ಶಿರಸಿ : ಅಮೆರಿಕಾದಿಂದ ಬಂದು ಮತದಾನ ಮಾಡಿದ ಮಹಿಳೆ!
Twitter
Facebook
LinkedIn
WhatsApp

ಕಾರವಾರ (ಮೇ.10): ಚುನಾವಣೆಯಲ್ಲಿ ಪ್ರತಿ ಮತ ಕೂಡ ಬಹಳ ಇಂಪಾರ್ಟೆಂಟ್. ಆದರೆ, ಒಮ್ಮೊಮ್ಮೆ ನಮ್ಮ ಅಕ್ಕಪಕ್ಕದಲ್ಲಿ ಇರುವವರೇ ಮತದಾನ ಮಾಡೋದಿಲ್ಲ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಉತ್ತರ ಕನ್ನಡದ ಶಿರಸಿಯಲ್ಲಿ ಮಹಿಳೆಯೊಬ್ಬರು ದೂರದ ಅಮೆರಿಕಾದಿಂದ ಬಂದು ತಮ್ಮ ಮತ ಚಲಾವಣೆ ಮಾಡಿದ್ದಾರೆ.
ಶಿರಸಿ ಬೆಟ್ಟದಕೊಪ್ಪದ ನಿವಾಸಿ ಅಶ್ವಿನಿ ರಾಜಶೇಖರ ಭಟ್ ಬುಧವಾರ ತಮ್ಮ ಮತಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನ ನಡೆಸುವ ಸಲುವಾಗಿಯೇ ಅಶ್ವಿನಿ ರಾಜಶೇಖರ ಭಟ್ ದೂರದ ಅಮೇರಿಕಾದಿಂದ ಆಗಮಿಸಿದ. ಕಾನಗೋಡ್ ಮತಗಟ್ಟೆಯಲ್ಲಿ ಮತಹಕ್ಕು ಚಲಾಯಿಸಿ ಸಂಭ್ರಮಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ಮತದಾನ: ಭಟ್ಕಳದಲ್ಲಿ 10.56% ಮತದಾನ, ಕುಮಟಾದಲ್ಲಿ 10% ಮತದಾನ, ಯಲ್ಲಾಪುರದಲ್ಲಿ 8.38% ಮತದಾನ, ಶಿರಸಿಯಲ್ಲಿ 12.01%. ಮತದಾನ, ಹಳಿಯಾಳದಲ್ಲಿ 5.42% ಮತದಾನ, ಕಾರವಾರದಲ್ಲಿ 12% ಮತದಾನ ಆಗಿದೆ.