ಸೋಮವಾರ, ಏಪ್ರಿಲ್ 29, 2024
ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸೀರಿಯಲ್ ಕಿಸ್ಸರ್: ಜಮುಯಿಯಲ್ಲಿ ಫೋನ್‌ನಲ್ಲಿ ಮಾತಾಡ್ತಾ ನಿಂತಿದ್ದ ಮಹಿಳೆಗೆ ಮುತ್ತಿಕ್ಕಿ ಪರಾರಿ; ವೀಡಿಯೊ ವೈರಲ್

Twitter
Facebook
LinkedIn
WhatsApp
ಸೀರಿಯಲ್ ಕಿಸ್ಸರ್: ಫೋನ್‌ನಲ್ಲಿ ಮಾತಾಡ್ತಾ ನಿಂತಿದ್ದ ಮಹಿಳೆಗೆ ಮುತ್ತಿಕ್ಕಿ ಪರಾರಿ

ಪಾಟ್ನಾ: ರಸ್ತೆ ಬದಿ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ಮಹಿಳೆಯೊಬ್ಬರಿಗೆ ಕಾಮುಕನೋರ್ವ ಓಡಿಬಂದು ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮುತ್ತಿಕ್ಕಿದ ಆಘಾತಕಾರಿ ಘಟನೆ ಬಿಹಾರದ ಜಮುಯಿಯಲ್ಲಿ (Jamui) ನಡೆದಿದೆ. ಈ ಕಾಮುಕನ ಅವಾಂತರ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದು ಈ ಸೀರಿಯಲ್ ಕಿಸ್ಸರ್ ಬಂಧನಕ್ಕೆ ಆಗ್ರಹಿಸಿದ್ದಾರೆ. 

ಹೀಗೆ ರೋಡ್ ರೋಮಿಯೋನಿಂದ ಕಿರುಕುಳಕ್ಕೊಳಗಾದ ಮಹಿಳೆ ಸ್ಥಳೀಯ ಆರೋಗ್ಯ ಕಾರ್ಯಕರ್ತೆಯಾಗಿದ್ದು(health worker), ಅವರು ಜಮುಯಿಯ ಸದರ್ ಆಸ್ಪತ್ರೆಯ ಹೊರಗೆ ರಸ್ತೆಯಲ್ಲಿ ನಿಂತುಕೊಂಡು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.  ಮಹಿಳೆ ಆತನಿಂದ ಬಿಡಿಸಿಕೊಳ್ಳಲು ಯತ್ನಿಸಿದರಾದರೂ ಸಾಧ್ಯವಾಗಿಲ್ಲ ಕಾಮುಕ ಆಕೆಯನ್ನು ಒತ್ತಾಯಪೂರ್ವಕವಾಗಿ ಸುಧೀರ್ಘವಾಗಿ ಚುಂಬಿಸಿ ಅಲ್ಲಿಂದ ಓಡಿ ಹೋಗಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social Media)ವೈರಲ್ ಆಗುತ್ತಿದ್ದಂತೆ ಈ ರೋಡ್ ರೋಮಿಯೋನನ್ನು ಕೂಡಲೇ ಬಂಧಿಸುವಂತೆ ಜನ ಆಗ್ರಹಿಸಿದ್ದಾರೆ. 

ಈ ಅನಾಹುತದ ಸಣ್ಣ ನಿರೀಕ್ಷೆಯನ್ನು ಮಾಡಿರದ ಮಹಿಳೆ ಆತನಿಂದ ಬಿಡಿಸಿಕೊಳ್ಳಲು ಒದ್ದಾಡುವುದನ್ನು ಕಾಣಬಹುದು.  ಘಟನೆ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ರೋಡ್‌ ರೋಮಿಯೋಗಾಗಿ ಬಲೆ ಬೀಸಿದ್ದಾರೆ.  ಈ ಬಗ್ಗೆ ಸುದ್ದಿಸಂಸ್ಥೆ ಆಜ್‌ತಕ್‌ನೊಂದಿಗೆ ಮಾತನಾಡಿದ ಮಹಿಳೆ ‘ಅವನು ಆಸ್ಪತ್ರೆಯ ಆವರಣಕ್ಕೆ ಏಕೆ ಬಂದನೆಂದು ನನಗೆ ತಿಳಿದಿಲ್ಲ. ನನಗೆ ಆ ಮನುಷ್ಯನ ಪರಿಚಯವೂ ಇಲ್ಲ. ನಾನು ಅವನಿಗೆ ಏನು ಮಾಡಿದೆ? ಅವನು ನನ್ನ ಮೇಲೆ ಹೀಗೆ ದೌರ್ಜನ್ಯವೆಸಗಿದಾಗ ನಾನು ವಿರೋಧಿಸಿ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದಿದ್ದೇನೆ. ಆದರೆ ಅಷ್ಟರಲ್ಲಾಗಲೇ ಆ ಖದೀಮ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಿದರು. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ