ವಿಟ್ಲ: ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ್ದಕ್ಕೆ ತಂಡದಿಂದ ಹಲ್ಲೆ - ಪ್ರಕರಣ ದಾಖಲು
Twitter
Facebook
LinkedIn
WhatsApp
ವಿಟ್ಲ: ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ ವಿಚಾರವಾಗಿ ತಂಡಯೊಂದು ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಕಂಬ ಗ್ರಾಮದ ಮಂಗಳಪದವು ನಿವಾಸಿ ಖಲಂದರ್ ಅಬ್ಬಾಸ್ ಅವರ ಪುತ್ರ ಮಹಮ್ಮದ್ ಶಾಕೀರ್ ಎಂಬಾತ ನೀಡಿದ ದೂರಿನಂತೆ ಕೆಲಿಂಜ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಾಕೀರ್, ಗುರುವಾರ ಕಾಲೇಜು ಮುಗಿಸಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮನೆಗೆ ಬರುತ್ತಿದ್ದಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಚಾಕಲೇಟು ಬೇಕೆ ಎಂದು ಕೇಳಿದ್ದನೆನ್ನಲಾಗಿದ್ದು, ಇದನ್ನು ಪ್ರಶ್ನಿಸಿ ವೀರಕಂಭ ಗ್ರಾಮದ ಕೆಲಿಂಜ ಎಂಬಲ್ಲಿಗೆ ಬಸ್ ತಲುಪಿದಾಗ ಬಸ್ಸಿಗೆ ಏಕಾಏಕಿಯಾಗಿ ಆರೋಪಿಗಳು ಹಾಗೂ ಇತರ 3 ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಶಾಕೀರ್ ಪೊಲೀಸರಿಗೆ ದೂರು ನೀಡಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.