ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಮಾನದಲ್ಲಿ ಪ್ರಯಾಣಿಕರ ನಡುವೆ ಬಾಟಲಿಯಿಂದ ಬಡಿದಾಟ ; ವಿಡಿಯೋ ವೈರಲ್

Twitter
Facebook
LinkedIn
WhatsApp
whatsapp account in one phone 2

ಕ್ಯಾನ್ಬೆರಾ: ಕೈರ್ನ್ಸ್‌ನಿಂದ ಆಸ್ಟ್ರೇಲಿಯಾದ (Australia) ಉತ್ತರಕ್ಕೆ ತೆರಳುತ್ತಿದ್ದ ವಿಮಾನದ ತುರ್ತು ಭೂಸ್ಪರ್ಶಕ್ಕೆ ಕಾರಣವಾದ ನಾಲ್ವರು ಪ್ರಯಾಣಿಕರನ್ನ ಬಂಧಿಸಿರುವುದಾಗಿ ಆಸ್ಟ್ರೇಲಿಯನ್ ಫೆಡರಲ್ ಪೊಲೀಸರು (AFP) ಹಾಗೂ ಎನ್‌ಟಿ ಪೊಲೀಸರು (NT Police) ತಿಳಿಸಿದ್ದಾರೆ.

ಇದೇ ತಿಂಗಳ ಏಪ್ರಿಲ್ 20 ರಂದು ಕೈರ್ನ್ಸ್‌ನಿಂದ ಗ್ರೂಟ್ ಐಲ್ಯಾಂಡ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರ ಗುಂಪೊಂದು ಪರಸ್ಪರ ಬಡಿದಾಟಕ್ಕೆ ಮುಂದಾಗಿದೆ. ಈ ವೇಳೆ ಸಹ ಪ್ರಯಾಣಿಕ ಮಹಿಳೆಯೊಬ್ಬಳು ಬಾಟಲಿ ಹಿಡಿದುಕೊಂಡು ಮತ್ತೋರ್ವ ಪ್ರಯಾಣಿಕನಿಗೆ ಹೊಡೆಯಲು ಮುಂದಾಗಿದ್ದಾಳೆ. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ನಡೆಯುತ್ತಿದ್ದಂತೆ ವಿಮಾನ ಕ್ವೀನ್ಸ್ಲ್ಯಾಂಡ್‌ಗೆ ಹಿಂತಿರುಗಿಸಿ, ಮಹಿಳೆಯರ ಮೇಲೆ ಆರೋಪ ಹೊರಿಸಲಾಗಿದೆ. 

ವಿಮಾನದಲ್ಲಿ ಅಸಭ್ಯ ವರ್ತನೆ, ಸಹಜ ಹಲ್ಲೆ ಹಾಗೂ ಕ್ಯಾಬಿನ್ ಸಿಬ್ಬಂದಿಯಿಂದ ಸುರಕ್ಷತಾ ಕ್ರಮಗಳನ್ನ ಪಾಲಿಸುವಲ್ಲಿ ವಿಫಲರಾದ ಮಹಿಳಾ ಪ್ರಯಾಣಿಕರನ್ನ ಗ್ರೂಟ್ ಐಲ್ಯಾಂಡ್‌ನಲ್ಲಿರುವ ಅಲಿಯಾಂಗುಲಾದಲ್ಲಿ ಬಂದಿಳಿದ ನಂತರ ಎನ್‌ಟಿ ಪೊಲೀಸರು ಬಂಧಿಸಿದ್ದಾರೆ. 

23 ವರ್ಷದ ವ್ಯಕ್ತಿಯೊಬ್ಬನ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ. ಇದರಿಂದ ವಿಮಾನಕ್ಕೆ ಹಾನಿಯಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ದುರ್ನಡತೆ ಹಾಗೂ ಕೌಟುಂಬಿಕ ಹಿಂಸಾಚಾರ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಹಾಗಾಗಿ 23 ವರ್ಷದ ಮತ್ತೊಬ್ಬ ಮಹಿಳೆಯ ಮೇಲೆ ನಿಯಮ ಉಲ್ಲಂಘನೆ ಆರೋಪ ಹೊರಿಸಲಾಗಿದೆ. ಇದೇ ವೇಳೆ 22 ವರ್ಷದ ಮತ್ತೊಬ್ಬ ಪ್ರಯಾಣಿಕ ವಾಣಿಜ್ಯ ಔಷಧ ಪೂರೈಕೆ ಹಾಗೂ ಮಾದಕ ವಸ್ತುಗಳನ್ನು ಹೊಂದಿದ್ದಲ್ಲದೇ ಅಸಭ್ಯ ವರ್ತನೆ ತೋರಿದ್ದಾನೆ. ಜೊತೆಗೆ ನಿಷೇಧಿತ ಪ್ರದೇಶದಲ್ಲಿ ಮದ್ಯ ಸಾಗಿಸುತ್ತಿರುವುದು ಕಂಡುಬಂದಿದೆ ಅದಕ್ಕಾಗಿ ಅವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ