ಸುಳ್ಯ :ಮಂಟಪಕ್ಕೆ ಬಾರದೆ ನಾಪತ್ತೆಯಾದ ವರ ; ಮದುವೆ ರದ್ದು!
Twitter
Facebook
LinkedIn
WhatsApp

ಸುಳ್ಯ: ಸುಳ್ಯ ನಗರದ ಪುರಭವನದಲ್ಲಿ ಆಯೋಜನೆಯಾದ ಮದುವೆಯೊಂದು ವರ ಕಲ್ಯಾಣ ಮಂಟಪಕ್ಕೆ ಭಾರದೆ ರದ್ದುಗೊಂಡಿರುವ ಘಟನೆ ವರದಿಯಾಗಿದೆ.
ಸುಳ್ಯ ಉಬರಡ್ಕ ಗ್ರಾಮದ ಯುವತಿ ಮತ್ತು ಪುತ್ತೂರು ತಾಲೂಕು ರೆಂಜ ಗ್ರಾಮದ ಕೃಷ್ಣ ಎನ್ನುವ ಯುವಕನ ನಡುವೆ ವಿವಾಹ ನಿಶ್ಚಯವಾಗಿ ಫೆ.9 ರಂದು ಸುಳ್ಯದ ಪುರಭವನದಲ್ಲಿ ಅರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಸಂಭಾಂಗಣ ಸಿದ್ದಪಡಿಸಿ ಸುಮಾರು 500 ಮಂದಿಗೆ ಬೇಕಾಗುವಷ್ಟು ಊಟವನ್ನು ತಯಾರು ಮಾಡಲಾಗಿತ್ತು ವಧುವಿನ ಮನೆಯವರು ವದುವನ್ನು ಶೃಂಗರಿಸಿ ಅರತಕ್ಷತೆ ಕಾರ್ಯಕ್ಕೆ ತೊಡಗಿದ್ದರು ಇಷ್ಟಾದರು
ವರ ಮತ್ತು ಆತನ ಕಡೆಯವರು ಸ್ಥಳಕ್ಕೆ ಬಾರದ ಹಿನ್ನಲೆಯಲ್ಲಿ ಸಂಶಯಗೊಂಡ ವಧುವಿನ ಮನೆಯವರು ವರನ ಕಡೆಗೆ ದೂರವಾಣಿ ಸಂಪರ್ಕ ಮಾಡಿದರೆ ವರ ಮೊಬೈಲ್ ಆಪ್ ಆಗಿದ್ದು, ವದುವಿನ ಕಡೆಯವರು ಪೋನ್ ರಿಸೀವ್ ಮಾಡದರಿಂದ ವಧುವಿನ ಮನೆಯವರು ದಿಗ್ಬಮಣೆಗೊಂಡು ಸುಳ್ಯ ಠಾಣೆಗೆ ವರನ ವಿರುದ್ದ ದೂರು ನೀಡಿದ್ದಾರೆ.ಘಟನೆಯ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.