ಗುರುವಾರ, ಏಪ್ರಿಲ್ 25, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸ್ತನದ ಕ್ಯಾನ್ಸರ್‌ ಗೆದ್ದು 38ನೇ ಹುಟ್ಟುಹಬ್ಬದ ದಿನ ಕೆಲಸಕ್ಕೆ ಮರುಳಿದ ನಟಿ ಹಂಸ ನಂದಿನಿ!

Twitter
Facebook
LinkedIn
WhatsApp
ಸ್ತನದ ಕ್ಯಾನ್ಸರ್‌ ಗೆದ್ದು 38ನೇ ಹುಟ್ಟುಹಬ್ಬದ ದಿನ ಕೆಲಸಕ್ಕೆ ಮರುಳಿದ ನಟಿ ಹಂಸ ನಂದಿನಿ!

ಮೋಹಿನಿ 9886788888 ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಟಾಲಿವುಡ್‌ ನಟಿ ಹಂಸ ನಂದಿನಿ 2021ರಲ್ಲಿ ಸ್ತನದ ಕ್ಯಾನ್ಸರ್ ಇರುವುದಾಗಿ ಹೇಳಿಕೊಂಡಿದ್ದರು. ಸುಮಾರು 16 ಕೀಮೋಥೆರಪಿ ಮುಗಿಸಿಕೊಂಡು, ತಲೆ ಕೂದಲು ಶೇವ್ ಮಾಡಿಸಿಕೊಂಡು ಬಿಗ್ ಬ್ರೇಕ್‌ ನಂತರ ಮತ್ತೆ ವೃತ್ತಿ ಜೀವನ ಆರಂಭಿಸಿದ್ದಾರೆ. 38ನೇ ಹುಟ್ಟುಹಬ್ಬ ಸ್ಪೆಷಲ್ ಆಗಿರಬೇಕೆಂದು ಕೆಲಸಕ್ಕೆ ಹಿಂದಿರುಗಿರುವುದಾಗಿ ಬರೆದುಕೊಂಡಿದ್ದಾರೆ.

ಹಂಸ ನಂದಿನಿ ಪೋಸ್ಟ್‌:

‘ಸಿನಿಮಾ ಸೆಟ್‌ಗೆ ಬಂದಿರುವೆ, ಮರು ಹುಟ್ಟಿರುವೆ ಎನ್ನುವ ಭಾವನೆ ನನ್ನದ್ದು. ಈ ವರ್ಷದ ಹುಟ್ಟುಹಬ್ಬವನ್ನು ಮತ್ತಷ್ಟು ಸ್ಪೆಷಲ್ ಮಾಡುತ್ತಿರುವೆ. ಕ್ಯಾಮೆರಾ ಮುಂದೆ ಆದಷ್ಟು ಜೀವಂತವಾಗಿರುವೆ ನಾನು. ಈ ದಿನವನ್ನು ನನ್ನ ಕೋ-ಸ್ಟಾರ್ ಮತ್ತು ಹೊಸ ಸಿನಿಮಾ ತಂತ್ರಜ್ಞರ ಜೊತೆ ಆಚರಿಸಿಕೊಳ್ಳುತ್ತಿರುವೆ. ನಿಮ್ಮೆಲ್ಲರ ಪ್ರೀತಿ ಮತ್ತು ಸಪೋರ್ಟ್‌ ಇಲ್ಲದೆ ಇಷ್ಟು ಸಾಧ್ಯವಾಗುತ್ತಿರಲಿಲ್ಲ. ನನ್ನ ಅಪ್ಪುಗೆ ಮತ್ತು ಮುತ್ತುಗಳು ನಿಮಗೆ’ ಎಂದು ಹಂಸ ಬರೆದುಕೊಂಡಿದ್ದಾರೆ.

‘ನಮ್ಮ ರಾಣಿ ವಾಪಸ್ ಬಂದಿದ್ದಾರೆ, ನಮಗೆ ಸಖತ್ ಖುಷಿಯಾಗುತ್ತಿದೆ.’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ‘ಕ್ಯಾನ್ಸರ್ ವಿರುದ್ಧ ಹೋರಾಟಕ್ಕೆ ಈಗೊಂದು ಅರ್ಥ ಸಿಕ್ಕಿದೆ. ನೀವು ರಿಯಲ್ ಲೈಫ್ ಫೈಟರ್’ ಎಂದಿದ್ದಾರೆ ನೆಟ್ಟಿಗರು.

‘ನಾನು ಅನುವಂಶಿಕ ರೂಪಾಂತರವನ್ನು ಹೊಂದಿದ್ದೇನೆ. ಮುಂದೆ ನನ್ನ ಮತ್ತೊಂದು ಸ್ತನವೂ ಕ್ಯಾನ್ಸರ್‌ ಆಗುವ ಶೇ. 70  ಸಾಧ್ಯತೆ ಇದೆ. ಅಂಡಾಶಯದ ಕ್ಯಾನ್ಸರ್‌ ಆಗುವ ಸಾಧ್ಯತೆ ಶೇ. 45 ಇದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ರೋಗ ನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಿದೆ. ನಾನು ಅದೃಷ್ಟವಂತೆ. ಯಾಕೆಂದರೆ, ಅದನ್ನು ನಾನು ಬಹುಬೇಗನೇ ಕಂಡುಹಿಡಿದುಬಿಟ್ಟಿದ್ದೆ. ನಾನು ಅನುವಂಶಿಕ ರೂಪಾಂತರವನ್ನು ಹೊಂದಿದ್ದೇನೆ. ಮುಂದೆ ನನ್ನ ಮತ್ತೊಂದು ಸ್ತನವು ಕ್ಯಾನ್ಸರ್‌ ಆಗುವ ಶೇ. 70  ಸಾಧ್ಯತೆ ಇದೆ. ಅಂಡಾಶಯದ ಕ್ಯಾನ್ಸರ್‌ ಆಗುವ ಸಾಧ್ಯತೆ ಶೇ. 45 ಇದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅಧಿಕ ರೋಗನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಿದೆ.ನಾನು 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕೀಮೋಥೆರಪಿ ಮಾಡಿಸಿಕೊಳ್ಳಬೇಕಿದೆ. ನಾನು ಕೆಲವು ಭರವಸೆಗಳನ್ನು ನೀಡುತ್ತೇನೆ. ಇಂಥ ಚಿಕಿತ್ಸೆಗಳು ನನ್ನನ್ನು ಮತ್ತಷ್ಟು ಬಲಶಾಲಿಯನ್ನಾಗಿ ಮಾಡುತ್ತಿವೆ. ಸ್ತನ ಕ್ಯಾನ್ಸರ್  ನನ್ನನ್ನು ಆವರಿಸಿರುವುದು ಗೊತ್ತಾಯಿತು.  ನನ್ನಷ್ಟಕ್ಕೇ ನಾನು ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಂಡೆ. ಈ ರೋಗದೊಂದಿಗೆ ಹೋರಾಟಲು ಮಾನಸಿಕವಾಗಿ ಸಿದ್ಧಳಾದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಾ ಬೇರೆಯವರಿಗೂ ಧೈರ್ಯ ತುಂಬಲು ತೀರ್ಮಾನಿಸಿದೆ. ನಾನು ಸಾಮಾಜಿಕ ಜೀವನದಿಂದ ದೂರವಾಗಿದ್ದಕ್ಕೆ ಅನೇಕರು ಕಾರಣ ಕೇಳಿ ಸಂದೇಶ ರವಾನಿಸಿದ್ದಾರೆ. ನಿಮ್ಮೆಲ್ಲರ ಅಭಿಮಾನಕ್ಕೆ ನಾನು  ಚಿರಋಣಿ.  ನಾನು ಹಿಂದಕ್ಕೆ ಸರಿಯುವ ಮಾತೇ ಇಲ್ಲ. ಹೋರಾಡುತ್ತಲೇ ಇರುತ್ತೇನೆ. ನನ್ನ ಜತೆ ನಿಂತ ನಿಮಗೆಲ್ಲ ಮತ್ತೊಂದು ಸಾರಿ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಪ್ರೀತಿಯ ಹಂಸ! ಎಂದು ಪತ್ರ ಬರೆದಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ