ಶುಕ್ರವಾರ, ಏಪ್ರಿಲ್ 19, 2024
ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?-ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶೌಚಕ್ಕೆ ಬಂದ ಯುವತಿಯರ ಖಾಸಗಿ ದೃಶ್ಯ ಸೆರೆ ಹಿಡಿದ ವಿದ್ಯಾರ್ಥಿ

Twitter
Facebook
LinkedIn
WhatsApp
ಶೌಚಕ್ಕೆ ಬಂದ ಯುವತಿಯರ ಖಾಸಗಿ ದೃಶ್ಯ ಸೆರೆ ಹಿಡಿದ ವಿದ್ಯಾರ್ಥಿ

ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಮಹಿಳಾ ಶೌಚಾಲಯಕ್ಕೆ ಒಳನುಗ್ಗಿ ರಹಸ್ಯವಾಗಿ ವಿದ್ಯಾರ್ಥಿನಿಯರ ಖಾಸಗಿ ದೃಶ್ಯ ಚಿತ್ರೀಕರಿಸುತ್ತಿದ್ದ ಯುವಕ ಕೊನೆಗೂ ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತನ ಮೊಬೈಲ್‌ ಪರಿಶೀಲಿಸಿದಾಗ 1,200ಕ್ಕೂ ಹೆಚ್ಚು ಯುವತಿಯರ ಖಾಸಗಿ ದೃಶ್ಯವಿರುವ ಫೋಟೋ, ವಿಡಿಯೋ ಪತ್ತೆಯಾಗಿದೆ.

ದ್ವಾರಕಾನಗರದ ನಿವಾಸಿ ಉತ್ತರ ಭಾರತ ಮೂಲದ ಶುಭಂ ಆಜಾದ್‌(21) ಬಂಧಿತ. ಹೊಸಕೆರೆಹಳ್ಳಿಯ ಖಾಸಗಿ ಕಾಲೇಜೊಂದರಲ್ಲಿ 5ನೇ ಸೆಮಿಸ್ಟರ್‌ ಬಿಬಿಎ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ.

ಆರೋಪಿಯು ಕಾಲೇಜಿನ ಒಂದು ಮಹಿಳಾ ಶೌಚಾಲಯದಲ್ಲಿ ಅವಿತುಕೊಳ್ಳುತ್ತಿದ್ದ. ಶೌಚಕ್ಕಾಗಿ ವಿದ್ಯಾರ್ಥಿನಿಯರು ಬರುವ ವೇಳೆ ತಾನು ಅವಿತು ಕುಳಿತ ಪಕ್ಕದ ಶೌಚಾಲಯದ ಮೇಲೆ ಹತ್ತಿ ವಿದ್ಯಾರ್ಥಿನಿಯರ ಗಮನಕ್ಕೆ ಬಾರದಂತೆ ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದ. ನ.13ರಂದು ಸಂಜೆ ಇಬ್ಬರು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋದ ವೇಳೆ 2 ಶೌಚಾಲಯಗಳೂ ಒಳಗಿನಿಂದ ಲಾಕ್‌ ಆಗಿದ್ದವು. ಹೀಗಾಗಿ ಇವರು ಕಾಯುತ್ತಿದ್ದಾಗ, ಆರೋಪಿಯು ಶೌಚಗೃಹದ ಮೇಲಿಂದ ಮೊಬೈಲ್‌ನಲ್ಲಿ ರಹಸ್ಯವಾಗಿ ವಿಡಿಯೋ ಸೆರೆಹಿಡಿಯುವುದನ್ನು ಗಮನಿಸಿ ಹೌಹಾರಿದ್ದರು.

ಇದನ್ನು ಕಂಡ ಆರೋಪಿಯು ಆತಂಕದಿಂದ ಶೌಚಾಲಯದ ಒಳಗೆ ಕುಳಿತುಕೊಂಡು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇಬ್ಬರು ಯುವತಿಯರೂ ಜೋರಾಗಿ ಬಾಗಿಲು ಬಡಿದಾಗ ಬೇರೆ ದಾರಿ ಕಾಣದೇ ಬಾಗಿಲು ತೆಗೆದು ಹೊರಗೆ ಓಡಿ ಹೋಗಿದ್ದ. ವಿದ್ಯಾರ್ಥಿನಿಯರು ಮೇಲಧಿಕಾರಿಗಳಿಗೆ ಈ ವಿಚಾರ ತಿಳಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯು ಮಹಿಳಾ ಶೌಚಾಲಯದ ಬಳಿ ಇರುವ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಯ ಭಾವ ಚಿತ್ರ ಕಂಡು ಬಂದಿತ್ತು. ಈ ಭಾವಚಿತ್ರವನ್ನು ಕೂಡಲೇ ಕಾಲೇಜಿನ ಎಲ್ಲ ವಿಭಾಗಕ್ಕೂ ಕಳುಹಿಸಿ ಗುರುತಿಸುವಂತೆ ತಿಳಿಸಿದಾಗ ಬಿಬಿಎ ವಿಭಾಗದ ಮುಖ್ಯಸ್ಥರು ಆರೋಪಿ ಶುಭಂ ಆಜಾದ್‌ನ ವಿವರವನ್ನು ಕಾಲೇಜಿನ ಆಡಳಿತ ಮಂಡಳಿಯ ಅಧಿಕಾರಿಗಳಿಗೆ ನೀಡಿದ್ದರು. ಕೂಡಲೇ ಶುಭಂನನ್ನು ಕರೆದು ವಿಚಾರಣೆ ಮಾಡಿದಾಗ ಆತ ಸತ್ಯ ಬಾಯ್ಬಿಟ್ಟಿ ದ್ದಾನೆ. ವಿದ್ಯಾರ್ಥಿನಿಯರು ಶೌಚಾಲಯ ದೊಳಗೆ ಬಂದು ಬಟ್ಟೆ ತೆಗೆಯುವ ಸಂದರ್ಭದಲ್ಲಿ ವಿಡಿಯೋ ಮಾಡಿಕೊಂಡಿರುತ್ತೇನೆ. ಇದೇ ರೀತಿ 1,200 ವಿಡಿಯೋಗಳು ನನ್ನ ಮೊಬೈಲ್‌ ನಲ್ಲಿವೆ ಎಂದು ಹೇಳಿದ್ದ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ