ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಕಿರುತೆರೆ ಸುಂದರಿ ಅಮೂಲ್ಯ ಗೌಡ

Twitter
Facebook
LinkedIn
WhatsApp
19803fdfa6c53d4bf6b9201c129 5

ಸುಂದರಿ’ (Sundari) ಸೀರಿಯಲ್ ‌ಮೂಲಕ‌ ಕಿರುತೆರೆಗೆ ಲಗ್ಗೆಯಿಟ್ಟ ಚೆಲುವೆ ಅಮೂಲ್ಯ ಗೌಡ (Amoolya Gowda) ಇದೀಗ ಸ್ಯಾಂಡಲ್‌ವುಡ್‌ನಲ್ಲಿ (Sandalwood) ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ‘ಕುರುಡು ಕಾಂಚಣ’ (Kurudu Kanchana) ಸಿನಿಮಾ‌ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

URTV24

2016 ‘ಸುಂದರಿ’ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಅಮೂಲ್ಯ ಅವರು ಅಪರಂಜಿ, ಅಗ್ನಿಸಾಕ್ಷಿ, ನನ್ನರಸಿ ರಾಧೆ ಸೀರಿಯಲ್ ಗಳ ಮೂಲಕ ನಟಿ ಗಮನ ಸೆಳೆದರು. 2016ರ `Princess Karnataka’ ವಿನ್ನರ್ ಕೂಡ ಆಗಿದ್ದಾರೆ. 2020ರಲ್ಲಿ ಶಮಂತ್ ಗೌಡ (Shamanth Gowda) ಜೊತೆ ‘ಮರೆಯಲಾರೆ’ (Mareyalaare) ಎಂಬ ಬ್ರೇಕಪ್ ಸಾಂಗ್ ನಲ್ಲಿ ನಟಿಸಿದ್ದರು. ಸಾಕಷ್ಟು ಜಾಹಿರಾತಿನಲ್ಲಿ ಮಾಡೆಲ್ ಆಗಿ ಕಾಣಿಕೊಂಡಿದ್ದಾರೆ.

URTV24

‘ಒನ್ ವೇ’ ಚಿತ್ರದ‌ ನಟ ಕಿರಣ್‌ ರಾಜ್‌ಗೆ ‘ಕುರುಡು ಕಾಂಚಾಣ’ (Kurudu Kanchana) ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಮೂಲ್ಯ ನಟಿಸಿದ್ದಾರೆ. ಜೆನ್ನಿ ಎನ್ನುವ ಪಾತ್ರಕ್ಕೆ ಅಮೂಲ್ಯ (Amoolya Gowda) ಜೀವತುಂಬಿದ್ದಾರೆ. ನಟನೆಗೆ ಒತ್ತಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಪ್ರದೀಪ್ ವರ್ಮಾ ಈ‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ‌ಬರಲಿದೆ. 

URTV24

‘ಕುರುಡು ಕಾಂಚಾಣ’ ಎಂಬ ಭಿನ್ನ ಕಥೆಯಲ್ಲಿ ನಟಿಸಿರುವ ಅಮೂಲ್ಯ, ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ. ಸದ್ಯದಲ್ಲಿಯೇ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಸಾಕಷ್ಟು ಕಥೆಗಳನ್ನ ಬರೆದಿಟ್ಟುಕೊಂಡಿರುವ ಅಮೂಲ್ಯ, ಮುಂದಿನ ದಿನಗಳಲ್ಲಿ ನಿರ್ದೇಶಕಿಯಾಗಿ ಕೂಡ ಬರಲಿದ್ದಾರೆ. ಅದಕ್ಕಾಗಿ ತೆರೆಮರೆಯಲ್ಲಿ ಸಕಲ ತಯಾರಿಯನ್ನ ನಡೆಸುತ್ತಿದ್ದಾರೆ.

URTV24

ಕಿರುತೆರೆಯಲ್ಲಿ ಅಭಿಮಾನಿಗಳ ಗಮನ‌ ಸೆಳೆದಿರುವ ನಟಿ ಅಮೂಲ್ಯ, ಬೆಳ್ಳಿತೆರೆಯಲ್ಲಿ ಕೂಡ ಬೆಳಗಲಿ ಎಂಬುದೇ ಅಭಿಮಾನಿಗಳ ‌ಆಶಯ.

URTV24

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ