ಸತತ ಮೂರು ಚುನಾವಣೆಯಲ್ಲಿ ಮಡಿಕೇರಿಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಕಾಂಗ್ರೆಸ್. ಈ ಬಾರಿ ಬಿಜೆಪಿ ಭದ್ರಕೋಟೆಯನ್ನು ನುಚ್ಚುನೂರು ಮಾಡಿ ರಾಜ್ಯದಲ್ಲಿ ಇತಿಹಾಸ ನಿರ್ಮಿಸಿದ ಡಾ. ಮಂತರ್ ಗೌಡ
ಮಡಿಕೇರಿ: ಸತತ ಮೂರು ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದು ಜಯಗಳಿಸುವ ಆಸೆಯನ್ನು ಬಿಟ್ಟಿದ್ದ ಮಡಿಕೇರಿ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಹಾಗೂ ಸಂಘಟನಾತ್ಮಕವಾಗಿ ಪ್ರಬಲವಾಗಿದ್ದ ಬಿಜೆಪಿಯನ್ನು ಐತಿಹಾಸಕ ವಾಗಿ ಸೋಲಿಸಿ ಇತಿಹಾಸ ಬರೆದಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ.
ಕಳೆದ ಮೂರು ಚುನಾವಣೆಗಳಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಸೋಲು ಅನುಭವಿಸುತ್ತಿದ್ದ ಮಡಿಕೇರಿ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಬಿಜೆಪಿಯನ್ನು ತನ್ನ ಅಭಿವೃದ್ಧಿ ಚಿಂತನೆ, ಸಮೃದ್ಧ ಕೊಡಗು ಪರಿಕಲ್ಪನೆಯ ಮೂಲಕ ಡಾ. ಮಂತರ್ ಗೌಡ ನುಚ್ಚುನೂರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಯಾರು ಊಹಿಸದ ರೀತಿಯಲ್ಲಿ ತನ್ನದೇ ರೀತಿಯಲ್ಲಿ ಅಭಿವೃದ್ಧಿಯ ಬಗ್ಗೆ ಸಾಮಾಜಿಕ ಜಾಲತಾಣದ ಮುಖಾಂತರ ಪ್ರಬಲವಾಗಿ ಪ್ರಚಾರ ಮಾಡಿದ ಡಾ. ಮಂಥರ್ ಗೌಡ, ಇಡೀ ಕರ್ನಾಟಕದ ಕಾಂಗ್ರೆಸ್ಸಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಅಚ್ಚರಿಯ ಫಲಿತಾಂಶವನ್ನು ನಿರೀಕ್ಷೆಯಂತೆ ತಂದಿದ್ದಾರೆ.
ಆರಂಭದ ದಿನಗಳಲ್ಲಿ ಕಾಂಗ್ರೆಸ್ ಇದು ಜಯಗಳಿಸಲು ಕಷ್ಟ ಇರುವ ಸೀಟು ಎಂದು ಅಂದಾಜಿಸಿತ್ತು. ಆದರೆ ಡಾ. ಮಂತರ್ ಗೌಡ ಅವರ ಪರವಾದ ಪ್ರಬಲವಾದ ತಂತ್ರಗಾರಿಕೆ ಬಿಜೆಪಿಯ ಬುಡವನ್ನೇ ಅಲುಗಾಡಿಸಿದೆ.