ಮಂಗಳವಾರ, ಡಿಸೆಂಬರ್ 24, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಹಲವು ವರ್ಷಗಳ ನಿಧಾನಗತಿಯ ನಂತರ ಮತ್ತೆ ಆರಂಭವಾದ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪತ ಕಾಮಗಾರಿ-ತೆರವು ಕಾರ್ಯಾಚರಣೆ.

Twitter
Facebook
LinkedIn
WhatsApp
ಹಲವು ವರ್ಷಗಳ ನಿಧಾನಗತಿಯ ನಂತರ ಮತ್ತೆ ಆರಂಭವಾದ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪತ ಕಾಮಗಾರಿ-ತೆರವು ಕಾರ್ಯಾಚರಣೆ.

ಬಂಟ್ವಾಳ: ಸುಮಾರು ವರ್ಷಗಳ ನಿಧಾನಗತಿಯ ನಂತರ ಕರಾವಳಿಯಲ್ಲಿ ಹಳೆ ಯೋಜನೆಯೊಂದು ಮತ್ತೆ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಬಿರುಸಿನಿಂದ ಆರಂಭಗೊಂಡಿದ್ದು, ಕಲ್ಲಡ್ಕ ಪೇಟೆಯ ಇಕ್ಕೆಲಗಳ ಕಟ್ಟಡಗಳ ತೆರವು ಕಾರ್ಯ ನಡೆಯುತ್ತಿದೆ.

ಕಲ್ಲಡ್ಕದಲ್ಲಿ 6 ಲೇನ್ ಫ್ಲೈ ಓವರ್ ನಿರ್ಮಾಣಕ್ಕೆ ಪೂರ್ವಭಾವಿ ಕಾಮಗಾರಿ (ಪ್ರಿ ಕನ್‌ಸ್ಟ್ರಕ್ಷನ್ಸ್ ಆ್ಯಕ್ಟಿವಿಟಿ) ಆರಂಭಗೊಂಡಿದ್ದು, ಕಟ್ಟಡಗಳ ತೆರವು ಕಾರ್ಯ ಕಲ್ಲಡ್ಕದ‌ ಚಿತ್ರಣವನ್ನೇ ಬದಲಿಸುತ್ತಿದೆ.


ಕಾಮಗಾರಿಗೆ ಭರದ ತಯಾರಿ
ಬಿ.ಸಿ.ರೋಡಿನಿಂದ ಪೆರಿಯಶಾಂತಿವರೆಗಿನ 48 ಕಿ.ಮೀ. ಕಾಮಗಾರಿಯನ್ನು ಹೈದರಾಬಾದ್‌ನ ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ 1,100.88 ಕೋ.ರೂ.ಗಳಿಗೆ ವಹಿಸಿಕೊಂಡಿದೆ. ಕಲ್ಲಡ್ಕದಲ್ಲಿ ಮಾತ್ರ 6 ಲೇನ್‌ಗಳ ಫ್ಲೈ ಓವರ್ ಇರಲಿದೆ. ಪೆರಿಯಶಾಂತಿಯಿಂದ ಅಡ್ಡಹೊಳೆ ವರೆಗಿನ 15 ಕಿ.ಮೀ. ಕಾಮಗಾರಿಯನ್ನು 317 ಕೋ.ರೂ.ಗಳಿಗೆ ಮಹಾರಾಷ್ಟ್ರದ ಎಸ್.ಎಂ. ಔತಾಡೆ ಪ್ರೈ ಲಿ. ಕಂಪೆನಿ ನಿರ್ವಹಿಸಲಿದೆ. ಈಗಾಗಲೇ ಶಿರಾಡಿಯ ಉದನೆಯಲ್ಲಿ ಯಂತ್ರಗಳ ಅನುಷ್ಠಾನ ಕಾರ್ಯ ಆರಂಭಿಸಿದೆ.

ಅಳಿಸಿ ಹೋದ ಮಾರ್ಕಿಂಗ್:
ಹಲವು ಸಮಯದ ಹಿಂದೆಯೇ ಕಲ್ಲಡ್ಕದ ಕೆ.ಸಿ.ರೋಡ್‌ನಿಂದ ಕುದ್ರೆಬೆಟ್ಟು ವರೆಗೆ ಫ್ಲೈ ಓವರ್ ಮಾರ್ಕಿಂಗ್ ಮಾಡಲಾಗಿದ್ದು, ಆರಂಭ – ಅಂತ್ಯದಲ್ಲಿ ಫ್ಲೈ ಓವರ್ ಸ್ಟಾರ್ಟ್ಸ್- ಫ್ಲೈ ಓವರ್ ಎಂಡ್ಸ್ ಎಂದು ಬರೆಯಲಾಗಿತ್ತು. ಆದರೆ ಡಾಮರು ಕಾಮಗಾರಿ ವೇಳೆ ಅದು ಮುಚ್ಚಿ ಹೋಗಿದೆ.
ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣದ ಮುಂಚಿತವಾಗಿ ಭೂತಾಂತ್ರಿಕ ಪರಿಶೀಲನಾ ಕಾರ್ಯ ಆರಂಭಗೊಂಡಿದೆ. ಫ್ಲೈ ಓವರ್ ನಿರ್ಮಾಣದ ಪೂರ್ವಭಾವಿಯಾಗಿ ಪೂರ್ಲಿಪಾಡಿಯಿಂದ ಕೆ.ಸಿ.ರೋಡ್ ವರೆಗೆ ಭೂತಾಂತ್ರಿಕ ಪರಿಶೀಲನೆ(ಜಿಯೋಟೆಕ್ನಿಕಲ್ ಇನ್‌ವೆಸ್ಟಿಗೇಶನ್) ಪೂರ್ಣಗೊಳ್ಳುವ ಹಂತದಲ್ಲಿದೆ. ಬೃಹತ್ ಪಿಲ್ಲರ್‌ಗಳ ನಿರ್ಮಾಣಕ್ಕಾಗಿ ಭೂಮಿಯ ಕಲ್ಲು, ಮಣ್ಣಿನ ಪರೀಕ್ಷಾ ಕಾರ್ಯವು ಯಂತ್ರೋಪಕರಣಗಳ ಮೂಲಕ ವೇಗವಾಗಿ ನಡೆಯುತ್ತಿದೆ.
ಪ್ರಸ್ತುತ ಕಾಮಗಾರಿಯ ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡಿದೆ.

ಒಂದು ರಾಷ್ಟ್ರೀಯ ಹೆದ್ದಾರಿ ಎಷ್ಟು ವರ್ಷಗಳ ಕಾಲ ನೆನೆಗುದಿಗೆ ಬಿದ್ದು ಈಗ ಆರಂಭವಾಗುತ್ತಿರುವುದು ಪ್ರಥಮಬಾರಿ. ಹಲವಾರು ಹೋರಾಟ, ಟೀಕೆ ಟಿಪ್ಪಣಿಗಳ ನಂತರ ಸರಿಸುಮಾರು ಮೂರು ವರ್ಷಗಳ ನಂತರ ಈ ಕಾಮಗಾರಿ ಮತ್ತೆ ಆರಂಭವಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು