ಹಾಸನದಲ್ಲಿ ಪ್ರೀತಂ ಗೌಡಗೆ ಮುಖಭಂಗ; ಜೆಡಿಎಸ್ನ ಸ್ವರೂಪ್ ಭರ್ಜರಿ ಗೆಲುವು
ಹಾಸನದಲ್ಲಿ ಜೆಡಿಎಸ್ನ (JDS) ಸ್ವರೂಪ್ (Swaroop) ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದೇವೇಗೌಡರ ಕುಟುಂಬಕ್ಕೆ ಚಾಲೆಂಜ್ ಹಾಕಿದ್ದ ಪ್ರೀತಂಗೌಡಗೆ (Preetham Gowda) ಮುಖಭಂಗ ಆಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಹಾಸನ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದೇ ಪ್ರೀತಂ ಗೌಡ. ಗೆದ್ದೇ ಗೆಲ್ಲುವೆ ಎಂಬ ನಿರೀಕ್ಷೆಯೂ ಅವರಿಗಿತ್ತು. ಆದರೆ ಚುನಾವಣಾ ಫಲಿತಾಂಶ ಪ್ರಕಟವಾದಾಗ ನಡೆದದ್ದೇ ಬೇರೆ. ಇಲ್ಲಿ ಸ್ವರೂಪ್ ಸುಮಾರು ಎಂಟು ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾ
ಜೆಡಿಎಸ್ನಿಂದ ಭವಾನಿ ರೇವಣ್ಣ ನಿಲ್ಲಲು ಬಯಸಿದ್ದರಾದರೂ ಎಚ್.ಪಿ. ಸ್ವರೂಪ್ ಅವರಿಗೆ ಟಿಕೆಟ್ ಕೊಡಲಾಗಿದೆ. ಮಾಜಿ ಜೆಡಿಎಸ್ ಶಾಸಕ ಎಚ್.ಎಸ್. ಪ್ರಕಾಶ್ ಅವರ ಮಗ ಸ್ವರೂಪ್. ಬಿಜೆಪಿಯ ಪ್ರೀತಂ ಗೌಡ ಅವರು ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಇತ್ತ ದೇವೇಗೌಡರ ಕುಟುಂಬ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೆ ಬೆಂಬಲವಾಗಿ ನಿಂತಿದ್ದರಿಂದ ಇಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿದೆ.
ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ 2023 ಫಲಿತಾಂಶ
ಜೆಡಿಎಸ್: ಎಚ್.ಎ. ಸ್ವರೂಪ್- ಗೆಲುವು
ಬಿಜೆಪಿ: ಪ್ರೀತಂ ಗೌಡ
ಕಾಂಗ್ರೆಸ್: ರಂಗಸ್ವಾಮಿ
ಹಾಸನ ಕ್ಷೇತ್ರದ ಹಿಂದಿನ ಚುನಾವಣಾ ಇತಿಹಾಸ ನೋಡುವುದಾದರೆ 1957ರಿಂದ ಈಚೆ 2018ರವರೆಗೆ 14 ಚುನಾವಣೆಗಳು ಈ ಕ್ಷೇತ್ರದಲ್ಲಿ ನಡೆದಿವೆ. ಜೆಡಿಎಸ್ ಹಾಗೂ ಅದಕ್ಕೂ ಹಿಂದಿನ ಜನತಾ ಪಕ್ಷ ಅತಿ ಹೆಚ್ಚು ಬಾರಿ ಗೆದ್ದಿವೆ. ಕಾಂಗ್ರೆಸ್ 2 ಬಾರಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿಗಳೂ ಎರಡು ಬಾರಿ ಗೆದ್ದಿದ್ದಾರೆ.