ಸೌದಿಯಲ್ಲಿ ಅಪಘಾತ: ಮಂಗಳೂರಿನ ಯುವಕ ಮೃತ
Twitter
Facebook
LinkedIn
WhatsApp

ಮಂಗಳೂರು (ಡಿ.30): ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಅಪಘಾತಕ್ಕೆ ಸುರತ್ಕಲ್‌ನ ಯುವಕ ಸಾವಿಗೀಡಾದ ಘಟನೆ ನಡೆದಿದೆ. ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಗಳೂರಿನ ಸುರತ್ಕಲ್‌ನ ತಡಂಬೈಲ್ ನಿವಾಸಿ ಫಾಝಿಲ್ ಮೃತಪಟ್ಟಿದ್ದಾರೆ. ಫಾಝಿಲ್‌ಗೆ ಕಳೆದ ವರ್ಷ ವಿವಾಹವಾಗಿತ್ತು.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಫಾಝಿಲ್ ಕಳೆದ ಐದು ವರ್ಷಗಳಿಂದ ಸೌದಿಯ ಜುಬೈಲಿನ ಅಲ್ ಬತೀನಿ ಸ್ಕಫೋಲ್ಡಿಂಗ್ ಕೊಂಟ್ರಾಕ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ ಹಸ್ಸದ ಅಲ್ ಜೂಫ್ರಾನ್ ಪ್ರಾಜೆಕ್ಟ್ಗೆ ಸೈಟಿಗೆ ಭೇಟಿ ನೀಡಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ರಿಯಾದ್‌ನಿಂದ ಸುಮಾರು 260 ಕಿ.ಮೀ. ದೂರದಲ್ಲಿ ಈ ಅಪಘಾತ ನಡೆದಿದೆ. ಫಾಝಿಲ್ ಮೃತದೇಹವನ್ನು ಹತ್ತಿರದ ಅಬೈಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪಾರ್ಥೀವ ಶರೀರವನ್ನು ಶೀಘ್ರವೇ ತವರಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ.