ವಿಧಾನಸಭೆ ಚುನಾವಣೆ : ಮುಂಜಾನೆಯಿಂದಲೇ ಎಲ್ಲೆಡೆ ಸಕ್ರೀಯ ರೀತಿಯಲ್ಲಿ ಮತದಾನ ಆರಂಭ
ಬೆಂಗಳೂರು:ಇಂದು ಕರ್ನಾಟಕ ರಾಜ್ಯಾದ್ಯಂತ ಮುಂಜಾನೆಯಿಂದಲೇ ಮತದಾನ ಆರಂಭಗೊಂಡಿದ್ದು ಸಾಕಷ್ಟು ಜನ ಬೆಳಿಗ್ಗೆಯೇ ಮತದಾನ ಮಾಡಿದ್ದು ಉತ್ತಮ ಪ್ರತಿಕ್ರಿಯೆ ಮೂಡಿಬರುತ್ತಿದೆ
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ರಂಭಾಪುರಿ ಮಠದ ಬಾಳೆಹೊನ್ನೂರು ಮಠದ ರಂಭಾಪುರಿ ಶ್ರೀಗಳು ಮೊದಲು ಮತದಾನ ಮಾಡಿದರು. ಆ ಬಳಿಕ ಉಳಿದವರು ಮತದಾನ ಮಾಡುವ ದೃಶ್ಯ ಕಂಡು ಬಂತು.
ಬೈಂದೂರು/ ಕುಂದಾಪುರ: ಕರಾವಳಿ ಭಾಗದಲ್ಲಿ ಮುಂಜಾನೆಯಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು, ಬೈಂದೂರು ವಿಧಾನಸಭಾ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಉಡುಪಿ/ಕಾರ್ಕಳ: ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ತಮ್ಮ ಕುಟುಂಬದೊಂದಿಗೆ ಬಂದು ಬಡಾನಿಡಿಯೂರು ಬಳಿಯ ಬೂತ್ ನಲ್ಲಿ ಮತ ಚಲಾಯಿಸಿದರು. ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ, ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಕಾರ್ಕಳ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಸೇರಿದಂತೆ ಇತರರು ತಮ್ಮ ಮತವನ್ನು ಚಲಾಯಿಸಿದ್ದಾರೆ.
ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುಂಡೂರು ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮೂಡುಬಿದಿರೆ:
ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಮಠದ ಎದುರುಗಡೆಯೇ ಇರುವ ಡಿಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಒಟ್ಟು ಮತಗಟ್ಟೆಗಳು: 58,454
ಚುನಾವಣ ಸಿಬಂದಿ: 4 ಲಕ್ಷ
ಸೂಕ್ಷ್ಮ ಮತಗಟ್ಟೆಗಳು: 11 ಸಾವಿರ +
ಸಖಿ ಮತಗಟ್ಟೆ-996
ದಿವ್ಯಾಂಗ ಮತಗಟ್ಟೆ: 239
ಬುಡುಕಟ್ಟು ಮತಗಟ್ಟೆಗಳು:40
ಯುವಕರು ನಿರ್ವಹಿಸುವ ಮತಗಟ್ಟೆ: 286
ಇವಿಎಂ ಬಳಕೆ
ಬ್ಯಾಲೆಟ್ ಯೂನಿಟ್-75,603
ಕಂಟ್ರೋಲ್ ಯೂನಿಟ್-70,300
ವಿವಿಪ್ಯಾಟ್-76,202
ಮತ ಎಣಿಕೆ ಕೇಂದ್ರಗಳು: 38
ಒಟ್ಟು ಇವಿಎಂ
ಬ್ಯಾಲೆಟ್ ಯೂನಿಟ್-94,841
ಕಂಟ್ರೋಲ್ ಯೂನಿಟ್-82,580
ವಿವಿಪ್ಯಾಟ್-84,145
ಭದ್ರತ ಸಿಬಂದಿ: 1.43 ಲಕ್ಷ