ಬಂಧನದ ಬಳಿಕ ಮೊದಲ ಬಾರಿ ಮೌನ ಮುರಿದ ಸುಮಲತಾ ಅಂಬರೀಷ್​!-ಬಿಹಾರದಲ್ಲಿ 15 ದಿನಗಳಲ್ಲಿ 10 ಸೇತುವೆ ಕುಸಿತ!-ನಟ ದರ್ಶನ್ ಗೆ ಜು.18 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ!-ಶಾಸಕ ಡಾ. ಮಂತರ್ ಗೌಡ ಸೂಚನೆ.ಕೊಡಗಿನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರವಾಸಿ ಮಾರ್ಗದರ್ಶಕ ಹುದ್ದೆಗೆ ನೇಮಕ ಕುರಿತಂತೆ ಪ್ರಕಟಣೆ ಹೊರಡಿಸಿದ ಪ್ರವಾಸೋದ್ಯಮ ಇಲಾಖೆ.-ಕನ್ನಡದಲ್ಲಿ ಹವಾ‌ ಎಬ್ಬಿಸಿದೆ ಸಾಂಕೇತ್ ಚಿತ್ರದ ಟೀಸರ್. ಸೂಪರ್ ಅಂದ್ರು ವೀಕ್ಷಕರು!-ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ನಿಧನ.!-ವಿಶ್ವಕಪ್ ಕಿರೀಟ ಗೆದ್ದ ಬೆನ್ನಲ್ಲೇ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ T20 ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ!-ಬುಮ್ರ, ಹಾರ್ದಿಕ್ ಮ್ಯಾಜಿಕ್ ಬೌಲಿಂಗ್; ಸೂರ್ಯಕುಮಾರ್ ಸಕತ್ ಕ್ಯಾಚ್ - ಭಾರತಕ್ಕೆ ವಿಶ್ವಕಪ್-ಬಹು ವರ್ಷಗಳ ಕನಸು ನನಸು; ಟಿ-20 ವಿಶ್ವಕಪ್ ಕಿರೀಟ ಗೆದ್ದ ಭಾರತ-ಪ್ರವಾಸಿಗರ ಗಮನಕ್ಕೆ; ಕೊಡಗಿನ ಗಾಜಿನ ಸೇತುವೆ ಬಂದ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಿಂದುತ್ವದ ಭದ್ರಕೋಟೆ, ಅಯೋಧ್ಯೆಯ ರಾಮ ಮಂದಿರದ ಸ್ಥಳದಲ್ಲಿಯೇ ಬಿಜೆಪಿಗೆ ಸೋಲು!

Twitter
Facebook
LinkedIn
WhatsApp
ಹಿಂದುತ್ವದ ಭದ್ರಕೋಟೆ, ಅಯೋಧ್ಯೆಯ ರಾಮ ಮಂದಿರದ ಸ್ಥಳದಲ್ಲಿಯೇ ಬಿಜೆಪಿಗೆ ಸೋಲು!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಿಜೆಪಿಯ ಭದ್ರಕೋಟೆ, ಹಿಂದುತ್ವದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಅಯೋಧ್ಯೆಯ ಅವದ್ ಪ್ರದೇಶದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಎಸ್‌ಪಿ ವಿರುದ್ಧ ಸೋಲನ್ನ ಅನುಭವಿಸಿದೆ ಎಂದು ತಿಳಿದುಬಂದಿದೆ.

ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯುಪಿಯಲ್ಲಿ ಗೆದ್ದವರೇ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎಂಬ ರಾಜಕೀಯ ವಿಶ್ಲೇಷಣೆಯೂ ಇದೆ. ಆ ನಿಟ್ಟಿನಲ್ಲಿ ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಪಾರುಪತ್ಯ ಸಾಧಿಸಿದ್ದ ಬಿಜೆಪಿ ಈ ಬಾರಿ ಯುಪಿಯಲ್ಲಿ ಮುಗ್ಗರಿಸಿದೆ ಅಂತಲೇ ಹೇಳಬಹುದು. 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಎಣಿಕೆ ಇನ್ನೂ ನಡೆಯುತ್ತಿದೆ. ಆದರಾಚೆಗೆ ಬಹುತೇಕ ಕ್ಷೇತ್ರಗಳಲ್ಲಿ ಕೇಸರಿ ಅಭ್ಯರ್ಥಿಗಳು ಭಾರೀ ಹಿನ್ನೆಲೆ ಅನುಭವಿಸುತ್ತಿದ್ದಾರೆ. ಬಿಜೆಪಿ ಲೆಕ್ಕಾಚಾರ ಹಳಿ ತಪ್ಪಿರುವುದು ಸ್ಪಷ್ಟವಾಗುತ್ತಿದೆ. ಈ ಬಾರಿ ರಾಜಕೀಯ ಸಮೀಕರಣಗಳು ಸಂಪೂರ್ಣ ಬದಲಾಗಿವೆ.

543 ಸದಸ್ಯರ ಲೋಕಸಭೆಗೆ 80 ಸಂಸದರನ್ನು ಕಳುಹಿಸುವ ರಾಜಕೀಯವಾಗಿ ನಿರ್ಣಾಯಕ ರಾಜ್ಯವಾದ ಉತ್ತರಪ್ರದೇಶದಲ್ಲಿ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಬಿಜೆಪಿ ನೆಕ್ ಮತ್ತು ನೆಕ್ ಫೈಟ್‌ನಲ್ಲಿ ಸಿಲುಕಿಕೊಂಡಿದೆ. ಎಸ್​ಪಿ ಪ್ರತಿಪಕ್ಷ INDIA ಬ್ಲಾಕ್‌ನ ಭಾಗವಾಗಿದೆ. ಮಧ್ಯಾಹ್ನ 12 ಗಂಟೆಗೆ ಸಮಾಜವಾದಿ ಪಕ್ಷ 36, ಬಿಜೆಪಿ 33, ಕಾಂಗ್ರೆಸ್ 7 ಮತ್ತು ಆರ್‌ಎಲ್‌ಡಿ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಸ್‌ಪಿ ಮತ್ತು ಕಾಂಗ್ರೆಸ್ ಇಂಡಿಯಾ ಬ್ಲಾಕ್‌ನಲ್ಲಿ ಪಾಲುದಾರರಾಗಿದ್ದರೆ, ಬಿಜೆಪಿ ಮತ್ತು ಜಯಂತ್ ಚೌಧರಿ ಅವರ ಆರ್‌ಎಲ್‌ಡಿ ಚುನಾವಣೆಗೆ ಮುನ್ನ ಮೈತ್ರಿ ಮಾಡಿಕೊಂಡಿದೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ