ಸುಳ್ಯ : ಹೊಳೆಯಲ್ಲಿ ಮುಳುಗಿ ಇಬ್ಬರು ಸಹೋದರಿಯರು ಮೃತ್ಯು!
Twitter
Facebook
LinkedIn
WhatsApp

ಸುಳ್ಯ, : ಬಳ ಸಮೀಪದ ಕೇನ್ಯ ಕಟ್ಕಲ್ ಬಳಿಯ ಹೊಳೆಯಲ್ಲಿ ಮುಳುಗಿ ನೀರು ಪಾಲಾಗಿದ್ದು ಇಬ್ಬರ ಮೃತದೇಹವೂಸ ಹೋದರಿಯರಿಬ್ಬರು ಪತ್ತೆಯಾಗಿದೆ.
ಇಂದು ಸಂಜೆ ಈ ದುರ್ಘಟನೆ ಸಂಭವಿಸಿದೆ. ಮೂಲತಃ ಕಲ್ ನವರಾಗಿದ್ದು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ (15) ಮತ್ತು ಅವಂತಿಕಾ (11) ಎಂಬ ಸಹೋದರಿಯರು ನೀರು ಪಾಲಾದರು.
ಸಹೋದರಿಯರು ನೀರುಪಾಲಾದ ಸುದ್ದಿ ತಿಳಿದು ಆಗಮಿಸಿದ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದು, ರಾತ್ರಿ ವೇಳೆಗೆ ಇಬ್ಬರ ಮೃತದೇಹವೂ ಪತ್ತೆಯಾಯಿತು. ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದರು