ವಿಟ್ಲ : ಬಾವಿಯೊಂದಕ್ಕೆ ರಿಂಗ್ ಹಾಕಿದ ಬಳಿದ ಕ್ಲಿನಿಂಗ್ ಗೆ ಇಳಿದ ಇಬ್ಬರು ಕಾರ್ಮಿಕರು ಆಕ್ಸಿಜನ್ ಸಿಗದೇ ಸಾವನಪ್ಪಿದ ಘಟನೆ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ.
ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..
Twitter
Facebook
LinkedIn
WhatsApp

ಮೃತರನ್ನು ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ(40) ಮತ್ತು ಮಲಾರ್ ನಿವಾಸಿ ಅಲಿ(24) ಎಂದು ಗುರುತಿಸಲಾಗಿದೆ. ಇಬ್ರಾಹಿಂ ಅವರು ಕಳೆದ 20 ವರ್ಷಗಳಿಂದ ಬಾವಿಗಳಿಗೆ ರಿಂಗ್ ಹಾಕುವ ಕೆಲಸ ನಿರ್ವಹಿಸುತ್ತಿದ್ದರು. ಸುಮಾರು 30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಮೇಲೆ ಬರದೆ ಇದ್ದಾಗ ಮತ್ತೊಬ್ಬರು ನೋಡಲು ತೆರಳಿದ್ದಾರೆ. ಈ ವೇಳೆ ಇಬ್ಬರಿಗೂ ಉಸಿರಾಡಲು ಆಮ್ಲಜನಕ ಸಿಗದೆ ಸಾವನಪ್ಪಿದ್ದಾರೆ.
ಸ್ಥಳೀಯರ ಸಹಾಯದಿಂದ ಮುರಳೀಧರ ಎಂಬವರು ಎರಡು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.