ವಿದ್ಯಾರ್ಥಿನಿಯ ಕೈ ಹಿಡಿದು ಎಳೆದ ಯುವಕನಿಗೆ ಧರ್ಮದೇಟು
Twitter
Facebook
LinkedIn
WhatsApp
ಹಾಸನ: ಕಾಲೇಜು ಮುಗಿಸಿ ಮನೆಗೆ ಹೊರಟಿದ್ದ ವಿದ್ಯಾರ್ಥಿನಿಯ (Student) ಕೈ ಹಿಡಿದು ಎಳೆದ ರೋಡ್ ರೋಮಿಯೋಗೆ ಯುವತಿ ಸೇರಿದಂತೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಹಾಸನ ನಗರದ (Hassan City) ಬಿಎಸ್ಎನ್ಎಲ್ ಭವನದ ಬಳಿ ನಡೆದಿದೆ. ಯುವಕನಿಗೆ ಯುವತಿ ಮತ್ತು ಸಾರ್ವಜನಿಕರು ಧರ್ಮದೇಟು ನೀಡಿರುವ ವಿಡಿಯೋ (Viral Video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊನೆಗೆ ಸ್ಥಳೀಯರು ಯುವಕನನ್ನು ಪೊಲೀಸರಿಗೆ (Police) ಒಪ್ಪಿಸಿದ್ದಾರೆ. ಯುವತಿ ಹಾಸನದ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಪ್ರತಿದಿನ ಹೀಗೆಯೇ ಯುವಕ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದನಂತೆ.
ಯುವಕನ ಕಿರುಕುಳದಿಂದ ಬೇಸತ್ತ ಯುವತಿಯರು ನಿನ್ನೆ ಯುವಕನಿಗೆ ಚಳಿ ಬಿಡಿಸಿದ್ದಾರೆ. ಯುವಕ ಮತ್ತು ಯುವತಿ ಯಾರು ಅನ್ನೋದು ತಿಳಿದು ಬಂದಿದೆ.cvಸದ್ಯ ಈ ವಿಡಿಯೋ ವೈರಲ್ ಆಗಿದೆ. ಹಾಸನ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.vvv