ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ನೇಹ ಸದನ ಮತ್ತು ಜೀವದಾನದ ಅನಾಥ ಮಕ್ಕಳ ವಿದ್ಯಾಸಂಸ್ಥೆಯಲ್ಲಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಕಾರ್ಯಕ್ರಮ
ಸ್ನೇಹ ಸದನ ಮತ್ತು ಜೀವದಾನದ ಅನಾಥ ಮಕ್ಕಳ ವಿದ್ಯಾಸಂಸ್ಥೆ ಯಲ್ಲಿ 76 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಿಂದ ಕಾರ್ಯಕ್ರಮ ಹಮ್ಮಿಕೊಳಲಾಯಿತು. ಶಾಖಾ ಸಿಬ್ಬಂದಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಜಾರ್ಜ್ ಡಿಸೋಜಾ ನಿವೃತ ಪ್ರಾಂಶುಪಾಲರು ಸೈoಟ್ ಜೋಸೆಫ್ ಪಿಯು ಕಾಲೇಜ್ ಬಜ್ಪೆ ಅನಾಥ ಮಕ್ಕಳೊಂದಿಗೆ ಈ ಹಿಂದೆ ಕಳೆದ ಅಮೂಲ್ಯ ಸಮಯದ ಬಗ್ಗೆ ಹಾಗೂ ಸಂಸ್ಥೆಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಮಕ್ಕಳೊಂದಿಗೆ ಬೆರೆತು ಕೆಲ ಸಮಯ ಕಳೆದರು. ಉತ್ತಮ ಸಂದೇಶಗಳನ್ನು ನೀಡುತ್ತಾ ಪ್ರೋತ್ಸಾಹಿಸಿದರು ಸಂಸ್ಥೆಯು 111 ಶಾಖೆಯೊಂದಿಗೆ ಉತ್ತಮ ಸೇವೆ ನೀಡುತ್ತಿದ್ದು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಜಾರ್ಜ್ ಫೆರ್ನಾಂಡಿಸ್ ಹಾಗೂ ಪ್ರೆಸಿಡೆಂಟ್ ಶ್ರೀಮತಿ ರೋಸಲಿನ್ ಫೆರ್ನಾಂಡಿಸ್ ಅವರಿಗೆ ಸಲ್ಲುತ್ತದೆ ಎಂಬುದನ್ನು ತಿಳಿಸುತ್ತಾ ಸೈಂಟ ಮಿಲಾಗ್ರೇಸ್ ಹಾಗೂ ಸ್ನೇಹ ಸದನ ಮತ್ತು ಜೀವದಾನದ ಸಂಸ್ಥೆ ಏಳಿಗೆಗಾಗಿ ಆಶಿಸಿದರು.
ಕಾರ್ಯಕ್ರಮದಲ್ಲಿ ಸ್ನೇಹ ಸದನ ಮತ್ತು ಜೀವದಾನದ ಅನಾಥ ಮಕ್ಕಳಿಗೆ ಅಗತ್ಯವಿದ್ದ ಬೆಡ್ ಶೀಟ್, ಬಿಸ್ಕೆಟ್ , ಜ್ಯೂಸ್ ಇತ್ಯಾದಿ ಸಿಹಿ ತಿಂಡಿ ಹಂಚಿ ಶುಭ ಕೋರಿದರು, 76 ನೇ ವರ್ಷದ ಸ್ವಾತಂತ್ರೋತ್ಸವನ್ನು ಮಕ್ಕಳೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಶಾಖಾ ವ್ಯವಸ್ಥಾಪಕರಾದ ಮನೀಶ, ಕಾರ್ಯದರ್ಶಿ ಜ್ಞಾನ,ಫಾದರ್ ಸಿಬಿ ಕೈತರಣ್ ಮೈ, ಬ್ರದರ್ ಮಧು, ಸಿಸ್ಟೆರ್ ಶೀಜಿ ಉಪಸ್ಥಿತರಿದ್ದರು. ಹಾಗೂ ಸಿಬ್ಬಂದಿಗಳು ಹಾಜರಿದ್ದರು.