ಗುರುವಾರ, ಮಾರ್ಚ್ 28, 2024
ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!-ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ; ಚುನಾವಣೆಯ ರಣಕಹಳೆ ಶುರು.!-ಉಡುಪಿ: ನೇಜಾರಿನ ನಾಲ್ವರ ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಕೊಲೆ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ.!-ಜಿಲ್ಲೆಯಲ್ಲಿ ಸದ್ಯಕ್ಕೆ ರೇಶನಿಂಗ್ ಇಲ್ಲ; ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ-ಓವೈಸಿ ವಿರುದ್ದ ಸಾನಿಯಾ ಮಿರ್ಜಾಗೆ ಟಿಕೆಟ್? ಏನಿದು ಕಾಂಗ್ರೆಸ್ ಪ್ಲ್ಯಾನ್.!-ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ..!-ನಳೀನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೈ ತಪ್ಪಿದರೂ ಮಹತ್ವದ ಹುದ್ದೆ ಕೊಟ್ಟ ಹೈಕಮಾಂಡ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಾವಿನಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತ – ಸಂಚಾರಿ ಪೊಲೀಸರ ವಿರುದ್ದ ಆಕ್ರೋಶ

Twitter
Facebook
LinkedIn
WhatsApp
ಹಾವಿನಿಂದ ಹೆದ್ದಾರಿಯಲ್ಲಿ ಸರಣಿ ಅಪಘಾತ – ಸಂಚಾರಿ ಪೊಲೀಸರ ವಿರುದ್ದ ಆಕ್ರೋಶ

ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ಅಡ್ಡ ಬಂದ ಹಾವನ್ನು(Snake) ತಪ್ಪಿಸಲು ಹೋಗಿ ಟ್ರಕ್‌ ಚಾಲಕನೊರ್ವ ಸಡನ್ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ(Serial Accident) ಸಂಭವಿಸಿರುವ ಘಟನೆ ಬೆಂಗಳೂರು‌ – ಹೈದರಾಬಾದ್(Bengaluru – Hyderabad) ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿ ನಡೆದಿದೆ.

ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಕಂಟೈನರ್(Continer) ಟ್ರಕ್ ಬರುತ್ತಿತ್ತು. ಅಗಲಗುರ್ಕಿ ಗ್ರಾಮದ ಬಳಿ ಹೆದ್ದಾರಿಯ ನಡುರಸ್ತೆಯಲ್ಲಿ ಹಾವೊಂದು ರಸ್ತೆ ದಾಟುತ್ತಿತ್ತು. ಇದನ್ನು ಗಮನಿಸಿದ ಚಾಲಕ ಸಡನ್ ಆಗಿ ಟ್ರಕ್‌ ಬ್ರೇಕ್ ಹಾಕಿದ್ದಾನೆ.

ಪರಿಣಾಮ ಹಿಂದೆ ಇದ್ದ ಕಂಟೈನರ್ ಟ್ರಕ್, ಟಾಟಾ ಏಸ್, ಕಾರು, ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಸೇರಿದಂತೆ ಐದು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರವಾಗಿದೆ.

ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಮುಂದಿನ ಲಾರಿಗೆ ಡಿಕ್ಕಿ ಹೊಡೆದ ಕಾರಣ ಅದರಲ್ಲಿದ್ದ ಚಾಲಕನಿಗೆ ಸ್ಟೇರಿಂಗ್ ಹೊಟ್ಟೆ ತಗುಲಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ಪಕ್ಕದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ರಕ್ಷಣೆಗೆ ಧಾವಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ