ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

'ಸೆಕ್ಸ್ ಸಿಂಬಲ್' ಎಂದು ಕರೆಯಲ್ಪಡುವ ಬಗ್ಗೆ ಕೊನೆಗೂ ಮೌನ ಮುರಿದ ಮಲೈಕಾ; 'ನನಗೆ ಯಾವುದೇ ತಕರಾರಿಲ್ಲ' ಎಂದ ನಟಿ

Twitter
Facebook
LinkedIn
WhatsApp
pic 16

ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ‘ಸೆಕ್ಸ್ ಸಿಂಬಲ್’ ಎಂದು ಕರೆಯಲ್ಪಡುವ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ.  ಸದಾ ಹಾಟ್ ಮತ್ತು ಮಾದಕ ನೋಟದಿಂದನೇ ಸುದ್ದಿಯಲ್ಲಿರುವ ಮಲೈಕಾ ಅವರನ್ನು ಸೆಕ್ಸ್ ಸಿಂಬಲ್ ಎಂದರೆ ಕರೆಯಲಾಗುತ್ತಿತ್ತು. ಈ ಬಗ್ಗೆ ಮಲೈಕಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.   ‘ಸೆಕ್ಸ್ ಸಿಂಬಲ್’ ಎಂದು ಕರೆಯುವುದು ತನಗೆ ಸಂತೋಷ ಎಂದು ಹೇಳಿದ್ದಾರೆ. ಇದರಿಂದ ಯಾವುದೇ ಹಿಂಜರಿಕೆ ಇಲ್ಲ ಎಂದು ಬಹಿರಂಗ ಪಡಿಸಿದರು. 

May be an image of 1 person and indoor

‘ನಾನು ಸೆಕ್ಸ್ ಸಿಂಬಲ್ ಎಂದು ಕರೆಯುವುದನ್ನು ಇಷ್ಟಪಡುತ್ತೇನೆ. ಸೆಕ್ಸ್ ಸಿಂಬಲ್ ಆಗಿರುವ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪ್ಲೇನ್ ಜೇನ್ (ಸುಂದರವಾಗಿಲ್ಲ) ಎಂದು ಕರೆಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಾನು  ಸೆಕ್ಸ್ ಸಿಂಬಲ್  ಎಂದು ಕರೆಸಿಕೊಳ್ಳುವುದರಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ಆ ಟ್ಯಾಗ್ (ಸೆಕ್ಸ್ ಸಿಂಬಲ್) ಅನ್ನು ಇಷ್ಟಪಡುತ್ತೇನೆ’ ಎಂದು ಹೇಳಿದರು. 

May be a close-up of 1 person and long hair

 

‘ಕೇವಲ ಸುಂದರ ನೋಟದಿಂದ ಮಾತ್ರ ಉದ್ಯಮದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದಿರುವ ಮಲೈಕಾ ಅರೋರಾ, ಕೇವಲ ತನ್ನ ‘ಸುಂದರ ಮುಖ’ದಿಂದ ಮಾತ್ರವಲ್ಲ ಮನರಂಜನಾ ಕ್ಷೇತ್ರದಲ್ಲಿ ಮೂರು ದಶಕಗಳ ನಂತರವೂ ಸಕ್ರೀಯವಾಗಿದ್ದೇನೆ’ ಎಂದು ಹೇಳಿದ್ದಾರೆ.

May be an image of 1 person

‘ನಾನು ಕೆಲವೇ ಹಾಡುಗಳು ಅಥವಾ ಕೆಲವೇ ಐಟಂ ಹಾಡುಗಳಿಗಿಂತ ಹೆಚ್ಚು. ನಾನು ಅವುಗಳಿಗಿಂತ ಹೆಚ್ಚು. ಆರಂಭದಲ್ಲಿ ನೋಡುತ್ತಿದ್ದರು ಅಷ್ಟೆ ಅವಳು ಸುಂದರ ಮುಖ ಹೊಂದಿದ್ದಾಳೆ, ಉತ್ತಮ ದೇಹ, ಅವಳು ತೆರೆಯ ಮೇಲೆ ಅದ್ಭುತವಾಗಿ ಕಾಣುತ್ತಾಳೆ. ಅವಳು ನೃತ್ಯ ಮಾಡುವಾಗ ತುಂಬಾ  ಚೆನ್ನಾಗಿ ಬಳಕುತ್ತಾಳೆ ಹೀಗೆ ಹೇಳುತ್ತಿದ್ದರು. ಆದರೆ 30 ವರ್ಷಗಳಿಂದ ಸಕ್ರೀಯವಾಗಿರುವುದು ಸುಲಭವಲ್ಲ ಎಂದು ನಾನು ಭಾವಿಸುತ್ತೇನೆ.  ಉತ್ತಮ ನೋಟದಿಂದ ಕೆಲವು ಹಂತದವರೆಗೂ ಮಾತ್ರ ಇರಲು ಸಾಧ್ಯ ಆದರೆ ಆ ಸುಂದರ ನೋಟ ಮಸುಕಾಗುತ್ತದೆ. ನೀವು ಆ ನೋಟವನ್ನು ಮೀರಿ ಮುಂದುವರೆಯ ಬೇಕಾಗುತ್ತದೆ’ ಎಂದು ಮಲೈಕಾ ಅರೋರಾ ಹೇಳಿದ್ದಾರೆ.

May be an image of one or more people and jewellery

ಅಭದ್ರತೆಯೊಂದಿಗೆ ಪ್ರತಿದಿನವೂ ಬದುಕಬೇಕಾಗುತ್ತದೆ ಎಂದು ಮಲೈಕಾ ಬಹಿರಂಗ ಪಡಿಸಿದರು. ಏಕೆಂದರೆ ‘ಒಂಟಿ ತಾಯಿ’ ಮತ್ತು ‘ವಿಚ್ಛೇದಿತ’ ಎಂಬ ಪದಗಳನ್ನು ಹೆಚ್ಚಾಗಿ ಅಪಹಾಸ್ಯ ಮಾಡಲು ಬಳಸಲಾಗುತ್ತದೆ ಎಂದರು. ತನ್ನ ತಲೆಯನ್ನು ನೀರಿನ ಮೇಲೆ ಇಟ್ಟುಕೊಂಡು ಎತ್ತರವಾಗಿ ನಿಲ್ಲುತ್ತೇನೆ ಎಂದು ಮಲೈಕಾ ಹೇಳಿದ್ದಾರೆ.

No photo description available.

ಖಾನ್ ಸರ್‌ನೇಮ್ ಬಗ್ಗೆ ಪ್ರತಿಕ್ರಿಯೆ

ತನ್ನ ಹೆಸರಿನಿಂದ ಖಾನ್ ಸರ್‌ನೇಮ್ ತೆಗೆದುಹಾಕದಂತೆ ಅನೇಕ ಜನರಿಂದ ಎಚ್ಚರಿಕೆ ಕೂಡ ಬಂದಿತ್ತು ಎಂದು ಮಲೈಕಾ ಹೇಳಿದ್ದಾರೆ. ಕೊನೆಯ ಹೆಸರು ಬಹಳಷ್ಟು ತೂಕ ಹೊಂದಿದ್ದರಿಂದ ಅದನ್ನು ತೆಗೆಯಬಾರದು, ತೆಗೆದು ದೊಡ್ಡ ತಪ್ಪು ಮಾಡುತ್ತಿದ್ದಾಳೆ ಎಂದು ಅನೇಕರು ಆಡಿಕೊಂಡಿದ್ದರು ಎಂದು ಮಲೈಕಾ ಹೇಳಿದರು. ಸಂದರ್ಶನದಲ್ಲಿ ಮಾತನಾಡಿದ ಮಲೈಕಾ ಖಾನ್ ಸರ್ ತೆಗೆದು ಹಾಕಿದ ಬಗ್ಗೆ ಹಂಚಿಕೊಂಡಿದ್ದಾರೆ. 

May be an image of one or more people, people standing and footwear

ಅರ್ಬಾಜ್ ಖಾನ್‌ಗೆ ವಿಚ್ಛೇದನ, ಅರ್ಜುನ್ ಜೊತೆ ಡೇಟಿಂಗ್

ಮಲೈಕಾ ಅರೋರಾ 1998ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ನವೆಂಬರ್ 2002ರಲ್ಲಿ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಿದರು. ಇಬ್ಬರೂ  ಸುಮಾರು 18 ವರ್ಷಗಳ ಕಾಲ ಸಂಸಾರ ನಡೆಸಿದರು. ಆದರೆ 2017ರಲ್ಲಿ ಇಬ್ಬರೂ ಬೇರೆ ಬೇರೆ ಆಗುವ ಮೂಲಕ ಶಾಕ್ ನೀಡಿದರು. ಆದರೆ ತಮ್ಮ ಮಗನಿಗೆ ಸಹ-ಪೋಷಕತ್ವವನ್ನು ಮುಂದುವರೆಸಿದ್ದಾರೆ. ವಿಚ್ಛೇದನ ಬಳಿಕ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಮತ್ತು ಅರ್ಜುನ್ ಕಪೂರ್ ಸದಾ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. 

May be an image of one or more people and people standing

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ