ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಫುಟ್‍ಬಾಲ್ ಫಿವರ್ – ಫಿಫಾ ಮಾದರಿ ಆ್ಯಂಥಮ್ ಸಾಂಗ್ ಮಾಡಿದ ವಿದ್ಯಾರ್ಥಿಗಳು

Twitter
Facebook
LinkedIn
WhatsApp
ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಫುಟ್‍ಬಾಲ್ ಫಿವರ್ – ಫಿಫಾ ಮಾದರಿ ಆ್ಯಂಥಮ್ ಸಾಂಗ್ ಮಾಡಿದ ವಿದ್ಯಾರ್ಥಿಗಳು

ಬೆಂಗಳೂರು: ವಿಶ್ವದಾದ್ಯಂತ ಈಗ ಫಿಫಾ ಫೀವರ್ (FIFA World Cup) ಜೋರಾಗಿದೆ. 2022ರ ಫಿಫಾ ಆ್ಯಂಥಮ್ ಸಾಂಗ್ ಸಹ ಕಾಲ್ಚೆಂಡಿನ ಆಟದ ಕ್ರೇಜ್ ಹೆಚ್ಚು ಮಾಡಿತ್ತು. ಅದರ ಜೊತೆಗೆ ಈಗ ಬೆಂಗಳೂರಲ್ಲೂ ಈ ಫಿಫಾ ಫಿವರ್ ಜೋರಾಗಿದೆ. ತಮ್ಮದೇ ಆ್ಯಂಥಮ್ ಸಾಂಗ್ ಮಾಡಿಕೊಂಡು ವಿದ್ಯಾರ್ಥಿಗಳು ಫುಟ್‍ಬಾಲ್ (Football) ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.

ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಶುರುವಾದ ಬೆನ್ನಲ್ಲೇ ಸಿಲಿಕಾನ್ ಸಿಟಿ (Bengaluru) ಜನರಲ್ಲೂ ಫುಟ್‍ಬಾಲ್ ಕ್ರೇಜ್ ಹೆಚ್ಚಿಸಿದೆ. ನಗರದ ದೊಮ್ಮಲೂರು ಬಳಿ ಇರುವ ಬಿಬಿಎಂಪಿ ಮೈದಾನದಲ್ಲಿ ನಡೆದ ಅಂತರ್ ಕಾಲೇಜು ಫುಟ್‍ಬಾಲ್ ಟೂರ್ನಮೆಂಟ್‍ಗೆ ಇಂಡಿಯನ್ ಪೀಲೆ ಎಂದೇ ಖ್ಯಾತಿ ಗಳಿಸಿರುವ ಭಾರತದ ಫುಟ್‍ಬಾಲ್ ದಂತಕತೆ ನಾರಾಯಣಸ್ವಾಮಿ ಉಲಘನಾಥನ್ ಆಗಮಿಸಿದ್ರು. ಈ ವೇಳೆ ವಿದ್ಯಾರ್ಥಿಗಳು ಸೇರಿ ಮಾಡಿದ ಆ್ಯಂಥಮ್ ಸಾಂಗ್ ಗಮನಸೆಳೆಯಿತು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣಸ್ವಾಮಿ ಉಲಘನಾಥನ್, ನಾವು ಭಾರತವನ್ನು ಪ್ರತಿನಿಧಿಸುವ ಕಾಲದಲ್ಲಿ ಈಗ ನೋಡುವ ಫುಟ್‍ಬಾಲ್ ಕ್ರೇಜ್ ಇರಲಿಲ್ಲ. ಈಗ ನಮ್ಮ ಹುಡುಗರು ಫುಟ್‍ಬಾಲ್ ಬಗ್ಗೆ ಇಷ್ಟೊಂದು ಉತ್ಸಾಹದಿಂದಿರುವುದು ನೊಡೋಕೆ ಖುಷಿ ಆಗುತ್ತೆ. ಕರ್ನಾಟಕ ನನ್ನ ಎರಡನೇ ತವರು. ಇಲ್ಲಿ ಬರೋದು ಖುಷಿ ಆಗುತ್ತೆ ಎಂದಿದ್ದಾರೆ.

ಕ್ರಿಕೆಟ್ ಅನ್ನೆ ಹಾಸಿಹೊದ್ದಿರುವ ಭಾರತದಲ್ಲಿ ಫುಟ್‍ಬಾಲ್ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿಯಿದ್ರೂ ಸರಿಯಾದ ಅವಕಾಶಗಳ ಕೊರತೆಯಿದೆ. ಸರ್ಕಾರಗಳು ಫುಟ್‍ಬಾಲ್ ಬಗ್ಗೆಯೂ ಆಸಕ್ತಿ ತೋರಿದ್ರೇ ಭಾರತವೂ ಫುಟ್‍ಬಾಲ್‍ನಲ್ಲಿ ಮಿಂಚಬಹುದು. ಭಾರತದಲ್ಲಿ ಈಗಾಗಲೇ ಐಪಿಎಲ್ ಮಾದರಿಯಲ್ಲೇ ಫುಟ್‍ಬಾಲ್ ಲೀಗ್ ಕೂಡ ನಡೆಯುತ್ತಿದೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿದೆ. ಇನ್ನಷ್ಟು ಅವಕಾಶ ಸಿಕ್ಕರೆ ಭಾರತ ಕೂಡ ಫುಟ್‍ಬಾಲ್‍ನಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ