ಶಾಲಾ ಬಸ್‌ನಿಂದ ಬಿದ್ದು 5ರ ಕಂದಮ್ಮ ಸಾವು
ರಾಮನಗರ: ಚಾಲಕ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಶಾಲಾ ಬಸ್‌ನಿಂದ (School Bus) ಕೆಳಗೆ ಬಿದ್ದು 5 ವರ್ಷದ ಬಾಲಕಿ (Girl) ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಬಳಿಯ ಪಿಚ್ಚನಕೆರೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಸಿದ್ದೇಗೌಡಹಳ್ಳಿ ಗ್ರಾಮದ ನಿವಾಸಿ ಸ್ವಾಮಿ ಅವರ ಪುತ್ರಿ ರಕ್ಷಾ (5) ಸಾವನ್ನಪ್ಪಿರುವ ಬಾಲಕಿ. ರಾಮನಗರ (Ramanagara) ತಾಲೂಕಿನ ಬಿಡದಿ ಬಳಿಯ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಬಾಲಕಿ ಯುಕೆಜಿ ತರಗತಿಯಲ್ಲಿ ಓದುತ್ತಿದ್ದಳು. ಸೋಮವಾರ ಸಂಜೆ ಬಾಲಕಿ ಎಂದಿನಂತೆ ಶಾಲೆ ಮುಗಿಸಿ ಬಸ್‌ನಲ್ಲಿ ಬರುತ್ತಿದ್ದಳು. ಶಾಲಾ ಬಸ್‌ನ ಬಾಗಿಲು ಹಾಕಿರದ ಹಿನ್ನೆಲೆಯಲ್ಲಿ ತಿರುವಿನಲ್ಲಿ ಆಕೆ ಬಸ್‌ನಿಂದ ಕೆಳಗೆ ಬಿದ್ದಿದ್ದಾಳೆ.
ಬಸ್‌ನಿಂದ ಬಾಲಕಿ ಹೊರ ಬಿದ್ದ ಪರಿಣಾಮ ಬಸ್‌ನ ಹಿಂದಿನ ಚಕ್ರ ಆಕೆಯ ತಲೆ ಮೇಲೆ ಹರಿದಿದೆ. ಇದರಿಂದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ದುರ್ಘಟನೆಗೆ (Accident) ಶಾಲಾ ಬಸ್ ಸಿಬ್ಬಂದಿಯ ಅಜಾಗರೂಕತೆಯೇ ಕಾರಣ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.