ಶುಕ್ರವಾರ, ಏಪ್ರಿಲ್ 19, 2024
ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶೀಘ್ರದಲ್ಲೇ ಕರ್ನಾಟಕದಲ್ಲಿ ಆ್ಯಪಲ್ ತಯಾರಿಕಾ ಘಟಕ: ಇನ್ನುಂದೆ ರಾಜ್ಯದಲ್ಲೇ ತಯಾರಾಗುತ್ತೆ ಐಫೋನ್​ಗಳು

Twitter
Facebook
LinkedIn
WhatsApp
220908194114 apple shift 0908

ಭಾರತದಲ್ಲಿ ಆ್ಯಪಲ್ ಐಫೋನ್ (Apple iPhone) ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಅತಿದೊಡ್ಡ ಘಟಕವು ಕರ್ನಾಟಕದಲ್ಲಿ ಆರಂಭವಾಗಲಿದೆ. ಈ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್​ಗೆ ರಿಟ್ವೀಟ್ ಮಾಡಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯ ಜೊತೆಗೆ ರಾಜ್ಯದಲ್ಲಿ ಸಾಕಷ್ಟು ಅವಕಾಶಗಳು ತೆರೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ದೂರದೃಷ್ಟಿಯ ನೇತೃತ್ವದಲ್ಲಿ 5 ಟ್ರಿಲಿಯನ್ ಆರ್ಥಿಕತೆಗೆ ರಾಜ್ಯ ಸರ್ಕಾರ ಕೂಡ ಪಾಲು ನೀಡಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಆ್ಯಪಲ್​ ಕಂಪನಿಯು ಕ್ರಮೇಣ ಭಾರತದಲ್ಲಿ ವಿಸ್ತರಿಸುತ್ತದೆ. ಇದಲ್ಲದೆ ಈಗಾಗಲೇ ಚೀನಾದಲ್ಲಿರುವಂತಹ ಉತ್ಪಾದನೆ ಮಟ್ಟವನ್ನು ಕಡಿಮೆ ಮಾಡುವ ನಿರ್ಧಾರವನ್ನು ಕೈಗೊಂಡು ನಂತರದಲ್ಲಿ ಭಾರತದಲ್ಲೇ ಆ್ಯಪಲ್ ಸಾಧನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. 2017ರ ಮೇನಲ್ಲಿ ಬೆಂಗಳೂರಿನಲ್ಲಿ ತನ್ನ ಗುತ್ತಿಗೆ ತಯಾರಿಕಾ ಕಂಪನಿ ವಿಸ್ಟ್ರಾನ್ಸ್‌ ಫೆಸಿಲಿಟಿನಲ್ಲಿ ಐಪೋನ್‌ ಎಸ್‌ಪಿ ಮೊಬೈಲ್‌ ಮೂಲಕ ಆ್ಯಪಲ್‌ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಆರಂಭಿಸಿತು. ನಂತರ ಬಂದ ಆ್ಯಪಲ್‌ನ ಇತರೆ ನಾಲ್ಕು ಮಾಡೆಲ್‌ಗ‌ಳು ಕೂಡ ಭಾರತದಲ್ಲಿ ತಯಾರಾಗಿದೆ.

 

ಭಾರತದಲ್ಲಿ ಆ್ಯಪಲ್ ಐಫೋನ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಅತಿದೊಡ್ಡ ಘಟಕವು ಬೆಂಗಳೂರು ನಗರದ ಸಮೀಪವಿರುವ ಹೊಸೂರಿನಲ್ಲಿ ಆರಂಭವಾಗಲಿದೆ ಎಂದು ಇತ್ತೀಚೆಗಷ್ಟೆ ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದರು. ಜಂಜಾಟಿಯಾ ಗೌರವ್ ದಿವಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಅವರು, ಬೆಂಗಳೂರು ಸಮೀಪವಿರುವ ತಮಿಳುನಾಡಿಗೆ ಸೇರಿದ ಹೊಸೂರಿನಲ್ಲಿ ಭಾರತದ ಅತಿದೊಡ್ಡ ಸ್ಥಾವರವನ್ನು ಪ್ರಾರಂಭಿಸಲಾಗುತ್ತಿದೆ. ಭಾರತದಲ್ಲಿ ಆ್ಯಪಲ್ ಐಫೋನ್‌ಗಳ ತಯಾರಿಕೆಗಾಗಿ ಟಾಟಾ ಎಲೆಕ್ಟ್ರಾನಿಕ್ಸ್‌ ಸಂಸ್ಥೆಯು ಹೊರಗುತ್ತಿಗೆ ಪಡೆದುಕೊಂಡಿದ್ದು, ಶೀಘ್ರದಲ್ಲೇ ಐಫೋನ್‌ಗಳನ್ನು ತಯಾರಿಲಿದೆ. ಈ ಒಂದೇ ಕಾರ್ಖಾನೆಯಲ್ಲಿ 60,000 ಜನರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದ್ದರು.

ಇನ್ನು ಆ್ಯಪಲ್ ಇಂಕ್​ನ ಐಫೋನ್ ಅನ್ನು ಬೆಂಗಳೂರಿನಲ್ಲಿ ತಯಾರಿಸುವ ತೈವಾನ್​ನ ತೈಪೆಯಿಯ ವಿಸ್ಟ್ರಾನ್​ ಕಂಪನಿಯ ಘಟಕವನ್ನು ಖರೀದಿಸಲು ಟಾಟಾ ಸಮೂಹ ಮುಂದಾಗಿದ್ದು, ಒಪ್ಪಂದ ಬಹುತೇಕ ಅಂತಿಮಗೊಂಡಿದೆ. ಮಾರ್ಚ್​ ಅಂತ್ಯದ ವೇಳೆಗೆ ಖರೀದಿ ಪ್ರಕ್ರಿಯೆ ಕೊನೆಗೊಳ್ಳುವ ನಿರೀಕ್ಷೆ ಇದೆ.

ಆ್ಯಪಲ್ ಇಂಕ್​ನ ಐಫೋನ್​ಗಳನ್ನು ಭಾರತದಲ್ಲಿ ಮುಖ್ಯವಾಗಿ ತೈವಾನ್​ನ ವಿಸ್ಟ್ರಾನ್ ಮತ್ತು ಫಾಕ್ಸ್​ಕಾನ್ ಟೆಕ್ನಾಲಜಿ ಸಮೂಹಗಳು ತಯಾರಿಸುತ್ತಿವೆ. ಚೀನಾದಲ್ಲಿಯೂ ಇದೇ ಕಂಪನಿಗಳು ಐಫೋನ್ ತಯಾರಿಸುತ್ತಿವೆ. ಇದೀಗ ಟಾಟಾ ಸಮೂಹ ಐಫೋನ್ ಉತ್ಪಾದನೆ ಆರಂಭಿಸಿದರೆ ಚೀನಾಕ್ಕೆ ಸ್ಪರ್ಧೆಯೊಡ್ಡುವ ಭಾರತದ ಯತ್ನಕ್ಕೆ ಯಶಸ್ಸು ದೊರೆಯಲಿದೆ. ಚೀನಾದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಹಾಗೂ ಅನಿಶ್ಚಿತತೆಯ ಈ ಸಂದರ್ಭದಲ್ಲಿ ಜಾಗತಿಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳು ಭಾರತದ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳುವಂತೆ ಮನವೊಲಿಸುವಲ್ಲಿ ಈ ಒಪ್ಪಂದ ಪೂರಕವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ