ಸಕಾಲಕ್ಕೆ ಬಾರದ ಅಂಬುಲೆನ್ಸ್ – 4 ದಿನದ ಹಸುಳೆ ಸಾವು

ಮೈಸೂರು: ಸಕಾಲಕ್ಕೆ ಅಂಬುಲೆನ್ಸ್ (Ambulance) ಬಾರದ ಕಾರಣ 4 ದಿನದ ಹಸುಳೆ ಸಾವಿಗೀಡಾಗಿರುವ ದಾರುಣ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಬುಂಡನಮಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶೀಲಾ ಮತ್ತು ಮಹದೇವಸ್ವಾಮಿ ದಂಪತಿಯ ನಾಲ್ಕು ದಿನದ ಮಗು ಸಾವನ್ನಪ್ಪಿದೆ. ಉಸಿರಾಟದ ತೊಂದರೆಯಿಂದ ಬೇಗೂರು ಆಸ್ಪತ್ರೆಗೆ ಮಗುವನ್ನು (Baby) ಪೋಷಕರು ಕರೆದೊಯ್ದಿದ್ದರು. ಬೇಗೂರಲ್ಲಿ ಮೂಲ ಸೌಕರ್ಯ ಕೊರತೆ ಕಾರಣ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರ ಸೂಚನೆ ನೀಡಿದ್ದರು.
ಅಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿದ್ದಕ್ಕೆ ಸೂಕ್ತ ಸ್ಪಂದನೆ ಸಿಗದ ಕಾರಣ ಬೈಕಿನಲ್ಲಿಯೇ (Bike) ಮಗುವನ್ನ ಹೆಚ್.ಡಿ.ಕೋಟೆಗೆ ಕರೆದೊಯ್ದಲು ಪೋಷಕರು ಯತ್ನಿಸಿದ್ದಾರೆ. ಮಗು ಬಾಯಿಗೆ ಉಸಿರು ಊದಿ ಜೀವ ಉಳಿಸಲು ಹರಸಾಹಸ ಮಾಡಲಾಗಿದೆ. ಮಾರ್ಗ ಮಧ್ಯೆ ಬಂದ ಅಂಬುಲೆನ್ಸ್ ಕಂಡು ಪೋಷಕರ ಸಂತಸಗೊಂಡರು. ಅದರೆ ಅಂಬುಲೆನ್ಸ್ನಲ್ಲಿ ಮೂಲಸೌಕರ್ಯ ಇಲ್ಲದೆ ಮಗು ನರಳಾಡಿದೆ. ಹೆಚ್.ಡಿ.ಕೋಟೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ.
ಅಂಬುಲೆನ್ಸ್ನಲ್ಲಿ ಮೂಲಸೌಕರ್ಯ ಇಲ್ಲದಿರುವುದನ್ನ ಕೇಳಿದ್ದಕ್ಕೆ ಸಿಬ್ಬಂದಿ ಹಾರಿಕೆ ಉತ್ತರ ನೀಡಿ, ಅಂಬುಲೆನ್ಸ್ನಿಂದ ಇಳಿಸಿ ವಾಪಸ್ ಹೊರಟು ಹೋಗಿದ್ದಾರೆ. ಬೇಸತ್ತ ಮಗುವಿನ ಪೋಷಕರು ಬೈಕಿನಲ್ಲಿಯೇ ಮಗು ಶವ ತೆಗೆದುಕೊಂಡು ಹೋಗಿದ್ದಾರೆ.