74ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್ ರಚಿಸಿ ಶುಭಾಶಯ ಕೋರಿದ ಗೂಗಲ್
ಭಾರತವು ಇಂದು ತನ್ನ 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಗೂಗಲ್ ಅದ್ಭುತವಾದ ಡೂಡಲ್ ಅನ್ನು ರಚಿಸಿ ಶುಭಾಶಯ ತಿಳಿಸಿದೆ. ಗುಜರಾತ್‌ನ ಅಹಮದಾಬಾದ್‌ನ ಅತಿಥಿ ಕಲಾವಿದ ಪಾರ್ಥ್ ಕೊಥೇಕರ್ ಅವರು ಸಿದ್ಧಪಡಿಸಿದ ಡೂಡಲ್‌ನಲ್ಲಿ ಹ್ಯಾಂಡ್ ಕಟ್ ಪೇಪರ್ ಕಲಾಕೃತಿ ಗೋಚರಿಸುತ್ತದೆ. ಇಂದಿನ ಗೂಗಲ್ ಡೂಡಲ್‌ನಲ್ಲಿ ರಾಷ್ಟ್ರಪತಿ ಭವನ (ರಾಷ್ಟ್ರಪತಿ ವಾಸಿಸುವ ಸ್ಥಳ), ಇಂಡಿಯಾ ಗೇಟ್, ಸಿಆರ್‌ಎಫ್‌ಪಿ ಕವಾಯತು ತಂಡ ಮತ್ತು ಮೋಟಾರ್‌ಸೈಕ್ಲಿಸ್ಟ್‌ಗಳು ಸೇರಿದಂತೆ ಗಣರಾಜ್ಯೋತ್ಸವದ ಪರೇಡ್‌ನ ಹಲವಾರು ಅಂಶಗಳನ್ನು ಹೊಂದಿದೆ.
1950 ರಲ್ಲಿ ಈ ದಿನದಂದು ಸಂವಿಧಾನದ ಅಂಗೀಕಾರದೊಂದಿಗೆ ಭಾರತವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ಎಂದು ಘೋಷಿಸಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನವದೆಹಲಿಯಲ್ಲಿ ಕರ್ತವ್ಯದ ಹಾದಿಯಿಂದ 74 ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ.
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ಕರ್ತವ್ಯ ಪಥದಲ್ಲಿ ಸಾಗಲಿದೆ. ಮೊದಲು ಇದನ್ನು ರಾಜಪಥ್ ಎಂದು ಕರೆಯಲಾಗುತ್ತಿತ್ತು. ಈ ಜನರು ವಿವಿಐಪಿ ಬದಲಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ. ಮೊದಲ ಬಾರಿಗೆ ವಿವಿಐಪಿಗಳು ಪರೇಡ್ ವೀಕ್ಷಿಸಲು ಮೊದಲ ಸಾಲಿನಲ್ಲಿ ಇರುವುದಿಲ್ಲ.
ಅಗ್ನಿವೀರರು ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದರೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಹುತಾತ್ಮ ಯೋಧರಿಗೆ ಪುಷ್ಪನಮನ ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ನಂತರ ಪಥಸಂಚಲನ ವೀಕ್ಷಿಸಲು ಜನಪ್ರತಿನಿಧಿಗಳು ಮಾರ್ಗದಲ್ಲಿರುವ ಗೌರವ ವಂದನಾ ವೇದಿಕೆಗೆ ತೆರಳುವರು.
ರಾಷ್ಟ್ರಧ್ವಜವನ್ನು ಹಾರಿಸಿ ನಂತರ 21 ಗನ್ ಸೆಲ್ಯೂಟ್‌ನೊಂದಿಗೆ ರಾಷ್ಟ್ರಗೀತೆಯನ್ನು ಹೇಳಲಾಗುತ್ತದೆ. 105 ಹೆಲಿಕಾಪ್ಟರ್ ಘಟಕದ ನಾಲ್ಕು Mi-17 1V/V5 ಹೆಲಿಕಾಪ್ಟರ್‌ಗಳು ಕರ್ತವ್ಯ ಪಥದಲ್ಲಿರುವವರ ಮೇಲೆ ಪುಷ್ಪವೃಷ್ಟಿ ಮಾಡಲಿದೆ.