ಬುಧವಾರ, ಫೆಬ್ರವರಿ 8, 2023
ಯುವತಿಗೆ ಮೆಸೇಜ್ ಮಾಡಿದಕ್ಕೆ ಸಹೋದರನಿಂದ ಯುವಕನ ಮೇಲೆ ಹಲ್ಲೆ-ಟರ್ಕಿ ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 8 ಸಾವಿರ; ಗಾಯಾಳುಗಳ ಸಂಖ್ಯೆ 35 ಸಾವಿರ, ರಕ್ಷಣಾ ಕಾರ್ಯಕ್ಕೆ ಅಡಚಣೆ-ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು-ಕಾರ್ಕಳ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ-ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು-ಬೈಕ್‌ನಲ್ಲಿ ರಾಂಚಿ ಸ್ಟೇಡಿಯಂನಿಂದ ಬಿಂದಾಸ್‌ ಆಗಿ ಹೊರಟ ಎಂ ಎಸ್ ಧೋನಿ..! ವಿಡಿಯೋ ವೈರಲ್-ಹೊಸ ಮುಖದ ಬಗ್ಗೆ ರಾಹುಲ್ ಗಾಂಧಿ ಒಲವು. ಕೊಡಗಿನಲ್ಲಿ ಪೊನ್ನನ್ನ,ಡಾ. ಮಂತರ್ ಗೌಡ, ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಬಹುತೇಕ ಫಿಕ್ಸ್.-ಡಿಕ್ಕಿಹೊಡೆದ ಗಡಿಬಿಡಿಗೆ ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳೆ; ಬೈಕ್ ಸವಾರ ಸ್ಥಳದಲ್ಲಿಯೇ ಸಾವು-ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ-ಮಂಗಳೂರು: ವಿಷಾಹಾರ ಸೇವಿಸಿದ ನರ್ಸಿಂಗ್ ವಿದ್ಯಾರ್ಥಿಗಳ ಪೈಕಿ ಹಲವರು ಚೇತರಿಕೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಇಂದು ದೇಶದ ಸಂವಿಧಾನ ಜಾರಿಗೆ ಬಂದ ದಿನ: ಘನತೆಯತ್ತ ಸಾಗುತ್ತಿದೆ ಭಾರತದ ಗಣತಂತ್ರ

Twitter
Facebook
LinkedIn
WhatsApp
ಇಂದು ದೇಶದ ಸಂವಿಧಾನ ಜಾರಿಗೆ ಬಂದ ದಿನ: ಘನತೆಯತ್ತ ಸಾಗುತ್ತಿದೆ ಭಾರತದ ಗಣತಂತ್ರ

ಭಾರತ ಇಂದು ಜಗತ್ತಿನ 5ನೇ ಪ್ರಬಲ ಆರ್ಥಿಕ ಶಕ್ತಿಯಾಗಿದೆ. ಹಾಲು, ಸಕ್ಕರೆ, ಧಾನ್ಯ, ಹಣ್ಣು, ತರಕಾರಿ ಉತ್ಪಾದನೆಯಲ್ಲಿ ಹಲವಾರು ಪ್ರಥಮಗಳನ್ನು ಸಾಧಿಸಿದೆ. ನೆರೆಯ ದೇಶಗಳಲ್ಲಿ ಆಹಾರಕ್ಕಾಗಿ ಹಾಹಾಕಾರ ಎದ್ದಿದೆ. ಆದರೆ ಭಾರತ ತನ್ನ ಶೇ.80ರಷ್ಟು ಜನರಿಗೆ ಉಚಿತ ಆಹಾರಧಾನ್ಯ ಹಂಚುವಷ್ಟು ಸಮೃದ್ಧವಾಗಿದೆ. ವ್ಯಾಪಾರ, ವ್ಯವಹಾರ, ವೈದ್ಯಕೀಯ ಮತ್ತು ರಾಜತಾಂತ್ರಿಕತೆ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ವಿಷಯದಲ್ಲೂ ಭಾರತವನ್ನು ಕಡೆಗಣಿಸಲಾಗದ ಸ್ಥಿತಿ ಜಾಗತಿಕ ವಲಯದಲ್ಲಿ ನಿರ್ಮಾಣವಾಗಿದೆ. 

ಭಯೋತ್ಪಾದನೆ, ದೇಶದ್ರೋಹ, ನಕ್ಸಲ್‌ವಾದಗಳ ಮಗ್ಗಲು ಮುರಿದಿದೆ. ಪ್ರಬಲ ರಕ್ಷಣಾ ವ್ಯವಸ್ಥೆಯ ವ್ಯೂಹ ದೇಶವನ್ನು ಆಂತರಿಕ ಮತ್ತು ಬಾಹ್ಯ ವೈರಿಗಳಿಂದ ಸುರಕ್ಷಿತವಾಗಿಸಿದೆ. ಇಡೀ ಜಗತ್ತಿಗೆ ಆರ್ಥಿಕ ಕುಸಿತ ಉಂಟಾದರೂ ಭಾರತ ನಲುಗದಂತೆ ನಿಂತಿದೆ. ಕೊರೊನಾದಂತಹ ಹೆಮ್ಮಾರಿಯನ್ನು ಕಟ್ಟಿಹಾಕುವ ಔಷಧಿ ಕಂಡು ಹಿಡಿದಿದೆ. ಅಭಿವೃದ್ಧಿಯ ಹೊಸ ಪರ್ವವೇ ಆರಂಭವಾಗಿದೆ. ಹೀಗಾಗಿ ಜಗತ್ತು ಇಂದು ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.

ಮುಂಬರುವ ದಿನಗಳಲ್ಲಿ ಭಾರತ ಜಗತ್ತಿನ ಪ್ರಬಲ ರಾಷ್ಟ್ರವಾಗಲಿದೆ. ಅದಕ್ಕೆಲ್ಲ ಕಾರಣ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ವಿದೇಶಾಂಗ ನೀತಿ, ಅಭಿವೃದ್ಧಿ ಯೋಜನೆಗಳು ಮತ್ತು ಸರ್ವೋತ್ತಮ ನಾಯಕತ್ವ. ಸಂವಿಧಾನ ನಿರ್ಮಾಪಕರ ಉದ್ದೇಶ ಈ ದೇಶ ಸಹಕಾರಿ ತತ್ವದ ಮೇಲೆ ರಚನೆಯಾದ ಸಶಕ್ತ ಒಕ್ಕೂಟ ವ್ಯವಸ್ಥೆಯಾಗಬೇಕು. ಪಕ್ಷ ರಾಜಕಾರಣದ ಭಿನ್ನ ಹಿತಾಸಕ್ತಿಯ ಕಾರಣಕ್ಕೆ ರಾಜ್ಯ ಸರ್ಕಾರಗಳು ಪ್ರತ್ಯೇಕ ಡೋಮಿನಿಯನ್‌ ರೀತಿಯಲ್ಲಿ ವರ್ತಿಸಬಾರದು ಎಂಬುದಾಗಿತ್ತು. ಅಭಿವ್ಯಕ್ತಿ ಹೆಸರಿನಲ್ಲಿ ಸ್ಯೂಡೋ ಸೆಕ್ಯೂಲರ್‌ಗಳು, ಭಯೋತ್ಪಾದಕರು ಹಾಗೂ ಅಭಿವೃದ್ಧಿವಿರೋಧಿ ಮನಸ್ಥಿತಿಯ ಕೆಲ ಮಾಧ್ಯಮಗಳು ದೇಶದ ಅಖಂಡತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಲೇ ಇದ್ದರೂ ಕಠಿಣ ಕಾನೂನು ವ್ಯವಸ್ಥೆ ಮತ್ತು ಸಶಕ್ತ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ