ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರು ತಮನ್ನಾ
ವಿಜಯ್ ವರ್ಮಾ (Vijay Varma) ಜೊತೆಗಿನ ಡೇಟಿಂಗ್ (Dating) ವಿಚಾರವಾಗಿ ಸಖತ್ ಸುದ್ದಿ ಮಾಡ್ತಿರುವ ಬೆನ್ನಲ್ಲೇ ತಮನ್ನಾ (Tamannaah Bhatia) ಇದೀಗ ಮಲಯಾಳಂ (Mollywood) ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಹೊಸ ಬಗೆಯ ಪಾತ್ರದ ಮೂಲಕ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಇತ್ತೀಚೆಗೆ ಸೌತ್ ಸಿನಿರಂಗದಲ್ಲಿ ಅತೀ ಹೆಚ್ಚು ಚರ್ಚೆಗೆ ಒಳಗಾಗಿರುವ ನಟಿ ಅಂದರೆ ತಮನ್ನಾ ಭಾಟಿಯಾ. ಹೊಸ ವರ್ಷವನ್ನ ಗೋವಾದಲ್ಲಿ ವಿಜಯ್ ವರ್ಮಾಗೆ ಲಿಪ್‌ಲಾಕ್ ಮಾಡುವ ಮೂಲಕ ತಮನ್ನಾ ಸುದ್ದಿಯಲ್ಲಿದ್ದರು. ಮದುವೆಯ ಗುಡ್ ನ್ಯೂಸ್‌ಗಾಗಿ ಕಾಯ್ತಿರುವ ಫ್ಯಾನ್ಸ್ ಸಿನಿಮಾ ಬಗ್ಗೆ ಸಿಹಿ ಸುದ್ದಿ ಸಿಕ್ಕಿದೆ.
ಅರುಣ್ ಗೋಪಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಬಾಂದ್ರಾ’ (Bandra Film) ಚಿತ್ರದಲ್ಲಿ ತಮನ್ನಾ, ದಿಲೀಪ್‌ಗೆ (Actor Dileep) ನಾಯಕಿಯಾಗುವ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ದಿಲೀಪ್‌ಗೆ ಜೋಡಿಯಾಗಿ ರಾಜಕುಮಾರಿ ಕಿಂಡ ಪಾತ್ರದಲ್ಲಿ ಮಿಲ್ಕಿ ಬ್ಯೂಟಿ ಮಿಂಚಲಿದ್ದಾರೆ. ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ.
ವಿಭಿನ್ನ ಕಥೆಯ ಮೂಲಕ ತಮನ್ನಾ ಮಾಲಿವುಡ್‌ಗೆ (Mollywood) ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದಿಂದ ನಟಿ ಮಲಯಾಳಂ ಪ್ರೇಕ್ಷಕರ ಮನ ಗೆಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.