ಸೋಮವಾರ, ಜನವರಿ 20, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!

Twitter
Facebook
LinkedIn
WhatsApp
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್

ತುಮಕೂರು: Biggboss ಖ್ಯಾತಿಯ ಡ್ರೋನ್ ಪ್ರತಾಪ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸೋಡಿಯಂ ಬಳಸಿ ಕೃಷಿ ಹೊಂಡಾದಲ್ಲಿ ಸ್ಫೋಟಿಸಿದ್ದ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಸೋಡಿಯಂ ಬಳಸಿ ಕೃಷಿ ಹೊಂಡಾದಲ್ಲಿ ಡ್ರೋಣ್ ಪ್ರತಾಪ್ ಸ್ಫೋಟಿಸಿದ್ದರು. ಅಲ್ಲದೆ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ಸಂಬಂಧ ತುಮಕೂರು ಜಿಲ್ಲೆಯ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮಿಡಿಗೇಶಿ ಪೊಲೀಸರು ಪ್ರತಾಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಜ್ಞಾನ ಪ್ರಯೋಗ ಹೆಸರಲ್ಲಿ ಪ್ರತಾಪ್ ಈ ಪರೀಕ್ಷೆ ಮಾಡಿದ್ದರು. ಸೋಡಿಯಂ ಸೇರಿದಂತೆ ರಾಸಾಯನಿಕಗಳನ್ನು ಸೇರಿಸಿ ಕೃಷಿ ಹೊಂಡಕ್ಕೆ ಎಸೆಯಲಾಗಿತ್ತು. ನಂತರ ದೊಡ್ಡ ಸ್ಫೋಟ, ಜ್ವಾಲೆ ಮತ್ತು ಬಾಂಬ್ ಸ್ಫೋಟವನ್ನು ಹೋಲುವ ದೃಶ್ಯಗಳನ್ನು ಉಂಟುಮಾಡಿತು. ಪರಿಸರವಾದಿಗಳು ಮತ್ತು ಸಾರ್ವಜನಿಕರು ಪ್ರತಾಪ್ ಅವರನ್ನು ತೀವ್ರವಾಗಿ ಟೀಕಿಸಿದರು. ಸಾಮಾಜಿಕ ಮಾಧ್ಯಮ ವೀಕ್ಷಣೆಗಳಿಗಾಗಿ ಅಪಾಯಕಾರಿ ಕೃತ್ಯಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ದುಷ್ಕರ್ಮಿಗಳು ಇಂತಹ ಪ್ರದರ್ಶನಗಳ ಸಂಭಾವ್ಯ ದುರುಪಯೋಗದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 288 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಈ ಕಾಯ್ದೆ ಸಾರ್ವಜನಿಕ ಸುರಕ್ಷತೆಗೆ ಗಮನಾರ್ಹ ಅಪಾಯ ಮತ್ತು ಸ್ಫೋಟಕಗಳನ್ನು ನಿಯಂತ್ರಿಸುವ ಕಾನೂನುಗಳನ್ನು ಉಲ್ಲಂಘಿಸಿದೆ. ಪರಿಸರವಾದಿ ವಿಜಯ್ ನಿಶಾಂತ್ ಅವರು ಪರಿಸರದ ಮೇಲೆ ಸಂಭಾವ್ಯ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಪ್ರತಾಪ್ ಅವರ ಬೇಜವಾಬ್ದಾರಿ ವರ್ತನೆಯನ್ನು ಟೀಕಿಸಿದ್ದಾರೆ.

ಈ ವಿಡಿಯೋ ಭಾರಿ ಟೀಕೆಗೆ ಗುರಿಯಾಗಿತ್ತು. ಪರಿಸರ ಪ್ರೇಮಿಗಳು ಸೇರಿದಂತೆ ಸಾರ್ವಜನಿಕರು ಡ್ರೋನ್ ಪ್ರತಾಪ್ ಹುಚ್ಚಾಟಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೃಷಿ ಹೊಂಡದ ನೀರಿಗೆ ಸೋಡಿಯಂ ಹಾಕಿದ್ದಾರೆ. ಸೋಡಿಯಂಗೆ ನೀರು ಸೋಕಿದರೆ ಸ್ಫೋಟಗೊಳ್ಳಲಿದೆ. ಇದನ್ನು ವಿಡಿಯೋಗಾಗಿ ಮಾಡಿ ತೋರಿಸಿದ್ದಾರೆ. ರಾಸಾಯನಿಕ ವಸ್ತುಗಳನ್ನು ನೀರಿಗೆ ಹಾಕಿ ಸ್ಫೋಟ ಮಾಡಿದ ಡ್ರೋನ್ ಪ್ರತಾಪ್ ಅನಾಹುತ ಮಾಡಿದ್ದಾರೆ ಅನ್ನೋ ಆಕ್ರೋಶ ತೀವ್ರವಾಗಿ ಕೇಳಿಬಂದಿತ್ತು. ಈ ನೀರನ್ನು ಪ್ರಾಣಿ ಪಕ್ಷಿಗಳು ಕುಡಿದರೆ ಗತಿ ಏನು? ಕನಿಷ್ಠ ಜವಾಬ್ದಾರಿ ಇಲ್ಲದೆ ಹುಚ್ಚಾಟ ನಡೆಸಿದ್ದಾರೆ. ಈ ರೀತಿ ಸ್ಫೋಟ ನಡೆಸಲು ಅನುಮತಿ ಪಡೆಯಬೇಕು. ಬೇಕಾದ ಕಡೆ, ಖುಷಿ ಬಂದ ಕಡೆ ಮಾಡುವಂತಿಲ್ಲ. ಕೆಲ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಆದರೆ ಇಲ್ಲಿ ಡ್ರೋನ್ ಪ್ರತಾಪ್ ವಿಡಿಯೋಗಾಗಿ ಈ ರೀತಿ ಹುಚ್ಚಾಟ ಮಾಡಿದ್ದಾರೆ. ಹೀಗಾಗಿ ಪೊಲೀಸರು ಡ್ರೋನ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು. 

ಸೋಡಿಯಂ ಬ್ಲಾಸ್ಟ್‌ನಿಂದ ಕೃಷಿ ಹೊಂಡದಲ್ಲಿರುವ ಜಲಚರಗಳು ಸಾಯುತ್ತದೆ. ಇತ್ತ ಈ ನೀರು ತೀವ್ರ ಸೋಡಿಯಂ ರಾಸಾಯನಿಕದಿಂದ ಕೂಡಿರುವ ಕಾರಣ ವಿಷಕಾರಿಯಾಗಿದೆ. ಇದರ ಕನಿಷ್ಠ ಜ್ಞಾನವಿಲ್ಲದ ಡ್ರೋನ್ ಪ್ರತಾಪ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹಲವರು ಆಗ್ರಹಿಸಿದ್ದರು. ವಿಡಿಯೋಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ತುಮಕೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಬಂಧಿಸಿದ್ದಾರೆ. 

ಡ್ರೋನ್ ಪ್ರತಾಪ್ ಭಾರಿ ವಿವಾದದ ಮೂಲಕವೇ ಕರ್ನಾಟಕದಲ್ಲಿ  ಸುದ್ದಿಯಾಗಿದ್ದಾರೆ. ಡ್ರೋನ್ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಹಲವು ದೇಶಗಳಲ್ಲಿ ಪ್ರದರ್ಶನ ಹಾಗೂ ಮನ್ನಣೆ ಪಡೆದಿರುವುದಾಗಿ ಡ್ರೋನ್ ಹೇಳಿಕೊಂಡಿದ್ದರು. ಇದೇ ಆಧಾರದಲ್ಲಿ ಹಲವು ನೆರವುಗಳನ್ನು ಪಡೆದಿದ್ದರು. ಆದರೆ ಡ್ರೋನ್ ಪ್ರತಾಪ್ ಮಾತುಗಳು ಸುಳ್ಳು ಅನ್ನೋ  ಆರೋಪ ಕೇಳಿಬಂದಿತ್ತು. ಈ ವಿವಾದದ ಬಳಿಕ ತೆರೆ ಮರೆಗೆ ಸರಿದಿದ್ದ ಡ್ರೋನ್ ಪ್ರತಾಪ್ ಕನ್ನಡ ಬಿಗ್ ಬಾಸ್ ಮೂಲಕ ಭಾರಿ ಸದ್ದು ಮಾಡಿದ್ದರು. ಬಿಗ್ ಬಾಸ್ ಮೂಲಕ ಡ್ರೋನ್ ತಮ್ಮ ವಿವಾದಿತ ಇಮೇಜ್ ಬದಲಿಸಿದ್ದರು. ದೂರವಾಗಿದ್ದ ಕುಟುಂಬದ ಜೊತೆ ಸೇರುವ ಮೂಲಕ ಡ್ರೋನ್ ಎಲ್ಲರ ಅಚ್ಚುಮೆಚ್ಚಾಗಿ ಬದಲಾಗಿದ್ದರು. ಇದೀಗ ಡ್ರೋನ್ ಮತ್ತೆ ವಿವಾದ ಮೈಮೇಲೇ ಎಳೆದುಕೊಂಡಿದ್ದಾರೆ. ಈ ಪ್ರಕರಣ ಗಂಭೀರವಾಗುವ ಸಾಧ್ಯತೆ ಇದೆ. ಸ್ಫೋಟಕವಾಗಿರುವ ಕಾರಣ ಡ್ರೋನ್ ಪ್ರತಾಪ್ ಹೊರಬರಲು ಭಾರಿ ಕಸರತ್ತು ನಡೆಸಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist