ಸುರತ್ಕಲ್: ಏಳನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
Twitter
Facebook
LinkedIn
WhatsApp
ಸುರತ್ಕಲ್, ಫೆ 14 : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃಷ್ಣಾಪುರದ ಖಾಸಗಿ ಶಾಲಾ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಏಳನೇ ತರಗತಿ ಓದುತ್ತಿದ್ದ ಕಾಟಿಪಳ್ಳದ ಹರ್ಷಿತ್ (13) ಮೃತ ವಿದ್ಯಾರ್ಥಿ.
ಪ್ರತೀ ವಾರದ ಕೊನೆಯಲ್ಲಿ ಸೂರಿಂಜೆಯಲ್ಲಿರುವ ತನ್ನ ಅಜ್ಜನ ಮನೆಗೆ ಹೋಗುವುದು ವಾಡಿಕೆ. ಈ ಬಾರಿಯೂ ಶಾಲೆ ಮುಗಿಸಿ ಶನಿವಾರ ತೆರಳಿದ್ದ ಹರ್ಷಿತ್ ರವಿವಾರ ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈತನ ತಂದೆ ಸುಧಾಕರ ದೇವಾಡಿಗ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.