ಶುಕ್ರವಾರ, ಏಪ್ರಿಲ್ 26, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾಗಿ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪೀಠಾರೋಹಣ

Twitter
Facebook
LinkedIn
WhatsApp
ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾಗಿ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪೀಠಾರೋಹಣ

ವಣಬೆಳಗೊಳ: ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜೈನಕಾಶಿ (Jain Kashi) ಎಂದೇ ಕರೆಯಲ್ಪಡುವ ಹಾಸನ (Hassan) ಜಿಲ್ಲೆಯ ಶ್ರವಣಬೆಳಗೊಳದ (Shravanabelagola) ದಿಗಂಬರ ಜೈನ ಮಠದ ನೂತನ ಭಟ್ಟಾರಕರಾಗಿ ಶ್ರೀ ಚಾರೂಕೀರ್ತಿ ಆಗಮಕೀರ್ತಿ ಭಟ್ಟಾಕರ ಸ್ವಾಮೀಜಿ (Charukeerthi Agam Kirti Swamiji) ನೇಮಕಗೊಂಡಿದ್ದಾರೆ. ಜೈನ ಮಠದ 20 ನೇ ಭಟ್ಟಾರಕರಾಗಿ, ಇಂದು (ಮಾ.27) ರಾಜ್ಯದ ಜೈನ ಮಠಗಳ ಭಟ್ಟಾರಕರ ಸಮ್ಮುಖದಲ್ಲಿ ಶ್ರೀ ಚಾರೂಕೀರ್ತಿ ಆಗಮಕೀರ್ತಿ ಭಟ್ಟಾಕರ ಪಟ್ಟಾಭಿಷೇಕ ನೆರವೇರಿತು.

ನಾಲ್ಕು ತಿಂಗಳ ಹಿಂದೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆಗಮ ಇಂದ್ರ ಇವರಿಗೆ ಕ್ಷುಲ್ಲಕ ದೀಕ್ಷೆ ನೀಡುವ ಮೂಲಕ ಆಗಮಕೀರ್ತಿ ಎಂದು ನಾಮಕರಣ ಮಾಡಿದ್ದರು. ತಮ್ಮ ಮಠದಲ್ಲಿಯೇ ಅವರಿಗೆ ಆಶ್ರಯ ನೀಡಿ ಮಠದ ಪರಂಪರೆ, ಸಂಸ್ಕಾರ, ಕ್ಷೇತ್ರದ ಪರಿಚಯ ಮಾಡಿಸಿದ್ದರು. ಉತ್ತರಾಧಿಕಾರಿ ನೇಮಕ ಮಾಡಿದ ಮೂರು ತಿಂಗಳಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಕಾಲಿಕವಾಗಿ ಜಿನೈಕ್ಯರಾದರು. ಶ್ರೀಮಠದ ಭಟ್ಟಾರಕ ಪರಂಪರೆ ಕ್ರಿ.ಶ.904 ರಿಂದಲೂ ಬೆಳೆದು ಬಂದಿದೆ.

ಇವರು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಅಶೋಕ್ ಕುಮಾರ್ ಇಂದಿರಾ ಮತ್ತು ಅನಿತಾ ಅಶೋಕ್ ಕುಮಾರ್ ದಂಪತಿಗಳ ಪುತ್ರ. 2001ರ ಫೆಬ್ರವರಿ 26ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸಾಗರ ಪಟ್ಟಣದ ರೋಟರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಎಂಜೆಎನ್ ಪೈ ಪ್ರೌಢಶಾಲೆಯಲ್ಲಿ ಮತ್ತು ಪದವಿಪೂರ್ವ ಶಿಕ್ಷಣವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದರು. ಪದವಿ ಶಿಕ್ಷಣವನ್ನು ಎಲ್​ಬಿ ಮತ್ತು ಎಸ್ ಬಿ ಎಸ್ ಕಾಲೇಜು ಸಾಗರದಲ್ಲಿ ಪಡೆದಿದ್ದಾರೆ. ಗಣಕಯಂತ್ರ ತರಬೇತಿಯನ್ನು ಪಡೆದಿರುವ ಇವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ