ಗುರುವಾರ, ಮೇ 2, 2024
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶಾಲಾ ಮಕ್ಕಳಿಗೆ ‘ನಾಳೆ ರೂ.300 ತರಲು ಮರೆಯುವುದಿಲ್ಲ’ ಎಂದು 30 ಬಾರಿ ಬರೆಸಿದ ಶಿಕ್ಷಕ

Twitter
Facebook
LinkedIn
WhatsApp
census1655064901 1

ಮುಂಬೈ: ಥಾಣೆಯ (Thane) ಗೋಧ್‌ಬಂದರ್ ರಸ್ತೆಯಲ್ಲಿರುವ ನ್ಯೂ ಹಾರಿಜಾನ್ ಸ್ಕಾಲರ್ಸ್ ಸ್ಕೂಲ್, ಸುಮಾರು ಐದರಿಂದ ಎಂಟು ವಿದ್ಯಾರ್ಥಿಗಳ (Students) ಪೋಷಕರಿಗೆ ತಮ್ಮ ಡೈರಿ ಮತ್ತು ಗುರುತಿನ ಚೀಟಿಗಳಿಗೆ ಶುಲ್ಕವನ್ನು (Fees) ಪಾವತಿಸಲು ಗಡುವು ಸಮೀಪಿಸುತ್ತಿರುವ ಬಗ್ಗೆ ನೆನಪಿಸಲು ಸೋಮವಾರ (April 17) ವಿದ್ಯಾರ್ಥಿಗಳಿಗೆ ‘ನಾಳೆ ನಾನು ₹300 ತರಲು ಮರೆಯುವುದಿಲ್ಲ’ ಎಂದು ಮೂವತ್ತು ಬಾರಿ ಬರೆಸಿದೆ. ಶುಲ್ಕವನ್ನು ಪಾವತಿಸಲು ಗಡುವು ಏಪ್ರಿಲ್ 20 ಆಗಿತ್ತು. ಶುಲ್ಕವನ್ನು ಕೊಡಲು ಪೋಷಕರಿಗೆ (Parents) ನೆನಪಿಸುವ ನೆಪದಲ್ಲಿ ಮಕ್ಕಳಿಗೆ ಶಿಕ್ಷೆಯನ್ನು ನೀಡಲಾಗಿದೆ. ಇದೆ ವಿಷಯಕ್ಕೆ ಈಗ ಥಾಣೆಯ ಈ ಶಾಲೆ ಭಾರಿ ಟೀಕೆಗೆ ಒಳಗಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ವಿದ್ಯಾರ್ಥಿಯ ಪೋಷಕರು, “ಇದು ಕ್ಷಮಿಸಲಾಗದು ಏಕೆಂದರೆ ಆಘಾತಕ್ಕೊಳಗಾದ ನನ್ನ ಮಗ ಮರುದಿನ ಶಾಲೆಗೆ ಹೋಗಲು ಸಿದ್ಧವಾಗಿಲ್ಲ.” ಶಿಕ್ಷೆಯನ್ನು ಎದುರಿಸಿದ ಇನ್ನೊಬ್ಬ ಪೋಷಕರ ಮಗ, “ಈ ವಾಕ್ಯದ ಬದಲು ಮಕ್ಕಳಿಗೆ ಪಠ್ಯ ಪುಸ್ತಕದಿಂದ ಪ್ಯಾರಾಗ್ರಾಫ್ ಅನ್ನು ಐದು ಬಾರಿ ಬರೆಯುವಂತೆ ಮಾಡಬಹುದಿತ್ತು. ನನ್ನ ಮಗ ಅವಮಾನಕ್ಕೊಳಗಾಗಿದ್ದಾನೆ. ಘಟನೆಯಿಂದ ಉಂಟಾದ ಅವರ ಭಾವನಾತ್ಮಕ ಸಂಕಟವನ್ನು ಯಾರು ಸರಿ ಮಾಡುತ್ತಾರೆ?” ಎಂದು ಶಾಲೆಯ ಈ ನಡತೆಯನ್ನು ಧೂಷಿಸಿದರು.

ಶಿಕ್ಷಕರು ನೀಡಿದ ಈ ಶಿಕ್ಷೆಯನ್ನು ಒಬ್ಬ ವಿದ್ಯಾರ್ಥಿ ಬರೆಯಲು ನಿರಾಕರಿಸಿದಾಗ, “ಶಿಕ್ಷಕರು ಅವಳನ್ನು ತರಗತಿಯ ಮೂಲೆಗೆ ಕಳುಹಿಸಿ ಅಲ್ಲಿ ನಿಂತುಕೊಂಡು ಬರೆಯಲು ಹೇಳಿದರು” ಎಂದು ಇನ್ನೊಬ್ಬ ಪೋಷಕರು ಹೇಳಿದರು.

ಮಂಗಳವಾರ (ಏಪ್ರಿಲ್ 18), ಪೋಷಕರು ಶಾಲೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಘಟನೆಯನ್ನು ಆಡಳಿತ ಮಂಡಳಿಗೆ ವರದಿ ಮಾಡಿದ್ದಾರೆ, ನಂತರ ಉಪ ಪ್ರಾಂಶುಪಾಲರು ಕರೆ ಮಾಡಿ ಅವರೊಂದಿಗೆ ಮಾತನಾಡಿದ್ದಾರೆ. ಪೋಷಕರು, “ನಾನು ಶಾಲೆಗೆ ಪ್ರವೇಶಿಸಿದ್ದು ಇದೇ ಮೊದಲು. ಈ ಹಿಂದೆ ಹಲವು ಬಾರಿ ಶಿಕ್ಷಕರನ್ನು ಭೇಟಿಯಾಗಲು ಬಯಸಿದ್ದೆವು ಆದರೆ ಪೋಷಕರ ವಿನಂತಿಯನ್ನು ನಿರಾಕರಿಸಲಾಗಿತ್ತು. ಶಾಲೆಯೊಳಗೆ ಪ್ರವೇಶಿಸಲು ಸಹ ನಮಗೆ ಅವಕಾಶ ನೀಡಲಿಲ್ಲ. ಆದರೆ, ಈಗ ಉಪ ಪ್ರಾಂಶುಪಾಲರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ, ಆದರೆ ನಮ್ಮ ಮಕ್ಕಳು ಎದುರಿಸಿದ ಅವಮಾನಕ್ಕೆ ಉತ್ತರ ನೀಡಿಲ್ಲ. ಶುಲ್ಕದ ವಿಷಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸದಂತೆ ಈ ಹಿಂದೆ ಪೋಷಕರ ಗುಂಪು ಆಡಳಿತ ಮಂಡಳಿಗೆ ವಿನಂತಿಸಿದೆ’ ಎಂದು ಪೋಷಕರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ