ಸೋಮವಾರ, ಏಪ್ರಿಲ್ 29, 2024
ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!-ಲೈಂಗಿಕ ಹಗರಣ ಪ್ರಕರಣ; ಶಾಸಕ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ತನಿಖೆ ಆರಂಭ-ಪುತ್ತೂರು: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು.!-ಸ್ವಾಭಿಮಾನಿ ರಾಜಕಾರಣಿ, ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ-ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸದ್ಯಕ್ಕೆ ಡಿಕೆಶಿ ಬಂಧನ ಮಾಡುವ ಉದ್ದೇಶ ಇಲ್ಲ: ಕೋರ್ಟ್‌ಗೆ ಇ.ಡಿ

Twitter
Facebook
LinkedIn
WhatsApp
ಸದ್ಯಕ್ಕೆ ಡಿಕೆಶಿ ಬಂಧನ ಮಾಡುವ ಉದ್ದೇಶ ಇಲ್ಲ: ಕೋರ್ಟ್‌ಗೆ ಇ.ಡಿ

ನವದೆಹಲಿ(ನ.24):  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.) ಸಲ್ಲಿಸಿದ್ದ ಎರಡನೇ ಇಸಿಐಆರ್‌ (ಜಾರಿ ನಿರ್ದೇಶನಾಲಯದ ಮಾಹಿತಿ ವರದಿ) ರದ್ದು ಮಾಡುವಂತೆ ಕೋರಿ ಹಾಗೂ ಬಂಧನದಿಂದ ರಕ್ಷಣೆ ನೀಡುವಂತೆ ಮನವಿ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬುಧವಾರ ದೆಹಲಿ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಎರಡನೇ ಇಸಿಐಆರ್‌ ಸಲ್ಲಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಇ.ಡಿ, ಸದ್ಯಕ್ಕೆ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುವ ಉದ್ದೇಶ ತನಗಿಲ್ಲ ಎಂದು ತಿಳಿಸಿದೆ.

2018ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ.ಯು ಈಗಾಗಲೇ ತನಿಖೆ ನಡೆಸಿದ್ದು, ಇದೀಗ 2020ರಲ್ಲಿ ಮತ್ತೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ. ದಾಖಲಿಸಿರುವ ಇಸಿಐಆರ್‌ ಅನ್ನು ರದ್ದು ಮಾಡುವಂತೆ ಕೋರಿ ಡಿ.ಕೆ.ಶಿವಕುಮಾರ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 2018 ಮತ್ತು 2020ರಲ್ಲಿ ದಾಖಲಾದ ಪ್ರಕರಣಗಳು ಒಂದೇ ರೀತಿಯ ಅಪರಾಧಕ್ಕೆ ಸಂಬಂಧಿಸಿದ್ದಾಗಿವೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಪದೇ ಪದೇ ಇ.ಡಿ. ಸಮನ್ಸ್‌ ಜಾರಿ ಮಾಡುತ್ತಿದೆ. ಹೀಗಾಗಿ ಬಂಧನದಿಂದಲೂ ರಕ್ಷಣೆ ನೀಡುವಂತೆ ಕೋರಿ ಅವರು ಮನವಿ ಮಾಡಿದ್ದರು.

ಡಿ.ಕೆ.ಶಿವಕುಮಾರ್‌ ಅವರ ಅರ್ಜಿಗೆ ಆಕ್ಷೇಪ ಸಲ್ಲಿಸಿ ಅಫಿಡವಿಟ್‌ ಸಲ್ಲಿಸಿದ ಇ.ಡಿ, ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ದಾಖಲಾಗಿರುವ ಇಸಿಐಆರ್‌ಗಳು ವಿಭಿನ್ನ ವಾಸ್ತವಾಂಶಗಳನ್ನು ಅವಲಂಬಿಸಿವೆ. ಅಲ್ಲದೆ, ಈ ಕುರಿತ ವಿಚಾರಣೆಯನ್ನು ಆರಂಭ ಮಾಡುವ ಸಂದರ್ಭ ಪಾಲಿಸಬೇಕಾದ ಮಾರ್ಗಸೂಚಿಗಳೂ ವಿಭಿನ್ನವಾಗಿವೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡ ಹಣದ ಪ್ರಮಾಣವೂ ವಿಭಿನ್ನವಾಗಿದೆ ಎಂದು ವಾದಿಸಿದೆ. ಹೀಗಾಗಿ ಅರ್ಜಿದಾರರು ತಾನು ಅದೇ ಪ್ರಕರಣದಲ್ಲಿ ಈಗಾಗಲೇ ತನಿಖೆಗೊಳಗಾಗಿದ್ದೇನೆ ಎಂದು ಹೇಳುವಂತಿಲ್ಲ ಎಂದು ಇ.ಡಿ. ವಾದಿಸಿದೆ. ಇ.ಡಿ.ಯ ಈ ಅಫಿಡವಿಟ್‌ಗೆ ಉತ್ತರ ನೀಡಲು ನ್ಯಾ. ಮುಕ್ತಾ ಗುಪ್ತಾ ಮತ್ತು ಅನಿಶ್‌ ದಯಾಳ್‌ ಅವರಿದ್ದ ಪೀಠವು ಡಿ.ಕೆ.ಶಿವಕುಮಾರ್‌ ಅವರಿಗೆ ಒಂದು ವಾರಗಳ ಕಾಲ ನೀಡಿದೆ. ಮುಂದಿನ ವಿಚಾರಣೆಯನ್ನು ಡಿ.2ಕ್ಕೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

ದುಬೈಗೆ ತೆರಳಲು ಕೋರ್ಟ್‌ ಅನುಮತಿ ಕೋರಿದ ಡಿಕೆಶಿ

ದೆಹಲಿಯ ತಮ್ಮ ಫ್ಲ್ಯಾಟ್‌ನಲ್ಲಿ ಸಿಕ್ಕ ಹಣದ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಇ.ಡಿ.ನ್ಯಾಯಾಲಯದ ಎದುರು ಬುಧವಾರ ಹಾಜರಾದ ಡಿ.ಕೆ.ಶಿವಕುಮಾರ್‌ ಅವರು ಡಿ.1ರಿಂದ 8ರ ವರೆಗೆ ದುಬೈ ಪ್ರವಾಸಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಿದರು. ಈ ಕುರಿತು ನ.26ಕ್ಕೆ ತನ್ನ ಅಭಿಪ್ರಾಯ ತಿಳಿಸುವುದಾಗಿ ಇ.ಡಿ. ಹೇಳಿದ್ದು, ಮುಂದಿನ ವಿಚಾರಣೆಯನ್ನು ಜ.18ಕ್ಕೆ ಮುಂದೂಡಲಾಗಿದೆ.

ಐಟಿ ಎಫ್‌ಐಆರ್‌ನಲ್ಲಿ ಮತ್ತು ಸಿಬಿಐನಿಂದ ಮಾಡಲ್ಪಟ್ಟಆರೋಪವು ಪ್ರಕರಣದ ವಿಭಿನ್ನ ವಿಧಾನವನ್ನು ತೋರಿಸುತ್ತದೆ. ಜತೆಗೆ ಇದರಲ್ಲಿ ಬೇರೆ ಬೇರೆ ವ್ಯಕ್ತಿಗಳ ಪಾತ್ರವೂ ಬೆಳಕಿಗೆ ಬರಬಹುದು.

ಇದಕ್ಕೂ ಮೊದಲು ಡಿ.ಕೆ.ಶಿವಕುಮಾರ್‌ ಪರ ವಕೀಲರು ಪದೇ ಪದೇ ಸಮನ್ಸ್‌ ನೀಡುವ ವಿಚಾರ ಪ್ರಸ್ತಾಪಿಸಿ ಬಂಧನದಿಂದ ರಕ್ಷಣೆ ನೀಡುವಂತೆ ಮನವಿ ಮಾಡಿದಾಗ, ನ್ಯಾಯಪೀಠವು ಇ.ಡಿ.ಅಧಿಕಾರಿಗಳನ್ನು ಕರೆಸಿ ಈ ಕುರಿತು ಸ್ಪಷ್ಟನೆ ಕೇಳಿತು. ಆಗ ಅಧಿಕಾರಿಗಳು ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುವ ಸಾಧ್ಯತೆ ಸದ್ಯಕ್ಕಂತೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ