ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಇಂದು ಸಿಎಂ ಬೊಮ್ಮಾಯಿ ಚಾಲನೆ

Twitter
Facebook
LinkedIn
WhatsApp
ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಇಂದು ಸಿಎಂ ಬೊಮ್ಮಾಯಿ ಚಾಲನೆ

ವಿಜಯನಗರ: ವಿಶ್ವ ವಿಖ್ಯಾತ ಹಂಪಿಯಲ್ಲಿ(Hampi Utsav 2023) ಇಂದಿನಿಂದ 3 ದಿನಗಳ ಕಾಲ ಹಂಪಿ ಉತ್ಸವ ಆರಂಭವಾಗಲಿದೆ. ಇಂದು ಸಂಜೆ 5.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರು(Basavaraj Bommai) ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಕಾರ್ಯಕ್ರಮ ಹಿನ್ನೆಲೆ ಹಂಪಿಯ ಎಲ್ಲಾ ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗಿದೆ. ಉತ್ಸವಕ್ಕೆ ನಾಲ್ಕು ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ. ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಸೇರಿದಂತೆ ಸುಮಾರು 6,000 ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಟಿ ವೆಂಕಟೇಶ್ ಮಾತನಾಡಿ, ಉತ್ಸವಕ್ಕೆ ಸುಮಾರು 9 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು, ಸುಮಾರು 15 ಕೋಟಿ ರೂ ವೆಚ್ಚವಾಗಲಿದೆ. ಜಲಕ್ರೀಡೆ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಮತ್ತು ಧ್ವನಿ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಲಿವೆ.

ಕಾರ್ಯಕ್ರಮಗಳ ವಿವರ

ಹಂಪಿ ಬೈ ಸ್ಕೈ: ಬೆಳಿಗ್ಗೆ 10 ಗಂಟೆಯಿಂದ ಕಮಲಾಪುರದ ಹೋಟಲ್ ಮಯೂರ ಭುವನೇಶ್ವರಿ ಆವರಣದಿಂದ ಆರಂಭವಾಗುತ್ತದೆ. ಫಲಪುಷ್ಪ ಪ್ರದರ್ಶನ: ಹಂಪಿ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ನಡೆಯಲಿದೆ. ಆಹಾರ ಮೇಳ: ಮುಖ್ಯ ವೇದಿಕೆ ಗಾಯತ್ರಿ ಪೀಠ ಹಾಗೂ ಹಂಪಿ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದ ಹತ್ತಿರ ನಡೆಯಲಿದೆ. ಕೃಷಿ, ಕರಕುಶಲ, ಕೈಗಾರಿಕೆ ಹಾಗೂ ಪುಸ್ತಕ ಪ್ರದರ್ಶನ: ಹಂಪಿ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ನಡೆಯಲಿವೆ. ಗ್ರಾಮೀಣ ಕ್ರೀಡೆಗಳು (ಕುಸ್ತಿ, ಗುಂಡು/ಚೀಲ ಎತ್ತುವುದು ಹಾಗೂ ಇತರೆ ಕ್ರೀಡೆಗಳು): ಹೊಸ ಮಲಪನಗುಡಿ ಗ್ರಾಮದ ವಿದ್ಯಾರಣ್ಯ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆಯಲಿವೆ. ಸಾಹಸ ಕ್ರೀಡೆಗಳು: ಸಾಸಿವೆ ಕಾಳು ಗಣಪತಿ ಮಂಟಪದ ಮುಂಭಾಗದಲ್ಲಿ ನಡೆಯಲಿವೆ. ಧ್ವನಿ ಮತ್ತು ಬೆಳಕು ಪ್ರದರ್ಶನ: ಸಂಜೆ 7 ಗಂಟೆಗೆ ಕಮಲಮಹಲ್ ಸಮೀಪದ ಗಜಶಾಲೆ ಆವರಣದಲ್ಲಿ ನಡೆಯಲಿದೆ. ಜಲ ಕ್ರೀಡೆಗಳು : ಕಮಲಾಪುರ ಕೆರೆಯಲ್ಲಿ ನಡೆಯಲಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ