ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸಿಡ್ನಿ ಹುಡುಗನ ಜೊತೆ ಲಕ್ಷಣದ ಶ್ವೇತಾ ಮದ್ವೆಯಂತೆ?!

Twitter
Facebook
LinkedIn
WhatsApp
2021 4image 14 06 316011468board ll 4

ಸೀರಿಯಲ್ ಕಂಡ್ರಾಗದವ್ರೂ ಸೋಷಿಯಲ್ ಮೀಡಿಯಾದಲ್ಲಿ ‘ಲಕ್ಷಣ’ ಸೀರಿಯಲ್ ಗ್ಲಿಂಪ್ಸ್ ಬಂದ್ರೆ ಒಂದು ಕ್ಷಣ ವೀಡಿಯೋ ನೋಡಿ ಮುಂದೆ ಹೋಗ್ತಾರೆ. ಇದಕ್ಕೆ ಕಾರಣ ಈ ಸೀರಿಯಲ್ ಕಥೆ. ಆದ್ರೆ ಇದೀಗ ಒಂದು ಬ್ರೇಕಿಂಗ್ ಸುದ್ದಿ ಬಂದಿದೆ. ಈ ಸೀರಿಯಲ್‌ನಲ್ಲಿ ಸಂಚಿನ ಮೇಲೆ ಸಂಚು ಮಾಡ್ಕೊಂಡು ನಾಯಕಿ ನಕ್ಷತ್ರಳನ್ನು ಒಂದಲ್ಲ ಒಂದು ರೀತಿ ಹಣಿಯಲು ನೋಡ್ತಿರೋ ಪಾತ್ರ ಶ್ವೇತಾದು. ಈ ಪಾತ್ರ ನಿರ್ವಹಿಸ್ತಿರೋ ನಟಿ ಸುಕೃತಾ ನಾಗ್. ಈ ಹಿಂದೆ ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ಮುದ್ದು ಮುದ್ದಾಗಿ ಮಾತಾಡೋ ಮುದ್ದು ತಂಗಿಯಾಗಿ ಗಮನ ಸೆಳೆದಿದ್ದ ಸುಕೃತಾ ಈ ಸೀರಿಯಲ್‌ನಲ್ಲಿ ಮಾತ್ರ ಕಂಪ್ಲೀಟ್ ಉಲ್ಟಾ ರೋಲ್ ನಲ್ಲಿ ಮಿಂಚುತ್ತಿದ್ದಾರೆ. ಅದು ವಿಲನ್ ಪಾತ್ರ. ತಾನು ಮದುವೆ ಆಗಬೇಕಾಗಿರುವ ಹುಡುಗನನ್ನು ಮದುವೆ ಆದ ನಕ್ಷತ್ರ ಮೇಲೆ ಸೇಡು ತೀರಿಸಿಕೊಳ್ಳುವ ಪಾತ್ರ. ಆಕೆಯ ಮದುವೆಯನ್ನು ಮುರಿದು ಭೂಪತಿಯನ್ನು ತಾನೇ ಮದುವೆ ಆಗಬೇಕು ಅನ್ನೋ ಹುನ್ನಾರ ಮಾಡ್ತಿರ್ತಾಳೆ ಶ್ವೇತಾ. ಅದೇ ಶ್ವೇತಾ ಇದೀಗ ಹಸೆಮಣೆ ಏರೋದಕ್ಕೆ ರೆಡಿ ಆಗ್ತಿದ್ದಾಳೆ ಅಂದರೆ ನಂಬ್ತೀರಾ?

ಅರೆ, ಶ್ವೇತಾ ಭೂಪತಿ ಮದ್ವೆ ಆಗ್ತಿದ್ದಾರ, ಮತ್ತೆ ನಕ್ಷತ್ರ ಗತಿ? ಅನ್ನಬೇಡಿ ಮತ್ತೆ. ಸೀರಿಯಲ್‌ನಲ್ಲಿ ಶ್ವೇತಾಗೆ ಹಸೆಮಣೆ ಏರೋ ಭಾಗ್ಯ ತಪ್ಪಿಹೋದರೂ ಈ ಪಾತ್ರ ಮಾಡಿರೋ ಸುಕೃತಾಗೆ ಹಸೆಮಣೆ ಏರೋ ಭಾಗ್ಯ ಒದ್ದುಕೊಂಡು ಬಂದ ಹಾಗಿದೆ. ಹೌದು, ಸುಕೃತಾ ಮದ್ವೆ ಆಗ್ತಿದ್ದಾರೆ. ಯಾರು ಹುಡುಗ? ಸಿನಿಮಾ, ಸೀರಿಯಲ್ ಫೀಲ್ಡ್‌ನವ್ರಾ? ಲವ್ ಮ್ಯಾರೇಜಾ, ಅರೇಂಜ್ಡಾ? ಯಾವಾಗ ಮದ್ವೆ? ಹೀಗೆಲ್ಲ ಏನೇನೋ ಪ್ರಶ್ನೆಗೆ ತಲೆಗೆ ಬರಬಹುದು. ಅದಕ್ಕೆಲ್ಲ ಉತ್ತರವನ್ನು ಸುಕೃತಾ ಅವರೇ ಕೊಟ್ಟಿದ್ದಾರೆ.

ಅಂದಹಾಗೆ ಸುಕೃತಾ ಈ ವಿಚಾರ ತಿಳಿಸಿರೋದು ತನ್ನ ಯೂಟ್ಯೂಬ್‌ ಚಾನಲ್‌ನಲ್ಲಿ. ಅದು ಯೂಟ್ಯೂಬ್‌ನಲ್ಲಿ ನೇರವಾಗಿ ತನ್ನ ಸೀರಿಯಲ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್‌ಗೆ ಕಾಲ್ ಮಾಡಿ ಈ ವಿಚಾರ ತಿಳಿಸಿದ್ದಾರೆ. ತಾನು ಸಿಡ್ನಿ ಹುಡುಗನನ್ನು ಮದ್ವೆ ಆಗ್ತಿದ್ದೀನಿ. ಈ ವರ್ಷದ ಕೊನೆಯಲ್ಲಿ ಮದುವೆ. ಅಮ್ಮನೆ ನೋಡಿರೋ ಹುಡುಗ. ಅರೇಂಜ್ಡ್ ಮ್ಯಾರೇಜ್ ಅನ್ನೋ ಸಂಗತಿಯನ್ನು ಸುಕೃತಾ ಹೇಳಿದ್ದಾರೆ. ಅದನ್ನು ಕೇಳಿ ಫ್ರೆಂಡ್ಸ್ ಎಲ್ಲ ಸಖತ್‌ ಖುಷಿಯಾಗಿ ವಿಶ್ ಮಾಡಿದ್ದಾರೆ. ಆದರೆ ಒಬ್ಬ ಬೆಸ್ಟ್ ಫ್ರೆಂಡ್ ಮಾತ್ರ ಈ ವಿಚಾರಕ್ಕೆ ಚೆನ್ನಾಗಿಯೇ ಕ್ಲಾಸ್ ತಗೊಂಡಿದ್ದಾರೆ.

ಅಂದಹಾಗೆ ಸುಕೃತಾ ಕಾಲ್ ಮಾಡಿ ತನ್ನ ಮದುವೆ ವಿಚಾರ ತಿಳಿಸಿದ್ದು ಲಕ್ಷಣ ಸೀರಿಯಲ್‌ನಲ್ಲಿ ಡೆವಿಲ್ ಭಾರ್ಗವಿ ಪಾತ್ರದಲ್ಲಿ ಮಿಂಚುತ್ತಿರುವ ಪ್ರಿಯಾ ಷಟಮರ್ಷನ್, ವಿಜಯಲಕ್ಷ್ಮಿ ಹಾಗೂ ಆಕೆಯ ಸ್ನೇಹಿತರಿಗೆ. ಮೊದಲಿಗೆ ಪ್ರಿಯಾಗೆ ಕಾಲ್ ಮಾಡಿ ವಿಷಯ ತಿಳಿಸಿದಾಗ ಅವರು ಸಖತ್ ಥ್ರಿಲ್ ಆದ್ರು. ತನ್ನ ಬೆಸ್ಟ್ ಫ್ರೆಂಡ್‌ಗೆ ಅಭಿನಂದನೆಯನ್ನು ತನ್ನದೇ ಸ್ಟೈಲಲ್ಲಿ ತಿಳಿಸಿದ್ರು. ಆಮೇಲೆ ವಿಜಯಲಕ್ಷ್ಮಿಗೆ ಕಾಲ್ ಮಾಡಿ ಹೇಳಿದಾಗಲೂ ಆಕೆ ಇದನ್ನು ಕೇಳಿ ಖುಷಿ ಪಟ್ರು. ಆದ್ರೆ ಬೆಸ್ಟ್ ಫ್ರೆಂಡ್(Best feriend) ಒಬ್ಬರು ಮಾತ್ರ ಎಲ್ಲ ಫೈನಲ್ ಆದಮೇಲೆ ಈ ವಿಷಯ ಹೇಳ್ತೀಯಾ, ಮೊದಲೇ ಒಂದು ಮಾತು ಹೇಳ್ಬೇಕು ಅಂತ ಅನಿಸಿಲ್ವಾ ಅಂತ ಸಕತ್ತಾಗೇ ಕ್ಲಾಸ್(Class) ತಗೊಂಡ್ರು.

ಅಂದಹಾಗೆ ಸುಕೃತಾ ಈ ವೀಡಿಯೋ(Vedio) ಮಾಡಿರೋದು ಏಪ್ರಿಲ್ 1ಕ್ಕೆ. ಇಷ್ಟು ಹೇಳಿದಾಗ್ಲೇ ನಿಮಗೆಲ್ಲ ಗೊತ್ತಾಗಿರಬಹುದಲ್ವಾ, ವಿಷ್ಯ ಏನು ಅಂತ.. ಯೆಸ್, ಸುಕೃತಾ ತನ್ನ ಮದ್ವೆ ಅಂತ ಹೇಳಿ ಎಲ್ರನ್ನೂ ಬಕ್ರಾ(April fool) ಮಾಡಿದ್ದಾರೆ. ಹಿಂದಿನ ದಿನವೇ ನಾಳೆ ಒಂದು ವಿಷ್ಯ ಹೇಳ್ತೀನಿ ಅಂತ ಹೇಳಿದ ಕಾರಣ ಎಲ್ಲರೂ ನಂಬಿ ಬಿಟ್ಟಿದ್ದಾರೆ. ಕೊನೆಗೆ ತಾವು ಬಕ್ರಾ ಆಗಿರೋದು ಗೊತ್ತಾದ್ಮೇಲೂ ಸುಕೃತಾಗೆ ಒಳ್ಳೆ ಹುಡುಗನ ಜೊತೆ ಮದ್ವೆ ಆಗಲಿ ಅಂತ ಅವರೆಲ್ಲ ಶುಭ ಹಾರೈಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist