ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಾವು ಕಚ್ಚಿ ಹೆಡ್​​​ ಕಾನ್ಸಟೇಬಲ್​​ ಸಾವು!

Twitter
Facebook
LinkedIn
WhatsApp
Ravi Bopara 3 9

ವಿಜಯವಾಡ: ಹಾವಿಗೆ ಪೊಲೀಸ್​ ಪೇದೆ ಆದರೇನು, ಶ್ರೀಸಾಮಾನ್ಯ ಮನುಷ್ಯ ಆದರೇನು. ಕಚ್ಚುವುದು ಅದರ ಬುದ್ಧಿಯಾಗಿರುವಾಗ ಯಾರಿಗೆ ಬೇಕಾದರೂ ಕಚ್ಚೀತು ಅದು. ಇನ್ನು ಸಾವು ಎಂಬ ಮಾಯೆ ಯಾವಾಗ, ಹೇಗೆ, ಯಾರಿಗೆ ಬೇಕಾದರೂ ಬರಬಹುದು! ಇಲ್ಲೂ ಅದೇ ಆಗಿರುವುದು ಭುಸುಗುಟ್ಟಿತ್ತಿರುವ ಹಾವೊಂದು ಹೆಡ್​​​ ಕಾನ್ಸಟೇಬಲ್​​ (Head constable) ಗೆ ಕಚ್ಚಿಯೇ ಬಿಟ್ಟಿದೆ (Snakebite). ದುರ್ದೃರ್ದೈವವೆಂದರೆ ಆ ಪೇದೆ ಸಾವಿಗೀಡಾಗಿದ್ದಾರೆ. ಇಷ್ಟಕ್ಕೂ ಅಷ್ಟೊಂದು ಬಲಾಢ್ಯ ಪೊಲೀಸ್​​ ಪೇದೆಯನ್ನು ಅದು ಹೇಗೆ ಹಾವು ಕಚ್ಚಿತು ಎಂಬುದೇ ಎಲ್ರನ್ನೂ ಕಾಡುವ ಪ್ರಶ್ನೆ.  ಗುಂಟೂರು ಜಿಲ್ಲೆಯ ತಲ್ಲೂರು ಜಗನಣ್ಣ ಲೇಔಟ್‌ನಲ್ಲಿ ಕಳೆದ ವಾರ ಹಾವು ಕಡಿತಕ್ಕೊಳಗಾದ ಪೊಲೀಸ್ ಪೇದೆಯೊಬ್ಬರು ಗುಂಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೊನೆಗೂ ಕೊನೆಯುಸಿರೆಳೆದಿದ್ದಾರೆ.

ಪೊಲೀಸರ ಪ್ರಕಾರ, ಪ್ರಕಾಶಂ ಜಿಲ್ಲೆಯ ತಲ್ಲೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಪವನ್ ಕುಮಾರ್ (34) ತಲ್ಲೂರು ಮಂಡಲದ ಜಗನಣ್ಣ ಲೇಔಟ್‌ನಲ್ಲಿ ಸೇವೆಗೆ ನಿಯೋಜಿಸಲ್ಪಟ್ಟಿದ್ದರು. ವಾರದ ಹಿಂದೆ ಸೋಮವಾರ ಮತ್ತು ಮಂಗಳವಾರ ಮಧ್ಯರಾತ್ರಿ ಅವರಿಗೆ ಹಾವು ಕಚ್ಚಿದೆ. ತಕ್ಷಣವೇ ಹಾವನ್ನು ಕೊಂದು, ಕಾನ್‌ಸ್ಟೆಬಲ್‌ನನ್ನು ಗುಂಟೂರಿನ ಜಿಜಿಎಚ್‌ಗೆ ದಾಖಲಿಸಲಾಯಿತು.

ನಂತರ ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಕಾನ್ಸ್‌ಟೇಬಲ್ ಪವನ್ ಕುಮಾರ್ ಅವರ ಮೃತದೇಹವನ್ನು ಚಿಮಕುರ್ತಿಯಲ್ಲಿ ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ