ವಿಶ್ವ ದಾಖಲೆಗಾಗಿ ದಟ್ಟ ಮಂಜಿನಲ್ಲಿ ಕುಳಿತು ಯೋಗಾಭ್ಯಾಸ
ಹಾವೇರಿ/ಬೀದರ್ : ವಿಶ್ವದಾಖಲೆಗಾಗಿ ಏಕಕಾಲಕ್ಕೇ 12 ಸಾವಿರ ವಿದ್ಯಾರ್ಥಿಗಳು ಹಾವೇರಿಯ ಕ್ರೀಡಾಂಗಣದಲ್ಲಿ ಭಾನುವಾರ ಮುಂಜಾನೆಯೇ ದಟ್ಟವಾದ ಮಂಜಿನಲ್ಲಿ ಯೋಗಾಭ್ಯಾಸ ನಡೆಸಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವದಾಖಲೆಗಾಗಿ ಯೋಗಾಥಾನ್ ಕಾರ್ಯಕ್ರಮ ನಡೆಯಿತು. ದಟ್ಟವಾದ ಮಂಜಿನಲ್ಲೇ ಕುಳಿತು ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ 12 ಸಾವಿರ ವಿದ್ಯಾರ್ಥಿಗಳು ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಓ ಮೊಹಮ್ಮದ ರೋಷನ್, ಎಸ್ಪಿ ಹನುಮಂತರಾಯ, ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಯೋಗಾಥಾನ್‌ನಲ್ಲಿ ಭಾಗವಹಿಸಿದ್ದರು
ಬೀದರ್‌ನಲ್ಲಿ 3 ಸಾವಿರ ಜನ ಭಾಗಿ: ರಾಜ್ಯಾದ್ಯಂತ ಗಿನ್ನಿಸ್ ದಾಖಲೆಗಾಗಿ ನಡೆಯುತ್ತಿರುವ ಯೋಗಾಥಾನ್ ಕಾರ್ಯಕ್ರಮದಲ್ಲಿ ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) 3 ಸಾವಿರಕ್ಕೂ ಅಧಿಕ ಜನ ಏಕಕಾಲಕ್ಕೆ ಯೋಗದಲ್ಲಿ ಭಾಗಿಯಾದರು. ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಬೀದರ್ ನಗರದ ನೇಹರು ಸ್ಟೇಡಿಯಂನಲ್ಲಿ ಯೋಗಾಥಾನ್ ಕಾರ್ಯಕ್ರಮ ನಡೆಯಿತು.
ಯೋಗಾಥಾನ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಚಾಲನೆ ನೀಡಿದ್ದು, ಎಸ್ಪಿ ಕಿಶೋರ್ ಬಾಬು, ಶಾಸಕ ರಹೀಂಖಾನ್, ಯೋಗಪಟುಗಳು, ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿಗಳು, ಸಾರ್ವಜನಿಕರು ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.