ಸಿದ್ದರಾಮಯ್ಯ ಸರ್ಕಾರ ಟೀಕಿಸಿದ್ದ ಶಿಕ್ಷಕ ಸಸ್ಪೆಂಡ್!

ಚಿತ್ರದುರ್ಗ: ನೂತನ ಸಿದ್ದರಾಮಯ್ಯ ಸರ್ಕಾರವನ್ನು (Siddaramaiah Government) ಟೀಕಿಸಿ ಸೋಶಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಿಕೊಂಡಿದ್ದ ಶಿಕ್ಷಕರೊಬ್ಬರನ್ನು (Teacher) ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಶಾಂತಮೂರ್ತಿ ಎಂಜಿ ಅಮಾನತ್ತಾದ ಶಿಕ್ಷಕ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ (Hosadurga, Chitradurga) ಕಾನುಬೆನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಫೇಸ್ಬುಕ್ನಲ್ಲಿ ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳನ್ನು ಟೀಕಿಸಿ ಪೋಸ್ಟ್ ಮಾಡಿಕೊಂಡಿದ್ದರು. ಇದರ ಜೊತೆಗೆ ರಾಜ್ಯ ಸರ್ಕಾರವನ್ನು (Government Of Karnataka) ಟೀಕಿಸಿದ್ದರು. ಉಚಿತ ಯೋಜನೆಗಳನ್ನು ನೀಡುವುದು ಬಿಟ್ಟು ನಿಮ್ಮಿಂದ ಏನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು.
ಇದರ ಜೊತೆಗೆ ಎಸ್.ಎಂ.ಕೃಷ್ಣ 3,590 ಕೋಟಿ ರೂಪಾಯೊ, ಧರಂ ಸಿಂಗ್ 15,635 ಕೋಟಿ ರೂ., ಹೆಚ್.ಡಿ.ಕುಮಾರಸ್ವಾಮಿ ರೂ. 3,545 ಕೋಟಿ, ಬಿ.ಎಸ್. ,42,000 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಶಾಂತಮೂರ್ತಿ ಎಫ್ಬಿಯಲ್ಲಿ ಬರೆದುಕೊಂಡಿದ್ದರು.