ಶನಿವಾರ, ಮೇ 4, 2024
ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!-ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಕಳೆದು ಹೋಗಿರುವ ಸ್ಥಾನಗಳನ್ನು ಕಾಂಗ್ರೆಸ್ ಮರಳಿ ಪಡೆದಿತೆ?

Twitter
Facebook
LinkedIn
WhatsApp
kknfm6b greenland 625x300 19 January 23 2

ಶಿವಮೊಗ್ಗ: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆ, ಕಾಂಗ್ರೆಸ್ಸಿಗೆ ಹಿನ್ನಡೆ ತಂದ ಜಿಲ್ಲೆಗಳಲ್ಲಿ ಒಂದು.

ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಮೇರು ನಾಯಕ ಬಿಎಸ್ ಯಡಿಯೂರಪ್ಪನವರ ಹಾಗೂ ಹಿರಿಯ ನಾಯಕ ಕೆಎಸ್ ಈಶ್ವರಪ್ಪನವರ ತವರು ಜಿಲ್ಲೆಯಾಗಿರುವ ಶಿವಮೊಗ್ಗ ಜಿಲ್ಲೆ ಕಳೆದ ಬಾರಿ ಬಿಜೆಪಿಗೆ ಹೆಚ್ಚಿನ ಸ್ಥಾನವನ್ನು ತಂದು ಕೊಟ್ಟಿದ್ದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿತು.

ಈ ಬಾರಿ ರಾಜಕೀಯ ವಿಶ್ಲೇಷಕರ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ನಡೆಯಬಹುದು ಎಂದು ಅಂದಾಜಿಸಲಾಗಿದೆ.

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ್ದಾರೆ. ಕೆಎಸ್ ಈಶ್ವರಪ್ಪನವರಿಗೆ ಈಗ ಮಂತ್ರಿ ಸ್ಥಾನವೂ ಇಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಶಿವಮೊಗ್ಗ ಜಿಲ್ಲೆಯಲ್ಲಿ ತಕ್ಕಮಟ್ಟಿನ ಒಗ್ಗಟ್ಟನ್ನು ಪ್ರದರ್ಶಿಸುತ್ತಿದೆ. ಕಳೆದ ಬಾರಿ ಕರಾವಳಿಯಲ್ಲಿ ಬೀಸಿದ ಹಿಂದುತ್ವದ ಶಿವಮೊಗ್ಗ ಜಿಲ್ಲೆಗೂ ತಟ್ಟಿತು. ಇದರಿಂದ ಬಹುತೇಕ ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಂಡಿತ್ತು.

ಆದರೆ ಈ ಬಾರಿ ಹಿಂದುತ್ವದ ಅಲೆ ಅಷ್ಟಾಗಿ ಕಂಡು ಬರುತ್ತಿಲ್ಲ, ಆದರೆ ಕೊನೆ ಕ್ಷಣದಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯ ಇಲ್ಲ ಎಂದು ರಾಜಕೀಯ ವಿಶ್ಲೇಷಕರ ಸ್ಪಷ್ಟ ಅಭಿಪ್ರಾಯ. ಆದರೆ ಕಳೆದ ಬಾರಿ ಅನುಭವಿಸಿದ ನಷ್ಟವನ್ನು ಕಾಂಗ್ರೆಸ್ ಈ ಬಾರಿ ಅನುಭವಿಸಲಿಕ್ಕಿಲ್ಲ ಎಂದು ಶಿವಮೊಗ್ಗ ಜಿಲ್ಲೆ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣೆ ಖಂಡಿತ ನಡೆಯುತ್ತದೆ ಎಂದು ರಾಜಕೀಯ ವಿಶ್ಲೇಷಕರು ಸ್ಪಷ್ಟವಾಗಿ ಹೇಳುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ