ಹಾಸನ: ಪ್ರಜ್ವಲ್ ರೇವಣ್ಣಗೆ ಹಿನ್ನಡೆ, ಶ್ರೇಯಸ್ ಪಟೇಲ್ ಮುನ್ನಡೆಯುತ್ತ..!
ಲೋಕಸಭೆ ಚುನಾವಣೆ ಫಲಿತಾಂಶ 2024 : 295 ಸ್ಥಾನಗಳಲ್ಲಿ ಎನ್ಡಿಎ, 229 ರಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆ
ಬಾರಿ ಕುತೂಹಲ ಕೆರಳಿಸಿದ ಹಾಸನ ಲೋಕಸಭಾ ಕ್ಷೇತ್ರವು ಈಗ ತಾನೆ ಬಂದ ವರದಿಯಂತೆ ಶ್ರೇಯಸ್ ಪಟೇಲ್ ಸುಮಾರು 24 ಸಾವಿರ ಮತಗಳ ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ ಇನ್ನು ಹಲವಾರು ಸುತ್ತಿನ ಮತ್ತೆ ಎಣಿಕೆ ಬಾಕಿ ಇದ್ದು ಈ ಕ್ಷೇತ್ರ ಪೆನ್ ಡ್ರೈವ್ ಪ್ರಕಾರಣದಿಂದ ಇಡೀ ದೇಶದಂತ ಸದ್ದು ಮಾಡಿದ ಕ್ಷೇತ್ರವಾಗಿದ್ದು
ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಭಾರಿ ಮುನ್ನಡೆ ಹಿನ್ನೆಲೆ ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ‘ಕೈ’ ಅಭ್ಯರ್ಥಿ. ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿ.ಎನ್.ಚಂದ್ರಪ್ಪ.ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ನಿಂತ ಹೆಚ್ಡಿ ದೇವೇಗೌಡ ಅಳಿಯ ಡಾ.ಸಿ ಎನ್ ಮಂಜುನಾಥ್ 1,17,879 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮನೆ ಮಾಡಿದೆ
ದಕ್ಷಿಣ ಕ್ಷೇತ್ರದ ಜನರ ಆರ್ಶೀವಾದದಿಂದ ಈ ಬಾರಿ ಕೂಡ ಗೆಲುವಾಗ್ತಿದೆ. ತೇಜಸ್ವಿ ಸೂರ್ಯ ಮತ್ತೆ ಸಂಸದ ಆಗಬೇಕು ಅಂತಾ ಆರ್ಶೀವಾದ ಮಾಡಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ಅಭಿನಂದನೆ ಸಲ್ಲಿಸ್ತೀನೆ. ಮೊದಲಬಾರಿ ಗೆದ್ದಾಗ ಒಂದು ಲೆಟರ್ ಹೆಡ್ ಮಾಡೋದಕ್ಕೂ ಬರ್ತಿರಲಿಲ್ಲ. ಈ 5 ವರ್ಷ ಸಾಕಷ್ಟು ಕಲಿತಿದ್ದೇನೆ. ಇಡೀ ರಾಜ್ಯದ ಮತದಾರರು ಬಿಜೆಪಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ. 290 ಕ್ಷೇತ್ರದಲ್ಲಿ ಅಂತರದ ಡಿಫ್ರೆನ್ಸ್ ಇದೆ. ಇನ್ನೆರಡು ಗಂಟೆಯಲ್ಲಿ ಕ್ಲಿಯರ್ ಪಿಚ್ಚರ್ ಸಿಗುತ್ತೆ. ಪ್ರಧಾನಿ ಮೋದಿಯವರು ಮತ್ತೆ ಪ್ರಧಾನಿಯಾಗ್ತಾರೆ. ಹತ್ತು ವರ್ಷ ಹೇಗಿದ್ರೋ ಹಾಗೇ ಮುಂದುವರಿಸುತ್ತಾರೆ. ಒಂದು ವರ್ಷದ ಹಿಂದೆ ಸರ್ಕಾರ ಅಧಿಕಾರಕ್ಕೆ ಬಂದ್ರು ಕಾಂಗ್ರೆಸ್ ಕುಗ್ಗಿದೆ. ಒಂದೇ ವರ್ಷದಲ್ಲಿ ಜನಪ್ರಿಯತೆ ಕುಗ್ಗಿರೋದು ಅವರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ 12, ಶಿವಸೇನೆ (ಠಾಕ್ರೆ ಬಣ) 10, ಕಾಂಗ್ರೆಸ್ 9, ಎನ್‌ಸಿಪಿ (ಶರದ್ ಪವಾರ್ ಬಣ) 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ವಾರಾಣಸಿಯಲ್ಲಿ ಪ್ರಧಾನಿ ಮೋದಿ ಮುನ್ನಡೆ ಸಾಧಿಸಿದ್ದಾರೆ, ಕಾಂಗ್ರೆಸ್ ಅಜಯ್ ರಾವ್ ನಡುವೆ ತೀವ್ರ ಪೈಪೋಟಿ
ಹರ್ಯಾಣದಲ್ಲಿ ಬಿಜೆಪಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.