ಶುಕ್ರವಾರ, ಏಪ್ರಿಲ್ 26, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸೈನಿಕನಿಂದ ಸೈನಿಕರ ಮೇಲೆಯೇ ಗುಂಡಿನ ದಾಳಿ – ನಾಲ್ವರು ಯೋಧರು ದುರ್ಮರಣ.

Twitter
Facebook
LinkedIn
WhatsApp
ಸೈನಿಕನಿಂದ ಸೈನಿಕರ ಮೇಲೆಯೇ ಗುಂಡಿನ ದಾಳಿ – ನಾಲ್ವರು ಯೋಧರು ದುರ್ಮರಣ.

ರಾಯಪುರ: ಯೋಧನೊಬ್ಬ ಸಹ ಸೈನಿಕರ ಮೇಲೆಯೇ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.
ತೆಲಂಗಾಣ- ಛತ್ತೀಸ್‌ಗಢ ಗಡಿಯ ಸುಕ್ಮಾ ಜಿಲ್ಲೆ ಲಿಂಗನಪಳ್ಳಿ ಗ್ರಾಮದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) 50ನೇ ಬೆಟಾಲಿಯನ್‌ ಶಿಬಿರದಲ್ಲಿ ದುರ್ಘಟನೆ ನಡೆದಿದೆ. ಮೃತ ಯೋಧರನ್ನು ರಾಜಮಣಿ ಯಾದವ್‌, ರಾಜೀವ್‌ ಮೊಂಡಲ್‌, ಧಾಂಜಿ ಹಾಗೂ ಧರ್ಮೇಂದ್ರ ಕುಮಾರ್‌ ಎಂದು ಗುರುತಿಸಲಾಗಿದೆ. ಮೃತರಲ್ಲಿ ಮೂವರು ಬಿಹಾರದವರಾದರೆ, ಒಬ್ಬರು ಪಶ್ಚಿಮ ಬಂಗಾಳದವರು. ಕೃತ್ಯ ಎಸಗಿರುವ ಸಿಆರ್‌ಪಿಎಫ್‌ ಯೋಧನನ್ನು ರಿತೇಶ್‌ ರಂಜನ್‌ ಎಂದು ಗುರುತಿಸಲಾಗಿದೆ.

ಸೈನಿಕ ರಿತೇಶ್‌ ರಂಜನ್‌ ಎಂಬುವರನ್ನು ಬೆಳಗ್ಗೆ 4 ಗಂಟೆಯಿಂದ ಶಿಬಿರದ ಕಾವಲು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯಕ್ಕೆ ಸಿದ್ಧನಾಗಿ ತೆರಳಿದ ರಿತೇಶ್‌ ಮತ್ತು ಹಿಂದಿನ ಪಾಳಿಯಲ್ಲಿದ್ದವರ ಜತೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರಿತೇಶ್‌ ತನ್ನ ಬಳಿ ಇದ್ದ ಸರ್ವಿಸ್‌ ರೈಫಲ್‌ನಿಂದ ಸಹೋದ್ಯೋಗಿಗಳ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ರಿವಾಲ್ವರ್‌ನಲ್ಲಿದ್ದ ಎಲ್ಲ ಗುಂಡುಗಳೂ ಖಾಲಿಯಾದ ಬಳಿಕವೂ ಸುಮ್ಮನಾಗದೇ ಪಕ್ಕದಲ್ಲಿದ್ದ ಸಹೋದ್ಯೋಗಿಯ ರೈಫಲ್‌ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಶಿಬಿರದಲ್ಲಿ ಮಲಗಿದ್ದವರು ಗುಂಡಿನ ಸದ್ದು ಕೇಳಿ ಎಚ್ಚರಗೊಂಡರು. ತಕ್ಷಣವೇ ರಿತೇಶ್‌ನನ್ನು ಹಿಡಿದಿಟ್ಟುಕೊಂಡ ಕಾರಣ ಆತನಿಂದಾಗಬಹುದಾದ ಹೆಚ್ಚಿನ ಅನಾಹುತ ತಪ್ಪಿದೆ.
ಘಟನೆ ನಡೆದ ಸಂದರ್ಭದಲ್ಲಿ ಶಿಬಿರದಲ್ಲಿ 40- 45 ಯೋಧರು ಮಲಗಿದ್ದರು. ವಿಚಾರಣೆ ವೇಳೆ ರಿತೇಶ್‌ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಗುಂಡಿನ ದಾಳಿಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

‘ಮೃತರು ಮತ್ತು ಆರೋಪಿ ನಡುವೆ ಕಳೆದ ಎರಡು- ಮೂರು ದಿನಗಳಿಂದ ಸಣ್ಣಪುಟ್ಟ ಜಗಳ ನಡೆಯುತ್ತಿದ್ದು, ಪರಸ್ಪರ ಹೀಯಾಳಿಸಿಕೊಳ್ಳುತ್ತಿದ್ದರು’ ಎಂದು ಕೆಲವು ಯೋಧರು ತಿಳಿಸಿದ್ದಾರೆ. ದೀಪಾವಳಿ ರಜೆ ಸಿಗದೇ ರಿತೇಶ್‌ ಹತಾಶಗೊಂಡಿದ್ದರು ಎಂದೂ ಹೇಳಲಾಗುತ್ತಿದೆ. ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಈ ದುರ್ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಸಿಆರ್‌ಪಿಎಫ್‌ ಮುಖ್ಯಸ್ಥರನ್ನು ಆಗ್ರಹಿಸಿದ್ದಾರೆ. ಜತೆಗೆ, ಭದ್ರತಾ ಸಿಬ್ಬಂದಿಯ ಮಾನಸಿಕ ಒತ್ತಡ ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರಿಗೂ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು