ಹತ್ಯೆ ಮಾಡಲು ಬಂದವನೇ ಭೀಕರವಾಗಿ ಕೊಲೆಯಾದ

ಬೆಂಗಳೂರು: ಕೊಲೆ ಮಾಡಲು ಬಂದವನೇ ಭೀಕರವಾಗಿ ಕೊಲೆಯಾದ ಘಟನೆ ಬೆಂಗಳೂರಿನ (Bengaluru) ಕುಮಾರಸ್ವಾಮಿ ಲೇಔಟ್ನ ಕೋಣನಕುಂಟೆಯಲ್ಲಿ ನಡೆದಿದೆ.
ಶರತ್ ಕೊಲೆಯಾದ ಯುವಕನಾಗಿದ್ದು, ಲೋಕೇಶ್ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಶರತ್ ಹಾಗೂ ಲೋಕೇಶ್ ಒಂದು ಕಾಲದ ಆತ್ಮೀಯ ಸ್ನೇಹಿತರಾಗಿದ್ದವರು. (Friend) ಆದರೆ ಹಣಕಾಸಿನ (Money) ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಇದರಿಂದಾಗಿ ಇಬ್ಬರು ಬೇರೆ ಬೇರೆಯಾಗಿದ್ದರು.
ಬೇರೆಯಾಗಿದ್ದರೂ ಕೂಡ ಇಬ್ಬರ ನಡುವೆ ಕೋಲ್ಡ್ ವಾರ್ ನಡೆಯುತ್ತಿತ್ತು. ಇದೇ ವೇಳೆ ನಿನ್ನೆ (ಶುಕ್ರವಾರ) ರಾತ್ರಿ ಶರತ್ ಕುಮಾರ್ ಹಾಗೂ ಲೋಕೇಶ್ ಪರಸ್ಪರ ಎದುರಾಗಿದ್ದರು. ಮೊದಲಿಗೆ ಸಣ್ಣದಾಗಿ ಶುರುವಾದ ಗಲಾಟೆ ನಂತರ ಜೋರಾಗಿದೆ. ಈ ವೇಳೆ ಗಲಾಟೆ ಅತಿರೇಕಕ್ಕೆ ಹೋಗಿ ಶರತ್ ಹಾಗೂ ಲೋಕೇಶ್ ಪರಸ್ಪರ ಹೊಡೆದಾಟಕ್ಕೆ ಮುಂದಾಗಿದ್ದಾರೆ.
ಈ ವೇಳೆ ಶರತ್ ಕುಮಾರ್ ಚಾಕು ತಗೊಂಡು ಲೋಕೇಶ್ ಹತ್ಯೆಗೆ ಮುಂದಾಗಿದ್ದ. ಆದರೆ ಈ ಗಲಾಟೆಯಲ್ಲಿ ಲೋಕೇಶ್ನೇ ಶರತ್ನ ಕೈಯಲ್ಲಿದ್ದ ಚಾಕು ಕಸಿದುಕೊಂಡು ಶರತ್ ಕುಮಾರ್ಗೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.