ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶ್ರದ್ಧಾ ಹತ್ಯೆ ಪ್ರಕರಣ ಬಯಲಾಗುವ ಮುನ್ನವೇ ಅಫ್ತಾಬ್ ಹೆತ್ತವರು ಪರಾರಿ! ತೆರೆದುಕೊಳ್ಳುತ್ತಿದೆ ಒಂದೊಂದೇ ನಿಗೂಢತೆ.!

Twitter
Facebook
LinkedIn
WhatsApp
ಶ್ರದ್ಧಾ ಹತ್ಯೆ ಪ್ರಕರಣ ಬಯಲಾಗುವ ಮುನ್ನವೇ ಅಫ್ತಾಬ್ ಹೆತ್ತವರು ಪರಾರಿ! ತೆರೆದುಕೊಳ್ಳುತ್ತಿದೆ ಒಂದೊಂದೇ ನಿಗೂಢತೆ.!

ಮುಂಬೈ (ಮಹಾರಾಷ್ಟ್ರ): ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ಹೆತ್ತವರು ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್‌ನ ಮಾಣಿಕ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಆರೋಪಿಯ ಕುಟುಂಬಸ್ಥರೆಲ್ಲರೂ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಅವರ ಪತ್ತೆಗಾಗಿ ಬಲೆ ಬೀಸಿದ್ಧಾರೆ. ಅಚ್ಚರಿಯ ವಿಷಯವೆಂದರೆ ಪ್ರಕರಣ ಬೆಳಕಿಗೆ ಬರುವ ಮುನ್ನವೇ ಅಫ್ತಾಬ್‌ನ ಹೆತ್ತವರು ಪರಾರಿಯಾಗಿದ್ದು, ಕೃತ್ಯದ ಬಗ್ಗೆ ಅವರಿಗೆ ತಿಳಿದಿತ್ತಾ ಎಂಬ ಸಂಶಯ ಮೂಡಿದೆ..!

ಮಗಳು ಸಂಪರ್ಕ ಸಿಗದ ಹಿನ್ನಲೆ ಶ್ರದ್ಧಾ ತಂದೆ, ದೆಹಲಿಗೂ ಮುನ್ನ ಪಾಲ್ಘರ್ ಮಾಣಿಕ್‌ಪುರ ಠಾಣೆಯಲ್ಲಿ ಮೊದಲು ನಾಪತ್ತೆ ದೂರು ದಾಖಲಿಸಿದ್ದರು. ಹೀಗಾಗಿ ಮಾಣಿಕ್‌ಪುರ ಪೊಲೀಸರು ಅಫ್ತಾಬ್‌ನನ್ನು ವಿಚಾರಣೆಗೆ ಕರೆಸಿಕೊಂಡಿದ್ದರು. ಅಕ್ಟೋಬರ್ 26 ರಂದು, ಮಾಣಿಕ್‌ಪುರ ಪೊಲೀಸರು ಅಫ್ತಾಬ್‌ನ ಹೇಳಿಕೆಯನ್ನು ಮೌಖಿಕವಾಗಿ ತೆಗೆದುಕೊಂಡಿದ್ದಾರೆ, ಈ ವೇಳೆ ಜಗಳದ ನಂತರ ಶ್ರದ್ಧಾ ಫ್ಲಾಟ್‌ನಿಂದ ಹೊರನಡೆದಿದ್ದಾಳೆ ಎಂದಿದ್ದು, ತಾನು ಮತ್ತು ಶ್ರದ್ಧಾ ಇನ್ನು ಮುಂದೆ ಒಟ್ಟಿಗೆ ಇರುವುದಿಲ್ಲ” ಎಂದು ಹೇಳಿದ್ದಾನೆ.

ನವೆಂಬರ್ 3 ರಂದು ಪೊಲೀಸರು ಅಫ್ತಾಬ್‌ಗೆ ಎರಡನೇ ಬಾರಿ ಕರೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಣಿಕಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ನವೆಂಬರ್ 8 ರಂದು ದೆಹಲಿಗೆ ತೆರಳಿದ್ದರು.

ಶೃದ್ದಾ ತನ್ನ ಫೋನ್ ಅನ್ನು ಮಾತ್ರ ತನ್ನೊಂದಿಗೆ ಕೊಂಡೊಯ್ದಿದ್ದಾಳೆ. ಆದರೆ ಅವಳ ವಸ್ತುಗಳನ್ನು ತನ್ನ ಫ್ಲಾಟ್‌ನಲ್ಲಿ ಬಿಟ್ಟು ಹೋಗಿದ್ದಾನೆ. ಆಕೆ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಫ್ತಾಬ್ ಹೇಳಿಕೊಂಡಿದ್ದಾನೆ .

ನವೆಂಬರ್ 3 ರಂದು ಆತನಿಂದ ಲಿಖಿತ ಹೇಳಿಕೆಯನ್ನು ತೆಗೆದುಕೊಂಡಿದ್ದು, ಪೊಲೀಸರು ಈ ಸಮನ್ಸ್‌ನಲ್ಲಿ ದಾಖಲೆಗಳು, ಬ್ಯಾಂಕ್ ಖಾತೆ ವಿವರಗಳು ಮತ್ತು ಮೊಬೈಲ್ ಫೋನ್ ಸ್ಥಳವನ್ನು ಸಂತ್ರಸ್ತ ಶ್ರದ್ಧಾಗೆ ಸೇರಿದ ಮಾಹಿತಿ ಎಲ್ಲವನ್ನೂ ದಾಖಲಿಸಿದ್ದರು.

ಈ ನಡುವೆ ಮಾಣಿಕಪುರ ಪೊಲೀಸರು ಮೊದಲ ಸಮನ್ಸ್ ನೀಡಿದ ಬಳಿಕ, ಯಾರಿಗೂ ತಿಳಿಸದೆ ಇವರ ಕುಟುಂಬ ತರಾತುರಿಯಲ್ಲಿ ಅಜ್ಞಾತ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಕುಟುಂಬ ಶಿಫ್ಟ್ ಆಗುವ ಮೊದಲು ಅಫ್ತಾಬ್ ಕೂಡಾ ಮನೆಗೆ ಬಂದಿದ್ದು, ಆತನಿಗೆ ಬೇಕಾಗಿದ್ದ ಅಗತ್ಯ ವಸ್ತುಗಳನ್ನು ತನ್ನೊಂದಿಗೆ ಒಯ್ದಿದ್ದ.

ಪೊಲೀಸ್ ತನಿಖೆ ವೇಳೆ ಶ್ರದ್ಧಾ ಅವರ ಬ್ಯಾಂಕ್ ಖಾತೆಯ ಆನ್‌ಲೈನ್ ವಹಿವಾಟಿನ ಸಹಾಯದಿಂದ ಅಫ್ತಾಬ್‌ನ ಸುಳ್ಳು ಬಹಿರಂಗವಾಗಿದೆ.

 ಶ್ರದ್ಧಾ ಅವರ ಮೊಬೈಲ್ ಫೋನ್ ಪಾಸ್‌ವರ್ಡ್ ತನಗೆ ತಿಳಿದಿತ್ತು ಎಂದು ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದು, ಮೇ 26 ರಂದು ಆಕೆಯ ಖಾತೆಯಿಂದ 54,000 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಅದರೆ ಮೇ 22 ರ ನಂತರ ಶ್ರದ್ಧಾಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅಫ್ತಾಬ್ ಹಿಂದಿನ ವಿಚಾರಣೆ ಸಂದರ್ಭ ಹೇಳಿದ್ದು,ಮೇ 26 ರಂದು ನಡೆದ ಬ್ಯಾಂಕ್ ವರ್ಗಾವಣೆಯ ಸ್ಥಳ ಮೆಹ್ರೌಲಿ ಪೊಲೀಸ್ ಠಾಣೆ ಪ್ರದೇಶವಾಗಿತ್ತು.

 ಇದಲ್ಲದೆ ಮೇ 31 ರಂದು ಸಂತ್ರಸ್ತೆಯ ಇನ್‌ಸ್ಟಾಗ್ರಾಮ್ ಖಾತೆಯಿಂದ ಶ್ರದ್ಧಾ ಮತ್ತು ಆಕೆಯ ಸ್ನೇಹಿತನ ನಡುವೆ ಚಾಟ್ ನಡೆದಿದೆ. ಶ್ರದ್ಧಾ ಅವರ ಫೋನ್ ಇರುವ ಸ್ಥಳವನ್ನು ಪೊಲೀಸರು ಪತ್ತೆ ಮಾಡಿದಾಗ ಅದು ದೆಹಲಿಯ ಮೆಹ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ ಎಂದು ತಿಳಿದುಬಂದಿತ್ತು.

ಶ್ರದ್ಧಾ ತನ್ನ ಫೋನ್ ಅನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಳು ಎಂದು ಅವನು ಹೇಳಿದ ನಂತರವೂ ಶ್ರದ್ಧಾ ಮೊಬೈಲ್ ಲೋಕೇಶನ್ ಪ್ಲಾಟ್ ನಲ್ಲಿ ತೋರಿಸಿದ್ದು ಬಳಿಕ ನಿಜಾಂಶ ಬೆಳಕಿಗೆ ಬಂದಿದೆ.

ಹತ್ಯೆಗೆ ಒಂದು ವಾರದ ಮೊದಲು (ಮೇ 18ರ ಮೊದಲೇ ) ಶ್ರದ್ಧಾಳನ್ನು ಕೊಲ್ಲಲು ತಾನು ಮನಸ್ಸು ಮಾಡಿದ್ದೆ. ಆದರೆ ಅಂದು ಸಾಧ್ಯವಾಗಿರಲಿಲ್ಲ ಎಂದು ಅಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ