ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ನಡುವೆ ಮೊದಲಿನಿಂದಲೂ ನಂಟು ಇದೆ. ಚಿತ್ರರಂಗದಲ್ಲಿ ಮಿಂಚಿದ ಹಲವರು ರಾಜಕೀಯಕ್ಕೆ ಕಾಲಿಟ್ಟು ಸಾಧನೆ ಮಾಡಿದ್ದಾರೆ. ಅದೇ ರೀತಿ, ರಾಜಕೀಯದಲ್ಲಿ ಸಾಧನೆ ಮಾಡಿದ ಅನೇಕರು ನಂತರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಉದಾಹರಣೆ ಇದೆ. ಈಗಿನದ್ದು ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಸರದಿ. ಹೌದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕನ್ನಡದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರಕ್ಕೆ ‘ತನುಜಾ’ (Tanuja Kannada movie) ಎಂದು ಶೀರ್ಷಿಕೆ ಇಡಲಾಗಿದೆ. ಇದರ ಚಿತ್ರೀಕರಣ ಕೂಡ ಆರಂಭ ಆಗಿದ್ದು, ಶೂಟಿಂಗ್ನಲ್ಲಿ ಬಿಎಸ್ವೈ ಭಾಗಿಯಾಗಿರುವ ಫೋಟೋಗಳು ಲಭ್ಯವಾಗಿವೆ. ಅಷ್ಟಕ್ಕೂ ಮಾಜಿ ಮುಖ್ಯಮಂತ್ರಿಗೆ ಈ ಸಿನಿಮಾದಲ್ಲಿ ನಟಿಸಬೇಕು ಎನಿಸಿದ್ದು ಯಾಕೆ? ಅದಕ್ಕೊಂದು ಮುಖ್ಯ ಕಾರಣವಿದೆ. ಇದು ರಿಯಲ್ ಲೈಫ್ ಘಟನೆ ಆಧರಿಸಿದ ಸಿನಿಮಾ. ಕೊವಿಡ್ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲು ಸುಮಾರು 350ಕಿಮೀ ದೂರ ಪ್ರಯಾಣ ಮಾಡಿ ಗಮನ ಸೆಳೆದಿದ್ದ ಹುಡುಗಿಯ ಕಥೆ ರೋಚಕತೆಯಿಂದ ಕೂಡಿದೆ. ಆ ಘಟನೆ ಎಲ್ಲರ ಗಮನ ಸೆಳೆದಿತ್ತು. ಇದನ್ನೇ ಒನ್ಲೈನ್ ಸ್ಟೋರಿ ಆಗಿಸಿಕೊಂಡು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿಯವರು ಈ ಚಿತ್ರವನ್ನು (BS Yediyurappa Film) ನಿರ್ದೇಶಿಸುತ್ತಿದ್ದಾರೆ. ಅದರಲ್ಲಿ ಬಿ.ಎಸ್. ಯಡಿಯೂರಪ್ಪ ನಟಿಸುತ್ತಿರುವುದು ವಿಶೇಷ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist