![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ರಿಯಾದ್: ಒಂದೇ ದಿನದಲ್ಲಿ 81 ಜನರನ್ನು ಗಲ್ಲಿಗೇರಿಸಿರುವುದಾಗಿ ಸೌದಿ ಅರೇಬಿಯಾ ರಾಜಾಡಳಿತವು ತಿಳಿಸಿದೆ. ಒಂದೇ ದಿನ ಇಷ್ಟೊಂದು ಜನರನ್ನು ದಂಡನೆ ಮೂಲಕ ಸಾಯಿಸಿರೋದು ಇದೇ ದೊಡ್ಡ ಸಂಖ್ಯೆ.
ಈ ಹಿಂದೆ 1979ರಲ್ಲಿ ಮೆಕ್ಕಾದ ಮಸೀದಿಯ ಮೇಲೆ ದಾಳಿ ಮಾಡಿದ್ದ ಪ್ರಕರಣದಲ್ಲಿ 63 ಉಗ್ರರನ್ನು 1980ರ ದಿನವೊಂದರಲ್ಲಿ ಮರಣದಂಡನೆಗೆ ಗುರಿಪಡಿಸಲಾಗಿತ್ತು. ಅದುವೇ ಸೌದಿ ಅರೇಬಿಯಾದ ದಿನವೊಂದರ ಮರಣದಂಡನೆ ದಾಖಲೆಯಾಗಿತ್ತು.
ಇಸ್ಲಾಮಿಕ್ ಸ್ಟೇಟ್, ಅಲ್-ಖೈದಾ, ಹೌತಿ ಮತ್ತು ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಮತ್ತು ವಿವಿಧ ಗಂಭೀರ ಅಪರಾಧಗಳಲ್ಲಿ ಆರೋಪ ಸಾಬೀತಾದ 81 ಮಂದಿಗೆ ಮರಣದಂಡನೆ ಶಿಕ್ಷೆ ನೀಡುವುದಾಗಿ ಸೌದಿಯ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಹೇಳಿದೆ. ಸೌದಿಯಲ್ಲಿ ಮರಣದಂಡನೆ ಶಿಕ್ಷೆ ವಿರಳವೇನಲ್ಲ. ಈ ಬಾರಿ ದಂಡನೆಗೊಳಗಾದವರು ಮುಗ್ಧ ಜನರು, ಮಹಿಳೆಯರ ಸಾವಿಗೆ ಕಾರಣರಾಗಿದ್ದರು ಎಂಬ ಪ್ರಕಟಣೆ ರಾಜಾಡಳಿತದಿಂದ ಹೊರಬಿದ್ದಿದೆ.
ಸೌದಿ ಅರೇಬಿಯಾವು ತನ್ನ ಪಕ್ಕದ ರಾಷ್ಟ್ರ ಯೆಮೆನ್ ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧ ಸೆಣೆಸುತ್ತಿದ್ದೆ. ಈಗ ಸೌದಿಯಲ್ಲಾಗಿರುವ ಮರಣದಂಡನೆಗಳೂ ಇದೇ ಸಂಬಂಧದ್ದು ಎಂದು ಹೇಳಲಾಗುತ್ತಿದೆ. ಮರಣದಂಡನೆಗೆ ಒಳಗಾದವರಲ್ಲಿ 73 ಸೌದಿಗಳು, 7 ಯೆಮನಿಯರು, ಒಬ್ಬ ಸಿರಿಯನ್ ಇದ್ದಾರೆ.
ಮರಣದಂಡನೆಗೆ ಒಳಗಾದವರೆಲ್ಲರೂ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಲು ಮತ್ತು ಶಸ್ತ್ರಾಸ್ತ್ರಗಳನ್ನು ದೇಶದೊಳಗೆ ಕಳ್ಳಸಾಗಣೆ ಮಾಡಲು ಸಂಚು ರೂಪಿಸುತ್ತಿದ್ದರು ಎಂದು ಅದು ವರದಿ ಮಾಡಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist