ವಿಶ್ವದ ಅತೀ ದೊಡ್ಡ ಏಸುವಿನ ಪ್ರತಿಮೆಗೆ ಬಡಿದ ಸಿಡಿಲು! ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ ಫೋಟೋಗಳು
ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಬ್ರೆಜಿಲ್‌ನ( Brazil) ರಿಯೋ ಡಿ ಜನೈರೊದ (Rio de Janeiro)ಮೇಲಿರುವ ವಿಶ್ವದ ಅತಿ ದೊಡ್ಡ ಏಸುಕ್ರಿಸ್ತನ ಪ್ರತಿಮೆಗೆ ಸಿಡಿಲು ಬಡಿದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಶುಕ್ರವಾರ ಬ್ರೆಜಿಲ್ ಕರಾವಳಿಗೆ ಫ್ಲ್ಯಾಶ್ ಚಂಡಮಾರುತ (Cyclone Flash) ಅಪ್ಪಳಿಸಿದ ಸಮಯದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. 100 ಅಡಿ ಎತ್ತರದ ಏಸುಕ್ರಿಸ್ತನ ಮೂರ್ತಿಯ ತಲೆಯಿಂದ ಆಕಾಶಕ್ಕೆ ಸಂಪರ್ಕ ಹೊಂದಿರುವಂತೆ ಸಿಡಿಲು ಬಡಿದ ದೃಶ್ಯ ಸೆರೆಯಾಗಿದ್ದು ಇದು ದೈವಿಕ ದೃಶ್ಯ ಎಂಬಂತೆ ಭಾಸವಾಗಿದೆ. ಆದರೆ ಇದರಿಂದ ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ. ಈ ದೃಶ್ಯವನ್ನು ಫರ್ನಾಂಡೋ ಬ್ರಾಗಾ (Fernando Braga) ಎಂಬುವವರು ಸೆರೆಹಿಡಿದಿದ್ದು ತಮ್ಮ ಇನ್‌ಸ್ಟಾಗ್ರಾಂ (Instagram)ಖಾತೆಯಲ್ಲಿ ಹಂಚಿಕೊಂಡು ‘ಡಿವೈನ್ ಲೈಟಿಂಗ್ (ದೈವಿಕ ಬೆಳಕು) ಇಂದು ಶುಕ್ರವಾರ’ ಎಂದು ಬರೆದುಕೊಂಡಿದ್ದಾರೆ.
ಕ್ರೈಸ್ಟ್ ದಿ ರಿಡೀಮರ್ ಪ್ರತಿಮೆಗೆ ಅಪ್ಪಳಿಸಿದ ಮಿಂಚಿನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜಾಗತಿಕವಾಗಿ ಸಂಚಲನ ಸೃಷ್ಟಿಸಿದೆ. ಪ್ರಪಂಚದಾದ್ಯಂತದ ಸಾಮಾಜಿಕ ಮಾಧ್ಯಮ ಬಳಕೆದಾರರು ಉಸಿರುಕಟ್ಟುವ ಚಿತ್ರಗಳಿಂದ ವಿಸ್ಮಯಗೊಂಡಿದ್ದಾರೆ ಮತ್ತು ಮಂತ್ರಮುಗ್ಧರಾಗಿದ್ದಾರೆ. ಫೆಬ್ರವರಿ 10 ರಂದು ಫ್ಲ್ಯಾಷ್ ಪ್ರತಿಮೆಯ ತಲೆಗೆ ಬಡಿದು ಶಿಲ್ಪವನ್ನು ದೈವಿಕ ಆಕೃತಿಯನ್ನಾಗಿ ಪರಿವರ್ತಿಸಿತು. ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನೆಲೆಗೊಂಡಿರುವ ಈ ಪ್ರತಿಮೆಗೆ ಪ್ರತಿ ವರ್ಷ ಸುಮಾರು ಎರಡು ಮಿಲಿಯನ್ ಜನರು ಭೇಟಿ ನೀಡುತ್ತಾರೆ.